FILM
ಕೊನೆಗೂ ಖ್ಯಾತ ಉದ್ಯಮಿ ಜೊತೆ ಮೋಹಕ ತಾರೆ ರಮ್ಯಾ ಮದುವೆ; ಇದು ನಿಜನಾ ?
Published
1 day agoon
ಮಂಗಳೂರು/ಬೆಂಗಳೂರು: ಹಲವಾರು ಸಮಯಗಳಿಂದ ಚಿತ್ರರಂಗದಿಂದ ದೂರವಿರುವ ಮೋಹಕತಾರೆ ರಮ್ಯಾ ಇದೀಗ ಖ್ಯಾತ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ಧಿ ಫುಲ್ ವೈರಲ್ ಆಗುತ್ತಿದೆ.42 ವರ್ಷವಾದ್ರೂ ಸಿಂಗಲ್ ಆಗಿರುವ ರಮ್ಯಾ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಹರಿದಾಡುತ್ತಿದೆ.
2024 ರ ನವೆಂಬರ್‌ನಲ್ಲಿ ರಮ್ಯಾ ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಮ್ಯಾ ಉದ್ಯಮಿ ಸಂಜೀವ್‌ಗೆ ಬರ್ತ್‌ಡೇ ವಿಶ್ ಮಾಡಿದ್ದರು.”ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್, ನಿನ್ನೊಂದಿಗೆ ಹೋಗುವ ಪ್ರವಾಸಗಳು ಎಂದಿಗೂ ಅದ್ಭುತ” ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರೂ ಈ ಹಿಂದೆ ರಮ್ಯಾ – ಸಂಜೀವ್ ಜತೆಯಾಗಿ ಪ್ರವಾಸ ಹಾಗೂ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಣೆ ಮಾಡಲು ಹೋಗಿದ್ದರು. ಇದರ ನಡುವೆಯೇ ಸಂಜೀವ್ ರಮ್ಯಾ ಅವರ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಕೂಡ ಹರಿದಾಡಿತ್ತು.
“ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ!! ಇವರು ರಮ್ಯಾ ಅವರನ್ನು ಪ್ರೀತಿಯಿಂದ divs ಅಂತ ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ.ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣಪ್ಪ” ಎಂದು ರಮ್ಯಾ – ಸಂಜೀವ್ ಅವರ ಫೋಟೋ ಎಡಿಟ್ ಮಾಡಿ ಟ್ರೋಲ್ ಪೇಜ್‌ವೊಂದು ಹಾಕಿಕೊಂಡಿದೆ. ರಮ್ಯಾ ಈ ಫೋಟೋವನ್ನು ಇನ್ಸಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡು ‘ಫೇಕ್’ ಎಂದು ಬರೆದುಕೊಂಡಿದ್ದು, ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇನ್ನು ಸಿನಿಮಾದ ವಿಚಾರಕ್ಕೆ ಬಂದರೆ ‘2016’ ನಾಗರಾಹಾವು’ ಚಿತ್ರದ ಬಳಿಕ ರಮ್ಯಾ ಅವರು ಯಾವ ಸಿನಿಮಾದಲ್ಲೂ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದಿದ್ದರು.
FILM
ಖ್ಯಾತ ಬಾಲಿವುಡ್ ನಟಿಯಿಂದ ನಾಗಾದೀಕ್ಷೆ..! ಮಹಾಮಂಡಲೇಶ್ವರಿಯಾಗಿ ಬದಲಾದ ಬಾಲಿವುಡ್ ಹಾಟ್ ಸ್ಟಾರ್..!
Published
2 days agoon
24/01/2025By
NEWS DESK90 ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ ಈಗ ನಾಗಾಸಾದ್ವಿಯಾಗಿ (ಮಾಹಾಮಂಡಲೇಶ್ವರಿಯಾಗಿ)ದೀಕ್ಷೆ ಸ್ವೀಕರಿಸಿದ್ದಾರೆ. ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಿನ್ನರ ಅಖಾಡದಲ್ಲಿ ಈ ದೀಕ್ಷೆ ಸ್ವೀಕರಿಸುವ ಮೂಲಕ ಮಮತಾ ನಂದಗಿರಿ ಮಹಾಮಂಡಲೇಶ್ವರಿಯಾಗಿ ಬದಲಾಗಿದ್ದಾರೆ.
1993 ರಲ್ಲಿ ಬಾಲಿವುಡ್ ಸಿನೆಮಾಗೆ ಎಂಟ್ರಿಕೊಟ್ಟಿದ್ದ ಮಮತಾ ಕುಲಕರ್ಣಿ ಬ್ರಾಹ್ಮಣ ಕುಟುಂಬದಿಂದ ಬಂದವರು. ಮಾಡೆಲಿಂಗ್ ಮೂಲಕ ಸಿನೆಮಾ ಇಂಡಸ್ಟ್ರಿ ಪ್ರವೇಶಿಸಿದ ಮಮತಾ ಕುಲಕರ್ಣಿ ಹತ್ತಕ್ಕೂ ಹೆಚ್ಚು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಅಕ್ಷಯ್ ಕುಮಾರ್, ಗೋವಿಂದ್, ಅಮಿರ್ ಖಾನ್ ಸೇರಿದಂತೆ ಹಲವು ನಾಯಕರ ಜೊತೆ ನಟಿಸಿದ್ದಾರೆ. ಅಂದಿನ ಕಾಲದಲ್ಲೇ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದ ಮಮತಾ ಕುಲಕರ್ಣಿ ಬಾಲಿವುಡ್‌ನಲ್ಲಿ ಹಾಟ್ ಸ್ಟಾರ್ ಆಗಿಯೇ ಗುರುತಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಸಿನೆಮಾ ಇಂಡಸ್ಟ್ರಿಯಿಂದ ದೂರ ಉಳಿಯಲು ಬಯಸಿದ್ದರಾದ್ರೂ 2001 ರಲ್ಲಿ ಕೊನೆಯ ಸಿನೆಮಾದಲ್ಲಿ ನಟಿಸಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು.
ಸಿನೆಮಾ ಇಂಡಸ್ಟ್ರಿ ಬಿಟ್ಟು ಆಧ್ಯಾತ್ಮದತ್ತ ಒಲವು ತೋರಿದ ಮಮತಾ ಕುಲಕರ್ಣಿ, ಬೋರಿವಿಲಿಯಲ್ಲಿನ ಶ್ರೀ ಚೈತನ್ಯ ಗಗನಗಿರಿ ನಾಥ ಸ್ವಾಮಿ ಬಳಿ ಸನ್ಯಾಸತ್ವ ಸ್ವೀಕರಿಸಿದ್ದರು ಎಂದು ಸ್ವತಹ ಅವರೇ ಹೇಳಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಸನ್ಯಾಸಿಯಂತೆ ಜೀವನ ಮಾಡುತ್ತಿದ್ದ 52 ವರ್ಷದ ಮಮತಾ ಕುಲಕರ್ಣಿ ಇದೀಗ ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಕುಂಭ ಮೇಳದಲ್ಲಿ ಕಿನ್ನರ ಅಖಾಡದ ಆಚಾರ್ಯ ಮಾಹಾಮಂಡಲೇಶ್ವರ್ ಲಕ್ಷ್ಮೀನಾರಾಯಣ ತ್ರಿಪಾಠಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಬಳಿಕ ಮಹಾಮಂಡಲೇಶ್ವರಿ ದೀಕ್ಷೆ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದು, ಅಖಿಲ ಭಾರತೀಯ ಅಖಾಡದ ಅಧ್ಯಕ್ಷ ರವೀಂದ್ರ ಪುರಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಮಮತಾ ಕುಲಕರ್ಣಿಗೆ ದೀಕ್ಷೆ ನೀಡಲಾಗಿದೆ.
FILM
ರೇಣುಕಾಸ್ವಾಮಿ ಕೊ*ಲೆ ಪ್ರಕರಣ : ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?
Published
2 days agoon
24/01/2025By
NEWS DESK4ಮಂಗಳೂರು/ನವದೆಹಲಿ : ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಐದು ಜನರಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ, ರಾಜ್ಯಸರ್ಕಾರ ಸಲ್ಲಿಸಿರುವ ಆಕ್ಷೇಪಣೆ ಅರ್ಜಿಯನ್ನು ಪರಿಶೀಲಿಸುವುದಾಗಿ ತಿಳಿಸಿದೆ.
ಈ ವೇಳೆ ಕರ್ನಾಟಕ ಹೈಕೋರ್ಟ್‌ನ ಜಾಮೀನು ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡ ಪೀಠವು ದರ್ಶನ್ ಮತ್ತು ಇತರರಿಗೆ ನೋಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ : ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ
ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀ*ಲ ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ರೊಚ್ಚಿಗೆದ್ದ ದರ್ಶನ್ ಹಾಗೂ ಸಂಗಡಿಗರು ರೇಣುಕಾಸ್ವಾಮಿಯ ಹ*ತ್ಯೆ ಮಾಡಿದ್ದಾರೆಂಬ ಆರೋಪದಡಿ 7 ಮಂದಿಯನ್ನು ಬಂಧಿಸಲಾಗಿತ್ತು. ಜೂ.9 ರಂದು ರೇಣುಕಾಸ್ವಾಮಿ ಮೃ*ತದೇಹ ಬೆಂಗಳೂರಿನ ಮೋರಿಯೊಂದರಲ್ಲಿ ಪತ್ತೆಯಾಗಿತ್ತು. ಹೈಕೋರ್ಟ್ ಅಕ್ಟೋಬರ್ 30ರಂದು ದರ್ಶನ್‌ಗೆ ತೀವ್ರ ನೋವಿದೆ ಎಂಬ ಕಾರಣಕ್ಕೆ ವೈದ್ಯಕೀಯ ಆಧಾರದ ಮೇಲೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಡಿಸೆಂಬರ್‌ನಲ್ಲಿ ಅವರಿಗೆ ಮತ್ತು ಇತರರಿಗೆ ನಿಯಮಿತ ಜಾಮೀನು ಮಂಜೂರಾಗಿತ್ತು.
FILM
ಟಾಕ್ಸಿಕ್, ಕಾಂತಾರ ಎಫೆಕ್ಟ್; ಅರಣ್ಯದಲ್ಲಿ ಚಿತ್ರೀಕರಣಕ್ಕೆ ಹೊಸ ರೂಲ್ಸ್
Published
2 days agoon
24/01/2025By
NEWS DESK4ಬೆಂಗಳೂರು/ಮಂಗಳೂರು : ಕಾಂತಾರ ಚಾಪ್ಟರ್ 1 ಮತ್ತು ಟಾಕ್ಸಿಕ್ ಸಿನಿಮಾಗಳು ಮಾಡಿರುವ ಎಡವಟ್ಟಿನಿಂದಾಗಿ ಅರಣ್ಯ ನಾಶವಾಗಿದೆ. ಇದು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಕಾರಣವಾಗಿದೆ. ಟಾಕ್ಸಿಕ್ ಚಿತ್ರತಂಡ ಮರ ಕಡಿದ ಆರೋಪ ಎದುರಿಸಿದ್ದು, ಕಾಂತಾರ ತಂಡ ಬಾಂ*ಬ್ ಸ್ಫೋ*ಟಿಸಿ ಅರಣ್ಯ ನಾಶ ಮಾಡಿರುವ ಬಗ್ಗೆ ಭಾರೀ ದಂಡ ತೆತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅರಣ್ಯದಲ್ಲಿ ಚಿತ್ರೀಕರಣ ಮಾಡುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ.
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಅನುಮತಿ ನೀಡಲಾಗುತ್ತಿದೆ. ಇದಲ್ಲದೆ, ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?
ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಅರಣ್ಯ ಹಾಗೂ ವನ್ಯ ಜೀವಿಗಳನ್ನು ಉಳಿಸುವ ಹಿತದೃಷ್ಟಿಯಿಂದ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ಆದೇಶಿಸಲಾಗಿದೆ.
LATEST NEWS
ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ
ಗೃಹಲಕ್ಷ್ಮಿ ಹಣ ಕೂಡಿಟ್ಟು ಶೌಚಾಲಯ ನಿರ್ಮಿಸಿದ ಮಹಿಳೆ
ಮಂಗಳೂರಿನಲ್ಲಿ ಜಿಲ್ಲೆಯ ಮೊದಲ ಮಕ್ಕಳ ಮಾದರಿ ಸಂಸತ್ ಅಧಿವೇಶನ
ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಸಂಸಾರದಲ್ಲಿ ಬಿರುಕು?
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕು*ಸಿದು ಬಿ*ದ್ದ ಪೊಲೀಸ್ ಕಮಿಷನರ್ ..!
ಆರ್ಸಿಬಿಗೆ ಆಘಾತ; ಕೈಕೊಟ್ಟ ಸ್ಟಾರ್ ಪ್ಲೇಯರ್
Trending
- BIG BOSS4 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS6 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- BIG BOSS3 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS6 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?
Pingback: ಇಸ್ರೇಲ್ನ 4 ಮಹಿಳಾ ಸೈನಿಕರ ಬದಲಾಗಿ 200 ಹಮಾಸ್ ಖೈದಿಗಳ ಬಿಡುಗಡೆ! - NAMMAKUDLA NEWS - ನಮ್ಮಕುಡ್ಲ ನ್ಯೂಸ್