Thursday, December 1, 2022

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಡ್ಯಾನ್ಸ್ ಮಾಡಿದ್ದಳು ಮಾತ್ರವಲ್ಲ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು.

ಆದರೆ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಬಜರಂಗದಳದ ಕೆಲವು ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿದ್ದರು.

ಜೊತೆಗೆ ದೇವಸ್ಥಾನದೊಳಗೆ ಈ ರೀತಿಯ ರೀಲ್ಸ್‌ ಮಾಡಿ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾಳೆ ಆದ್ದರಿಂದಅವಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

ಘಟನೆಗೆ ಸಂಬಂಧಿಸಿ ನೇಹಾ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಾಸಿದ್ದಾರೆ.

ಬಳಿಕ  ಆ ವೀಡಿಯೋವನ್ನು ಡಿಲೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾಳೆ.

LEAVE A REPLY

Please enter your comment!
Please enter your name here

Hot Topics