Thursday, March 4, 2021

ಅಪಘಾತದಲ್ಲಿ ಏಟಾದ್ರೂ  ಕರ್ತವ್ಯ ನಿಷ್ಠೆ ಮೆರೆದ ; ಮುಜರಾಯಿ ಇಲಾಖೆ ಸಚಿವ ಸಿಂಪಲ್ ಶ್ರೀನಿವಾಸ ..!  

ಅಪಘಾತದಲ್ಲಿ ಏಟಾದ್ರೂ  ಕರ್ತವ್ಯ ನಿಷ್ಠೆ ಮೆರೆದ ;  ಮುಜರಾಯಿ ಇಲಾಖೆ ಸಚಿವ ಸಿಂಪಲ್ ಶ್ರೀನಿವಾಸ ..!

ಉಡುಪಿ:  ರಾಜಕಾರಣಿಗಳು ಮಂತ್ರಿಗಳು ಒಳ್ಳೆಯ ಕಾರಣಕ್ಕೆ ಟ್ರೋಲ್ ಆಗೋದು ಬಹಳ ಅಪರೂಪ.. ಅಂತದ್ರಲ್ಲಿ ಹಿಂದುಳಿದ ವರ್ಗ ಕಲ್ಯಾಣ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತನ್ನ ಕರ್ತವ್ಯ ನಿಷ್ಠೆಯ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ.

ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಶುಕ್ರವಾರ ಸಂಜೆ ಸಚಿವರು ರವಿಶಂಕರ್ ಗುರೂಜಿಯವರ ಆಶ್ರಮದಿಂದ ವಾಪಸಾಗುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿತ್ತು .

ಸರ್ಕಾರಿ ಬಸ್ ಮತ್ತು ಸಚಿವರ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಕೋಟಾ ಶ್ರೀನಿವಾಸ ಪೂಜಾರಿ ಪಾರಾಗಿದ್ದರು.

ಸಚಿವರ ಎಡಗೈಗೆ ಘಾಸಿಯೂ ಆಗಿತ್ತು. ಅಪಘಾತ ಸ್ಥಳದಿಂದ ನೇರವಾಗಿ ತವರು ಜಿಲ್ಲೆ ಉಡುಪಿಗೆ ಬಂದು ತಲುಪುವಾಗ ಶನಿವಾರ ಬೆಳಗಿನ ಜಾವ 4 ಗಂಟೆಯಾಗಿತ್ತು. ತಡವಾಗಿ ಮನೆ ಸೇರಿದ್ದರು. ಜೊತೆಗೆ ಅಪಘಾತದಿಂದ ಸಚಿವರ ಕೈಗೂ ಗಾಯವಾಗಿತ್ತು.

ಈ ಕಾರಣ ಮರುದಿನದ ಎಲ್ಲಾ ಕಾರ್ಯಕ್ರಮಗಳು ರದ್ದಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ..ಈ ಮೊದಲೇ ನಿಗಧಿಯಾದಂತೆ ಬೆಳಗಿನ ಜಾವ 7 ಗಂಟೆಗೆ ಸರಿಯಾಗಿ ಶ್ರೀನಿವಾಸ ಪೂಜಾರಿ ಹಾಜರಿದ್ದರು.

ಅದಾಗಲೇ ಕೋಟದಲ್ಲಿರುವ ತನ್ನ ಗ್ರಹ ಕಚೇರಿಯ ಮುಂದೆ ಸೇರಿದ್ದ ಜನರ ಅಹವಾಲುಗಳನ್ನು ಕೇಳಲು ಸಿದ್ಧರಾಗಿದ್ದರು. ಇದೇ ಕಾರಣಕ್ಕೆ ಸಚಿವರು ಸದ್ಯ ಫೇಸ್ಬುಕ್ ವಾಟ್ಸ್ಅಪ್ ಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಸಚಿವರ ಕರ್ತವ್ಯ ಪ್ರಜ್ಞೆ ಗೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕರಾವಳಿ ಭಾಗದಲ್ಲಿ ಸಿಂಪಲ್ ಶ್ರೀನಿವಾಸ ಎಂದೇ ಜನಜನಿತವಾಗಿರುವ ಸಚಿವರು, ಮತ್ತೊಮ್ಮೆ ತಮ್ಮ ಸರಳತೆಯಿಂದ ಸುದ್ದಿಯಾಗುತ್ತಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...