Saturday, August 20, 2022

ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರಗೈಯುತ್ತಿದ್ದ ತಂದೆಯ ಬಂಧನ

ಪಾಲ್ಘರ್‌: ತನ್ನಿಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ತಂದೆಯೊಬ್ಬನನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.


ಸಂತ್ರಸ್ತರು 6 ವರ್ಷ ಮತ್ತು 12 ವರ್ಷದವರಾಗಿದ್ದು, ತನ್ನ ತಂದೆಯ ಕೃತ್ಯವನ್ನು ವಿರೋಧಿಸಿ ನೆರೆಹೊರೆಯವರನ್ನು ಕೂಗಿ ಕರೆಯಲು

ಮುಂದಾದಾಗಲೆಲ್ಲಾ ಚಾಕುವನ್ನು ತೋರಿಸಿ ಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಭೋಯ್ಸರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಸಂದರ್ಭಗಳಲ್ಲಿ ಮನೆಯಲ್ಲಿ ಒಬ್ಬರೇ ಇರುವ ವೇಳೆ ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾನೆ.

ತನ್ನ ಹೆಂಡತಿ ಸತ್ತ ಬಳಿಕ 2019ರಿಂದಲೂ ಆತ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯರ ಅಕ್ಕನಿಗೆ ವಿವಾಹವಾಗಿದ್ದು,

ಅವರು ಬೇರೆ ಕಡೆ ವಾಸಿಸುತ್ತಿದ್ದಾರೆ. ಬಾಲಕಿಯರ ಮೇಲಾಗುತ್ತಿರುವ ಕೃತ್ಯವನ್ನು ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎನ್‌ಜಿಒ ಶ್ರಮಜೀವಿ ಸಂಘಟನೆ ಖಂಡಿಸಿದೆ.

ಇಬ್ಬರು ಬಾಲಕಿಯರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದತ್ತಾತ್ರೇಯ ಶಿಂಧೆ ಅವರ ಮುಂದೆ ಕರೆದೊಯ್ದಿದ್ದಾರೆ.

ಬಳಿಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ. ಬಾಲಕಿಯರ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics