ವಾರಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಬಂದ ಐ ಫೋನ್ 16 ಪ್ರೋ ಮ್ಯಾಕ್ಸ್ ಖರೀದಿಗೆ ಜನ ಇನ್ನಿಲ್ಲದ ಆಸಕ್ತಿ ತೋರಿಸಿದ್ದಾರೆ. ಕೆಲವೊಂದು ಕಡೆಗಳಲ್ಲಿ 21 ಗಂಟೆಗಳ ಕಾಲ ಕ್ಯೂ ನಿಂತು ಜನ ಐ ಫೋನ್ 16 ಪ್ರೋ ಮ್ಯಾಕ್ಸ್ ಖರೀದಿ ಮಾಡಿದ ಸುದ್ದಿ ಕೂಡಾ ವರದಿಯಾಗಿತ್ತು. ಐ ಫೋನ್ ಕೈಲಿದ್ರೆ ಅದೇ ಒಂದು ದೊಡ್ಡ ಭಾಗ್ಯ ಅಂತ ಸಾಕಷ್ಟು ಜನ ಹೇಗಾದ್ರೂ ಮಾಡಿ ಐ ಫೋನ್ ಖರೀದಿ ಮಾಡ್ತಾರೆ. ಹಾಗಂತ ಈ ಫೋನ್ ಬಡವರು ಖರೀದಿ ಮಾಡೋದು ಕನಸಿನ ಮಾತು ಅನ್ನೋ ಅಷ್ಟು ದುಬಾರಿಯಾಗಿದೆ.
ಆದ್ರೆ ಹೊಸದಾಗಿ ಲಾಂಚ್ ಆಗಿರೋ ಐ ಫೋನ್ 16 ಪ್ರೋ ಮ್ಯಾಕ್ಸ್ ಕುರಿತಾದ ಅಚ್ಚರಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡ ತಂದೆಯೊಬ್ಬ ತನ್ನ ಮಗನಿಗಾಗಿ ಐ ಫೋನ್ 16 ಪ್ರೋ ಮ್ಯಾಕ್ಸ್ ಖರೀದಿಸಿ ಗಿಫ್ಟ್ ನೀಡಿದ್ದಾನೆ. ಈ ವೈರಲ್ ವಿಡಿಯೋ ಸಾಕಷ್ಟು ಜನ ಹಂಚಿಕೊಂಡಿದ್ದು, ತಂದೆಗೆ ಮೆಚ್ಚುಗೆ ಸಲಾಂ ನೀಡಿದ್ದಾರೆ.
ರಸ್ತೆ ಬದಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಹಣ ಒಟ್ಟು ಮಾಡಿ 1.5 ಲಕ್ಷದ ಈ ಫೋನ್ ಖರೀದಿಸಿದ್ದಾನೆ. ಹರಿದ ವಸ್ತ್ರ ಧರಿಸಿದ್ದ ವ್ಯಕ್ತಿಯ ಕೈನಲ್ಲಿ ಐ ಫೋನ್ ನೋಡಿದ ಯಾರೋ ಒಬ್ಬರು ಆತನ ಪೂರ್ವಾ ಪರ ವಿಚಾರಿಸಿ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಫೋನ್ ಖರೀದಿಸಿದ ವ್ಯಕ್ತಿ ತಾನು ಚಿಂದಿ ಆಯುವ ಕೆಲಸ ಮಾಡುತ್ತಿರುವುದಾಗಿಯೂ, ತನ್ನ ಮಗನಿಗೆ ಈ ಫೋನ್ ಗಿಪ್ಟ್ ನೀಡುತ್ತಿರುವುದಾಗಿಯೂ ಹೇಳಿದ್ದಾರೆ. ಮಗ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆಗಿದ್ದು, ಆತನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಐಫೋನ್ 16 ಪ್ರೋ ಮ್ಯಾಕ್ಸ್ ಗಿಫ್ಟ್ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಚಿಂದಿ ಆಯ್ದುಕೊಂಡು ಮಗನನ್ನು ಚೆನ್ನಾಗಿ ಓದಿಸ್ತಾ ಇರುವ ಈ ತಂದೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ಮಗನ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ತಂದೆ ನಿಜಕ್ಕೂ ಗ್ರೇಟ್ ಎಂದ ಕೆಲವರು ಕಮೆಂಟ್ ಮಾಡಿದ್ದಾರೆ.
ಕಾರ್ಕಳ:ಪತಿ ಅ*ಗಲಿಕೆಯ ನೋ*ವಿನಿಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ. ಸೌಮ್ಯ(39) ಆ*ತ್ಮಹ*ತ್ಯೆ ಮಾಡಿಕೊಂಡ ಮಹಿಳೆ.
ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಸೌಮ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಒಂದು ತಿಂಗಳ ಹಿಂದೆ ಮೃ*ತಪಟ್ಟಿದ್ದರು. ಇದರಿಂದ ಮಾ*ನಸಿಕವಾಗಿ ನೊಂದಿದ್ದ ಸೌಮ್ಯ, ಮನೆ ಸಮೀಪದ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು/ ಹಾಸನ : ಇಂಜಿನಿಯರ್ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್ 11 ರಂದು ಸರಳ ವಿವಾಹವಾಗುವ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ ಗಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.
ಅತ್ಯಂತ ಅದ್ದೂರಿ
ಮತ್ತು ಆಡಂಭವಾಗಿ ಮದುವೆಯಾಗುವ ಈ ಕಾಲದಲ್ಲಿ, ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಶೇಷ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನಿಡುವ ಮೂಲಕ ಸಮಾಜ ಸೇವೆ ಗೈದಿದ್ದಾರೆ. ಈ ಸತ್ಕಾರ್ಯಕ್ಕೆ ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಪ್ರೇರಣೆ ಎಂದು ಹೇಳಿದ್ದಾರೆ.
ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಳಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.
ಮಂಗಳೂರು : ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ ರೀಟಾ ರಾಧಾಕೃಷ್ಣ ಆಂಚನ್ ಬುಧವಾರ ನಿ*ಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕನ್ನಡ ಜೊತೆಗೆ ಅವರು ಹಿಂದಿ, ಪಂಜಾಬಿ ಹಾಗೂ ಗುಜರಾತಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಖ್ಯಾತರಾಗಿದ್ದರು. ರೀಟಾ ಅಂಚನ್ ಕಳೆದ ಹಲವು ದಿನಗಳಿಂದ ಅ*ನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮರಕಣಿಯಾಗಿ ಫೇಮಸ್ :
ನೋಟದಾಗೆ ನಗೆಯ ಮೀಟಿ…ಈ ಹಾಡು ಯಾರಿಗೆ ತಾನೆ ಗೊತ್ತಿಲ್ಲ. 1978ರಲ್ಲಿ ಲೋಕೇಶ್ ಮುಖ್ಯಭೂಮಿಕೆಯಲ್ಲಿದ್ದ ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಈ ಹಾಡು ಇಂದಿಗೂ ಜೀ*ವಂತ. ಈ ಚಿತ್ರದಲ್ಲಿ ಮರಕಣಿಯಾಗಿ ನಟಿಸಿದ್ದವರು ಬೇರ್ಯಾರೂ ಅಲ್ಲ. ರೀಟಾ ರಾಧಾಕೃಷ್ಣ ಅಂಚನ್ ಅವರು. ಈ ಸಿನಿಮಾದ ನಟನೆಗಾಗಿ ಅವರು ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು
ಬಟ್ಟಲು ಕಂಗಳ ಚೆಲುವೆ ರೀಟಾ ಈ ಸಿನಿಮಾ ಮೂಲಕ ಜನಮನಸೂರೆಗೊಂಡಿದ್ದಾರೆ. ಪರಭಾಷಾ ಚಿತ್ರಗಳಲ್ಲೂ ಕಂಗೊಳಿಸಿದ್ದ ನಟಿ, ಏನ್ ಎನಾದರ್, ಬದ್ನಾಂ, ಗರ್ಲ್ ಜವಾನ್ ಹೋಗಯಾ, ಆತ್ಮ, ಫರ್ಜ್ ಊರ್ ಪ್ಯಾರ್ ಮತ್ತು ವಿಶು ಕುಮಾರ್ ಅವರ ಕೋಸ್ಟಲ್, ಗಿರೀಶ್ ಕಾರ್ನಾಡ್ ಅವರ ಕನಕಾಂಬರ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಮತ್ತು ಟಾಟಾ ಕಂಪನಿಯಲ್ಲಿ ಹಿರಿಯ ಅಧಿಕಾರಿ. ಟಿ.ಆಂಚನ್ ಅವರ ಪುತ್ರಿಯಾಗಿರುವ ರೀಟಾ ಅಂಚನ್ ವಿವಾಹವಾದ ಬಳಿಕ ರಾಧಾಕೃಷ್ಣ ಮಂಚಿಗಯ್ಯ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಅವರು ಪತಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ರಘುರಾಮ್ ಪೋಸ್ಟ್ :
‘ ನಿಮ್ಮೆಲ್ಲರಿಗೂ ಇವರ ಜೀವನದ ಕಥೆಯನ್ನು ಪರಿಚಯಿಸಬೇಕೆಂಬ ನನ್ನ ಕನಸು ನನಸಾಗಲಿಲ್ಲ. ‘ಪರಸಂಗದ ಗೆಂಡೆತಿಮ್ಮ’ ಖ್ಯಾತಿಯ ಶ್ರೀಮತಿ ರೀಟಾ ಅಂಚನ್ ರಾಧಾಕೃಷ್ಣ ಅವರು ನೆನ್ನೆ (13/11/2024) ರಂದು ನಮ್ಮನ್ನು ದೈಹಿಕವಾಗಿ ಅ*ಗಲಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕೊಡಲಿ’ ಎಂದು ನಿರ್ದೇಶಕ ಹಾಗೂ ಕನಸುಗಳ ಕಾರ್ಖಾನೆ ಯೂಟ್ಯೂಬ್‌ನ ರಘುರಾಮ್ ತಿಳಿಸಿದ್ದಾರೆ.