ಇಂಧನ ಬೆಲೆಗಳ ಏರಿಕೆಗೆ ತೀವ್ರ ವಿರೋಧ; ಫೆ 26 ದೇಶದಾದ್ಯಂತ ಟ್ರಕ್ ಮುಷ್ಕರಕ್ಕೆ ಎಐಟಿಡಬ್ಲ್ಯುಎ ಕರೆ..!
ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ ವೇ ಬಿಲ್ ಕಾನೂನುಗಳ ವಿರುದ್ಧ ಮತ್ತು ಇಂಧನ ಬೆಲೆಗಳಲ್ಲಿ ಏರಿಕೆಯನ್ನು ವಿರೋಧಿಸಿ, ಆಲ್ ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶನ್(ಎಐಟಿಡಬ್ಲ್ಯುಎ) ಕರೆ ನೀಡಿದೆ.
ಫೆಬ್ರವರಿ 26 ರಂದು ದೇಶಾದ್ಯಂತ ಬಂದ್‌ಗೆ ಕರೆನೀಡಿದ್ದು, ಇದಕ್ಕೆ ರಾಜ್ಯಮಟ್ಟದ ಸಾರಿಗೆ ಸಂಘಗಳು ಕೂಡ ಬೆಂಬಲ ನೀಡಿವೆ. ಈ ಸಂಬಂಧ ಲಾರಿಗಳನ್ನು ರಸ್ತೆಗಿಳಿಸದಂತೆ ಕೋರಲಾಗಿದೆ.
ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ಹಿನ್ನಲೆ ಫೆಬ್ರುವರಿ 26ರಂದು ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಗ್ರಾಹಕರಿಗೆ ಸಾರಿಗೆ ಕಂಪನಿಗಳು ಮನವಿ ಮಾಡಿಕೊಳ್ಳಲಿವೆ” ಎಂದಿದ್ದಾರೆ.
ಪ್ರತಿಭಟನೆಯ ಅಂಗವಾಗಿ ಫೆಬ್ರವರಿ 26 ರ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಒಂದು ದಿನದ ಮಟ್ಟಿಗೆ ಲಾರಿಗಳು ರಸ್ತೆಗಿಳಿಸದಿರಲು ತೀರ್ಮಾನಿಸಲಾಗಿದೆ.
ಜೊತೆಗೆ ರಸ್ತೆ ಬಂದ್ ಚಳವಳಿಗೆ ನಡೆಸಲಾಗುತ್ತದೆ ಎನ್ನಲಾಗಿದೆ. ಹಾಗೆಯೇ ಒಂದು ದಿನದ ಮಟ್ಟಿಗೆ ಇ-ವೇ ಬಿಲ್ ಕೇಂದ್ರಿತ ಸರಕು ಸಾಗಾಣಿಕೆ ತಿರಸ್ಕಾರ ಹಾಗು ದೇಶಾದ್ಯಂತ ಸಾರಿಗೆ ಗೋದಾಮುಗಳ ಎದುರು ಪ್ರತಿಭಟನೆ ಮಾಡುವಂತೆ ಕರೆನೀಡಲಾಗಿದೆ.