ಬಂಟ್ವಾಳ : ಕೃಷಿಕರೊಬ್ಬರು ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮುಡ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ನಡೆದಿದೆ.
ಇಲ್ಲಿನ ಕೊಪ್ಪಳ ನಿವಾಸಿಯಾಗಿರುವ 53 ವರ್ಷದ ಹರೀಶ್ ಅಡಿಕೆ ಕೊಯ್ಯುವಾಗ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರು ತನ್ನ ತೋಟದಲ್ಲಿ ಕೃಷಿ ಯಂತ್ರದ ಮೂಲಕ ಅಡಿಕೆ ತೆಗಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಲೀಲಾ, ಪುತ್ರರಾದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ವಿಶ್ವರಾಜ್ ಹಾಗೂ ವಿನೋದ್ ರಾಜ್‌ನನ್ನು ಅಗಲಿದ್ದಾರೆ.ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.