ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿ ಇರುವ ಕುದ್ರು ನೆಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡಿದೆ ಈ ವೇಳೆ ರೆಸಾರ್ಟ್ ನಲ್ಲಿದ್ದ ಪ್ರವಾಸಿಗರು ಬೆಂಕಿ ಕಾಣುತ್ತಿದ್ದಂತೆ ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಕೂಡಲೇ ಸ್ಥಳೀಯರು ಅಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಉಡುಪಿಯ ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ಕುದ್ರು ನೆಕ್ಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಈ ಸಂದರ್ಭದಲ್ಲಿ ಬಿದರಿನಿಂದ ನಿರ್ಮಿಸಿದ್ದ ಮಹಡಿ, ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ಹತ್ತಿದ್ದನ್ನು ಕಂಡು ಸ್ಥಳೀಯರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ರೆಸಾರ್ಟ್ ಪಕ್ಕದಲ್ಲಿಯೇ ನದಿಯಿದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ನದಿಯ ನೀರನ್ನು ಬಳಸಿ ಸ್ಥಳೀಯ ನಿವಾಸಿಗಳು ರೆಸಾರ್ಟ್ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.ಈ ವೇಳೆ ಸ್ಥಳೀಯರು ರೆಸಾರ್ಟ್ ಅಲ್ಲಿ ಸುರಕ್ಷತಾ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಇದೀಗ ಈ ಒಂದು ಪ್ರಕರಣ ದಾಖಲಾಗಿದೆ.
ಮಂಗಳೂರು/ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದಡಿಯಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್ ಸ್ಟೆಬಲ್ ವೊಬ್ಬರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.
ಚಿನ್ನ ಮತ್ತು ಅಮೂಲ್ಯ ಲೋಹಗಳ ವಶ
ದಾಳಿಯ ವೇಳೆ 40 ಕೆ.ಜಿ ಬೆಳ್ಳಿಯ ಗಟ್ಟಿ ಹಾಗೂ 200 ಮುಖಬೆಲೆ ನೋಟುಗಳ ಬಂಡಲ್ ಗಳು, 50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಲೋಕಾಯುಕ್ತ ಪೊಲೀಸರು ಗುರುವಾರವೂ ಮಧ್ಯಪ್ರದೇಶ ಸಾರಿಗೆ ಇಲಾಖೆಯ ಕಾನ್ ಸ್ಟೆಬಲ್ ವೊಬ್ಬರ ಮನೆ ಮೇಲೆ ದಾಳಿ ನಡೆಸಿ 2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.
ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್ ಪಿ ತಿಳಿಸಿದ್ದಾರೆ.
ಮುಂಬೈ: ಮುಂಬೈ ಕರಾವಳಿಯಲ್ಲಿ ದೋಣಿ ಅಪಘಾತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕ ಜೋಹಾನ್ ಮೊಹಮ್ಮದ್ ನಿಸಾರ್ ಅಹ್ಮದ್ ಪಠಾಣ್ ಅವರ ಶವವನ್ನು ಮೂರು ದಿನಗಳ ಶೋಧ ಕಾರ್ಯಾಚರಣೆಯ ನಂತರ ಶನಿವಾರ ಬೆಳಿಗ್ಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಡಿಸೆಂಬರ್ 18ರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ನಗರದ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾದ ಬಗ್ಗೆ ನೌಕಾಪಡೆ ತನಿಖೆಯನ್ನು ಪ್ರಾರಂಭಿಸಿದೆ. ಶೋಧ ಮತ್ತು ಪಾರುಗಾಣಿಕಾ (ಎಸ್ಎಆರ್) ಕಾರ್ಯಾಚರಣೆಯಲ್ಲಿ ನೌಕಾ ಹೆಲಿಕಾಪ್ಟರ್, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ದೋಣಿಗಳನ್ನು ನಿಯೋಜಿಸಲಾಗಿದೆ. ಎರಡು ಹಡಗುಗಳಲ್ಲಿದ್ದ 113 ಜನರಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಗಾಯಗೊಂಡ ಇಬ್ಬರು ಸೇರಿದಂತೆ 98 ಜನರನ್ನು ರಕ್ಷಿಸಲಾಗಿದೆ.
ನೌಕಾಪಡೆಯ ವಿಮಾನದಲ್ಲಿ ಆರು ಜನರಿದ್ದರು, ಅವರಲ್ಲಿ ಇಬ್ಬರು ಬದುಕುಳಿದಿದ್ದಾರೆ ಎಂದು ಅಧಿಕಾರಿ ವರದಿ ಮಾಡಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ನೌಕಾಪಡೆಯ ದೋಣಿಯು ಎಂಜಿನ್ ಪ್ರಯೋಗಗಳಿಗೆ ಒಳಗಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಮುಂಬೈ ಕರಾವಳಿಯಲ್ಲಿ ಪ್ರಯಾಣಿಕರ ದೋಣಿ ‘ನೀಲ್ ಕಮಲ್’ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ದೋಣಿ ಗೇಟ್ವೇ ಆಫ್ ಇಂಡಿಯಾದಿಂದ ಪ್ರಾಚೀನ ಗುಹೆಗಳಿಗೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿತ್ತು. ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ (ಎಂಎಂಬಿ) ದಾಖಲೆಗಳು ದೋಣಿಯಲ್ಲಿ 84 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಸಾಗಿಸಲು ಅನುಮತಿ ಇತ್ತು ಆದರೆ ಓವರ್ಲೋಡ್ ಆಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಎಂಎಂಬಿ, ತನ್ನ ಸಾಮರ್ಥ್ಯವನ್ನು ಮೀರಿ ಒಳನಾಡಿನ ಹಡಗು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ದೋಣಿಯ ಪರವಾನಗಿಯನ್ನು ರದ್ದುಪಡಿಸಿದೆ. ದೋಣಿಯಲ್ಲಿ ಗರಿಷ್ಠ 90 ಜನರ ಸಾಮರ್ಥ್ಯವಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರು/ಕೀವ್: ಉಕ್ರೇನ್ ನ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜನ್ ನಗರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.
ಇತ್ತೀಚೆಗೆ ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್ ಗಳು ಅದನ್ನು ಭೇದಿಸಿ ದಾಳಿನಡೆಸಿವೆ ಎಂದು ತಿಳಿಸಿದೆ.
9/11 ಶೈಲಿಯ ದಾಳಿ
ಉಕ್ರೇನ್ ದಾಳಿಯು, ಸಪ್ಟೆಂಬರ್ 11, 2001ರಂದು ನ್ಯೂಯಾರ್ಕ್ ವಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ನೆನಪಿಸುವಂತಿದೆ.
ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್ ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.
ಅಲ್ ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉಕ್ರೇನ್ ನ ಈ ದಢೀರ್ ದಾಳಿಯು 9/11ರ ಅಟ್ಯಾಕ್ ಸ್ಮರಿಸುವಂತೆ ಮಾಡಿದೆ.