ಪುತ್ತೂರು: ಒಲೆಯಲ್ಲಿ ಮಣ್ಣಿ ತಯಾರಿಸುತ್ತಿರುವ ಸಂದರ್ಭ ನೈಟಿಗೆ ಬೆಂಕಿ ತಾಗಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕಮಲ (59) ಎಂದು ಗುರುತಿಸಲಾಗಿದೆ.
ಮಾ.4 ರಂದು ಮಧ್ಯಾಹ್ನ 1.30 ಗಂಟೆಗೆ ಕಮಲ ಅವರು ಮನೆಯಲ್ಲಿ ತಿನ್ನಲು ಮಣ್ಣಿ ತಯಾರಿಸುತ್ತಿರುವ ಸಮಯ ಆಕಸ್ಮಿಕವಾಗಿ ನೈಟಿಗೆ ಬೆಂಕಿ ತಾಗಿದೆ. ಈ ವೇಳೆ ಮೈತುಂಬಾ ಬೆಂಕಿ ಹರಡಿ ಸುಟ್ಟು ಗಂಭೀರ ಗಾಯವಾಗಿತ್ತು. ಅವರನ್ನು ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ (ಮಾ.5 ರಂದು) 9.00 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.