Connect with us

    ಕೊರೊನಾದೊಂದಿಗೆ ಕಾಲರಾ ಹರಡುವ ಆತಂಕ: ಮಂಗಳೂರಿನಲ್ಲಿ ಫಾಸ್ಟ್ ಫುಡ್, ಬೀದಿಬದಿ ವ್ಯಾಪಾರ ಬಂದ್ 

    Published

    on

    ಕೊರೊನಾದೊಂದಿಗೆ ಕಾಲರಾ ಹರಡುವ ಆತಂಕ: ಮಂಗಳೂರಿನಲ್ಲಿ ಫಾಸ್ಟ್ ಫುಡ್, ಬೀದಿಬದಿ ವ್ಯಾಪಾರ ಬಂದ್ 

    ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ವೈರಸ್ ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಕೊರೊನಾವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ.

    ಈ ನಡುವೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಜೊತೆಗೆ ಕಾಲರಾ ರೋಗವೂ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲೆಡೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‍ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

    ಎಲ್ಲಾ ರೀತಿಯ ಬೀದಿ ಬದಿ ತಿಂಡಿಗಳನ್ನು ಮಾರಾಟ ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮಾರ್ಚ್ 16ರಿಂದ ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಲಿದ್ದಾರೆ. ಯಾರಾದರೂ ಅಡ್ಡಿ ಪಡಿಸಿದಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಒಂದು ವೇಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    video

    Click to comment

    Leave a Reply

    Your email address will not be published. Required fields are marked *

    LATEST NEWS

    ವಿಂಡೀಸ್ ವಿರುದ್ಧ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತೀಯ ಮಹಿಳಾ ತಂಡ

    Published

    on

    ಮಂಗಳೂರು/ವಡೋದರ : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದ ಭಾರತ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಶುಕ್ರವಾರ(ಡಿ.27) ಹೊಸ ದಾಖಲೆ ಬರೆದಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್  38.5 ಓವರ್ ಗಳಲ್ಲಿ ಕೇವಲ 162 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 6 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್‌ ತಂಡವನ್ನು ಕಟ್ಟಿ ಹಾಕಿದರು.

    ವೆಸ್ಟ್ ಇಂಡೀಸ್ ನೀಡಿದ 163 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು.  ಪ್ರತಿಕಾ ರಾವಲ್ 18, ನಾಯಕಿ ಹರ್ಮನ್ ಪ್ರೀತ್ ಕೌರ್ 32, ರೋಡ್ರಿಗಸ್ 29, ದೀಪ್ತಿ ಶರ್ಮಾ ಅಜೇಯ 39, ರಿಚಾ ಘೋಶ್ 23 ರನ್ ಗಳಿಸುವ ಮೂಲಕ 28.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಗೆದ್ದು ಬೀಗಿದರು.

    ಇದನ್ನೂ ಓದಿ : ನಿನ್ನೆ ಚಪ್ಪಲಿ ಧರಿಸಲ್ಲ ಎಂಬ ಶಪಥ… ಇಂದು ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡ ಅಣ್ಣಾಮಲೈ

    ಈ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವಿಪ್ ಮಾಡಿತು. ದೀಪ್ತಿ ಶರ್ಮಾ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

    Continue Reading

    LATEST NEWS

    ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ವಿರುದ್ಧ ಗುಡುಗಿದ ಹರೀಶ್ ಪೂಂಜಾ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ಶಾಸಕರ ವಿರುದ್ಧ ನೀಡಿದ ಹೇಳಿಕೆ ಈಗ ಅಸೋಸಿಯೇಷನ್‌ಗೆ ತಿರುಗುಬಾಣವಾಗಿದೆ. ಜಿಲ್ಲೆಯ ಕಬಡ್ಡಿ ಅಸೋಸಿಯೇಷನ್ ಬಗ್ಗೆ ಮಾತನಾಡುವ ಶಾಸಕ ಹರೀಶ್ ಪೂಂಜಾ ಅವರ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹಲವು ಆರೋಪದ ಜೊತೆ ಸವಾಲು ಕೂಡಾ ಎಸೆದಿದ್ದರು. ಇದೀಗ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿಕೆಗೆ ಶಾಸಕ ಹರೀಶ್ ಪೂಂಜಾ ತಿರುಗೇಟು ನೀಡಿದ್ದಾರೆ.

    ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರ ಹಾಗೂ ಕಬಡ್ಡಿ ಆಟಗಾರರಿಗೆ ಆಗುತ್ತಿದ್ದ ಅನ್ಯಾಯಗಳನ್ನು ದಾಖಲೆ ಸಮೇತ ಮಾದ್ಯಮದ ಮುಂದೆ ಇಟ್ಟಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಹರೀಶ್ ಪೂಂಜಾ ತಾನು ರಾಜ್ಯದ ಕಬಡ್ಡಿ ಆಟಗಾರರ ಹಿತಕ್ಕಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ ಎಂದು ಹೇಳಿದ್ದಾರೆ. 2012 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಜಿಲ್ಲೆಯ ಆಟಗಾರರಿಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

    2009 ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಮಲ್ಲಿ ಸಂಸ್ಥೆಯ ಸಧಸ್ಯತ್ವವನ್ನು 2012 ರಲ್ಲಿ ಪಡೆದುಕೊಂಡು ಅಧ್ಯಕ್ಷರಾಗಿದ್ದಾರೆ. ಅದಾದ ಬಳಿಕ ನಿರಂತರ 2024 ರ ತನಕವೂ ಅಧಿಕಾರದಲ್ಲಿದ್ದು, ಎಷ್ಟು ಆಟಗಾರರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ್ದಾರೆ ಎಂಬ ಲೆಕ್ಕ ನೀಡಲಿ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ ದ.ಕ. ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರಗಳನ್ನು ದಾಖಲೆ ಸಮೇತ ವಿವರಿಸಿದ್ದಾರೆ.

    ಅವ್ಯವಹಾರದ ಕುರಿತಾದ ದೂರಿನ ಮೇಲೆ ತನಿಕೆ ನಡೆಸಿದ ತನಿಖಾಧಿಕಾರಿಗಳು ಅಸೋಸಿಯೇಷನ್‌ಗೆ ಆಡಳಿತ ಅಧಿಕಾರಿ ನೇಮಕ ಮಾಡಲು ಶಿಫಾರಸು ಮಾಡಿದ್ದು, ಚುನಾವಣೆ ನಡೆಸದೆ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ, ಚುನಅವಣೆ ಗೆಲ್ಲಲು ಅನರ್ಹ ಸದಸ್ಯರ ನೊಂದಣಿ, ಸದಸ್ಯ ಹಣವನ್ನು ಖಾತೆಗೆ ಹಾಕದೆ ವಂಚನೆ, ನಕಲಿ ದಾಖಲೆಯ ಸೃಷ್ಟಿ , ನಕಲಿ ಸಹಿ ಬಳಕೆ ಆರೋಪ ಹೀಗೆ ಹಲವಾರು ಲೋಪಗಳನ್ನು ತನಿಕಾ ಅಧಿಕಾರಿ ಗುರುತಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ಗೆ ಸರ್ಕಾರ ತಕ್ಷಣ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಜಿಲ್ಲೆಯ ಕಬಡ್ಡಿ ಆಟಗಾರರ ಹಿತ ಕಾಪಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಸಹಕಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.

    Continue Reading

    LATEST NEWS

    ನಿನ್ನೆ ಚಪ್ಪಲಿ ಧರಿಸಲ್ಲ ಎಂಬ ಶಪಥ… ಇಂದು ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡ ಅಣ್ಣಾಮಲೈ

    Published

    on

    ಮಂಗಳೂರು/ಚೆನ್ನೈ :  ನಿನ್ನೆಯಷ್ಟೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ)ಅಧಿಕಾರದಿಂದ ಇಳಿಯುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಮತ್ತೊಂದು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ  ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ತಾವೇ ಹಲವಾರು ಬಾರಿ ಚಾಟಿಯೇಟು ಕೊಟ್ಟುಕೊಂಡಿದ್ದಾರೆ. ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂ*ತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅಣ್ಣಾಮಲೈ ಆರೋಪಿದ್ದಾರೆ. ಇದು ಆಡಳಿತ ಅಸಮರ್ಥನೆಯನ್ನು ಪ್ರತಿಬಿಂಬಿಸುವ ನಾಚಿಕೇಡಿನ ಕೃ*ತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಪಾದರಕ್ಷೆ ಧರಿಸುವುದನ್ನು ತ್ಯಜಿಸುವುದಾಗಿ ಘೋಷಿಸಿದ್ದ ಬಿಜೆಪಿ ನಾಯಕ ಕೆ ಅಣ್ಣಾಮಲೈ, ವಿಶ್ವವಿದ್ಯಾನಿಲಯದಲ್ಲಿ ಸಿಸಿಟಿವಿ ಕಣ್ಗಾವಲು ಕೊರತೆಯನ್ನು ಟೀಕಿಸಿದ್ದ ಅವರು, ಮಹಿಳೆಯರ ಸುರಕ್ಷತೆಗಾಗಿ ಮೀಸಲಾಗಿರುವ ನಿರ್ಭಯಾ ನಿಧಿಯನ್ನು ರಾಜ್ಯವು ಬಳಸುವುದನ್ನು ಖಂಡಿಸಿದ್ದರು.  ಈ ಪ್ರಕರಣದ ಎಫ್‌ಐಆರ್‌ನಲ್ಲಿ ಸಂತ್ರ*ಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಡಿಎಂಕೆ ಸರ್ಕಾರವು ಇದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದರು. ಇದೇ ವೇಳೆ ರಾಜ್ಯ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಕಾನೂನು ಸಚಿವ ಎಸ್ ರಘುಪತಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಇದನ್ನೂ ಓದಿ : ‘ಮುದ್ದುಲಕ್ಷ್ಮಿ‌’ ನಟ ಚರಿತ್ ಮೇಲೆ ಲೈಂ*ಗಿಕ ದೌ*ರ್ಜನ್ಯ ಆ*ರೋಪ

    15 ಲೈಂ*ಗಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿ ಮೇಲೆ ಈ ಕ್ರೌ*ರ್ಯ ನಡೆದಿದ್ದು, ಇದಕ್ಕೆ ಡಿಎಂಕೆ ಸರಕಾರವೇ ಸಂಪೂರ್ಣ ಹೊಣೆ. ಇದನ್ನು ತಮಿಳುನಾಡಿನ ಜನರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಆಡಳಿತ ಪಕ್ಷದವರಾಗಿದ್ದರೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಕಾನೂನು ತಮಿಳುನಾಡಿನಲ್ಲಿ ಇದೆಯೇ? ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

    Continue Reading

    LATEST NEWS

    Trending