ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಅದಮಾರು ಶ್ರೀಗಳಿಂದ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾರವರಿಗೆ ನಿನ್ನೆ “ಸುಘೋಷಪ್ರಿಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಶ್ರೀ ಕೃಷ್ಣ ಮಠ ಪರ್ಯಾಯ ಹಾಗೂ ಅದಮಾರು ಮಠದ ವತಿಯಿಂದ ಶ್ರೀ ನರಹರಿತೀರ್ಥ ವೇದಿಕೆ ರಾಜಾಂಗಣದಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಅವರನ್ನು ಅದಮಾರು ಶ್ರೀಗಳು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭ ಗೌರವ ಸ್ವೀಕರಿಸಿ ಮಾತನಾಡಿದ ಅವರು “ನಮಗೂ ಶ್ರೀ ಅದಮಾರು ಅವಿನಾಭಾವ ಸಂಬಂಧ ಇದೆ.
ನಾವು ನಡೆಸುವ ಧಾರ್ಮಿಕ ಕಾರ್ಯಗಳಲ್ಲಿ ಸ್ವಾಮೀಜಿಗಳು ಭಾಗವಹಿಸಿ ನಮಗೆ ಆಶೀರ್ವಾದ ನೀಡುತ್ತಿದ್ದಾರೆ.
ಅದರಿಂದ ನಮಗೆ ಒಳ್ಳೆಯ ಕೆಲಸ ಕಾರ್ಯ ಮಾಡಲು ಪ್ರೇರಣೆ ಸಿಕ್ಕಂತಾಗುತ್ತಿದೆ.
ಇಂದು ಶ್ರೀ ಪರ್ಯಾಯ ಅದಮಾರು ಮಠದಿಂದ ನಮ್ಮನ್ನು ಸನ್ಮಾನಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀಯ ಸ್ವಾಮೀಜಿ, ಸಾತ್ಯಕಿ ಸಾವರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು..