ಬೇಲಿಯೇ ಎದ್ದು ಹೊಲ ಮೇಯಿತೇ;ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಪ್ರತಿಭಟನೆಯೇ..!
fence feed the field; protest against police personnel..!
ಉಡುಪಿ : ಕುಂದಾಪುರ ಕೋಟ ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸಿ, ಸಾರ್ವಜನಿಕರು ಮೌನ ಪ್ರತಿಭಟನೆ ನಡೆಸಿದ್ದಾರೆ. ಅಮಾಯಕ ತಾಯಿ- ಮಗನ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾಗಿ ಆರೋಪಿಸಿದ್ದಾರೆ.
ತನ್ನ ತಾಯಿಯನ್ನು ಕರೆದುಕೊಂಡು ಮನೆಗೆ ತೆರಳುತ್ತಿರುವ ವೇಳೆಯಲ್ಲಿ ಪ್ರಶಾಂತ್ ಎಂಬಾತನ ಮೇಲೆ ಕೋಟ ಠಾಣೆಯ ಪೊಲೀಸ್ ವಾಹನ ತಪಾಸಣೆಯ ನೆಪದಲ್ಲಿ ದೌರ್ಜನ್ಯ ನಡೆಸಿದ್ದ ಆರೊಪ ಎದುರಿಸುತ್ತಿದ್ದಾರೆ.
ಅಲ್ಲದೇ ಮಗನ ರಕ್ಷಣೆಗೆ ನಿಂತ ತಾಯಿಯ ಮೇಲೂಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಲಿಗ್ರಾಮದಿಂದ ಕೋಟ ಹೈಸ್ಕೂಲು ವರೆಗೆ ಕಾಲ್ನಡಿಗೆಯಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸ್ ಇಲಾಖೆ ಜನರ ಜೊತೆಗೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕೇ ವಿನಹ ಮನಬಂದಂತೆ ಕಾರ್ಯನಿರ್ವಹಿಸುವುದಲ್ಲ. ಒಂದು ವಾರದೊಳಗೆ ಅಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ತಾಯಿ ಮಗನಿಗೆ ನ್ಯಾಯ ದೊರಕಬೇಕು.
ಇಲ್ಲವಾದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಠಾಣೆ ಎದುರು ಆಮರಣಾಂತಿಕ ಉಪವಾಸ ಕೈಗೊಳ್ಳುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.