Connect with us

KADABA

ಕಡಬ: ವಿಷ ಜಂತು ಕಡಿದು ಕೃಷಿಕ ಸಾವು

Published

on

ಕಡಬ: ಕೃಷಿ ಕೆಲಸದಲ್ಲಿ ನಿರತರಾಗಿದ್ದ ರೈತರೋರ್ವರು ವಿಷದ ಹಾವು ಕಡಿದು ಸಾವನ್ನಪ್ಪಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.


ಮೃತಪಟ್ಟ ರೈತನನ್ನು ಕೋಡಿಂಬಾಳ ಗ್ರಾಮದ ಪೆಲೊತ್ತೊಡಿ ನಿವಾಸಿ ಧರ್ಮಪಾಲ ಗೌಡ( 58) ಎಂದು ಗುರುತಿಸಲಾಗಿದೆ.
ಇವರು ತಮ್ಮ‌ಮನೆಯ ಹತ್ತಿರದ ಅಡಕೆ ತೋಟಕ್ಕೆ ಸ್ಪ್ರಿಂಕ್ಲ್ ರ್ ಅಳವಡಿಸಲು ಹೋದ ಸಂದರ್ಭದಲ್ಲಿ ಯಾವುದೋ ಕಾರ್ಕೋಟಕ ವಿಷದ ಹಾವೊಂದು ಅವರ ಕಾಲಿಗೆ ಕಡಿದಿದೆ.

ಅವರು ತಕ್ಷಣ ಮನೆಯ ಹತ್ತಿರ ಬರುತ್ತಿದ್ದಂತೆ ಸ್ಮೃತಿ ತಪ್ಪಿ ನೆಲಕ್ಕೆ ಬಿದ್ದಿದ್ದು ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಆ ಸಂದರ್ಭದಲ್ಲೇ ಅವರು ಮೃತರಾಗಿದ್ದರು.

ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯನ್ನು ಅಗಲಿದ್ದಾರೆ.

DAKSHINA KANNADA

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

Published

on

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಕೋಡಿಂಬಾಳ ಪರಿಸರದಲ್ಲಿ ಸಾಕು ನಾಯಿಗಳು ನಾಪತ್ತೆ..! ಚಿರತೆ ಹೊತ್ತೊಯ್ದಿರಬಹುದೆಂಬ ಆಂತಕ

Published

on

ಕಡಬ: ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಯಲ್ಲಿ ಸಾಕು ನಾಯಿಗಳು ನಾಪತ್ತೆಯಾಗುತ್ತಿರುವ ಘಟನೆ ಕೋಡಿಂಬಾಳ ಬಳಿಯ ಪುಳಿಕುಕ್ಕು, ಪಂಜ, ನೇರಳ ಪರಿಸರದಲ್ಲಿ ನಡೆಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಈ ಪ್ರದೇಶದಲ್ಲಿ ಚಿರತೆಗಳು ಓಡಾಟ ನಡೆಸಿದ್ದು ಸಾಕು ನಾಯಿಗಳನ್ನು ಚಿರತೆಗಳೇ ಎಳೆದೊಯ್ದಿರಬೇಕು ಎಂದು ಸಂಶಯಿಸಲಾಗಿದೆ.

ಪಂಜ ಬಳಿಯ ಕರುಂಬು ನೆಕ್ಕಿಲ ನಿವಾಸಿ ರಾಮಚಂದ್ರ ಭಟ್ ಅವರ ಎರಡು ಸಾಕುನಾಯಿಗಳು ಆ.28ರಂದು ರಾತ್ರಿ ವೇಳೆ ಗೂಡಿನಿಂದ ಹೊರಬಿಟ್ಟ ಬಳಿಕ ತೋಟದತ್ತ ಹೋಗಿದ್ದು ಅನಂತರ ನಾಪತ್ತೆಯಾಗಿವೆ. ಇನ್ನು ಪಕ್ಕದ ಮನೆಯಲ್ಲಿ ಮಲಗಿದ್ದ ಸಾಕು ನಾಯಿಗಳು ಕೂಡಾ ನಾಪತ್ತೆಯಾಗಿವೆ.

17 ವರ್ಷದ ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ ಕಾರು ಡಿ*ಕ್ಕಿ; ಬೈಕ್ ಸವಾರ ಸಾ*ವು

ಸಿಟೌಟ್‌ ನಲ್ಲಿ ನಾಯಿ ಮಲವಿಸರ್ಜನೆ ಮಾಡಿದ್ದು ಯಾವುದೋ ಪ್ರಾಣಿ ಜೊತೆ ಕಾದಾಡಿರುವ ಕುರುಹುಗಳು ಕೂಡಾ ಕಂಡು ಬಂದಿದೆ. ಈ ಹಿಂದೆಯೂ ಬೊಳ್ಳಾಜೆ, ಪೂಳೆಂಜ, ನೆಕ್ಕಿಲ, ನೇರಳ ಎಂಬ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿತ್ತು ಎಂಬ ಸುದ್ದಿ ಹರಡಿತ್ತು. ಹೀಗಾಗಿ ನಾಯಿಗಳನ್ನು ಚಿರತೆ ಹೊತ್ತೊಯ್ದಿರಬಹುದು ಎಂದು ಹೇಳಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕಛೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ..! ಕ್ಯಾಶ್ ರಿಜಿಸ್ಟರ್ ಮಾಡದ ಬಗ್ಗೆ ಅಸಮಾಧಾನ

Published

on

ಕಡಬ: ಕಡಬದ ತಾಲೂಕು ಆಡಳಿತ ಸೌಧಕ್ಕೆ ಲೊಕೋಯುಕ್ತ ಎಸ್‌ಪಿ ನಟರಾಜ್ ದಿಢೀರ್ ಬೇಟಿ ನೀಡಿ ಕಚೇರಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿ ಸಿಬ್ಬಂದಿಗಳು ಲಾಗಿನ್ ಸಮಯದಲ್ಲಿ ತಮ್ಮಲ್ಲಿರುವ ಕ್ಯಾಶ್ ಲೆಕ್ಕ ಬರೆದಿಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಂದಾಪುರ:ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಸ್ಟೋರ್ ಭಸ್ಮ

ಪ್ರತಿ ನಿತ್ಯ ಕಚೇರಿಗೆ ಬರುವಾಗ ಮತ್ತು ಕಚೇರಿಯಿಂದ ಹೋಗುವಾಗ ಕ್ಯಾಶ್ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಕ್ಯಾಶ್ ರಿಜಿಸ್ಟರ್ ಮಾಡಲು ಪುಸ್ತಕ ಇದ್ರೂ ಖಾಲಿ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಇದೆ ವೇಳೆ ಅರ್ಹ ಬಿಪಿಎಲ್ ಕಾರ್ಡ್‌ ಬಳಕೆದಾರರನ್ನು ಗುರುತಿಸಿ ಉಳಿದವರ ಕಾರ್ಡ್‌ ಅನರ್ಹಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಐಶಾರಾಮಿ ಕಾರಿನಲ್ಲಿ ಓಡಾಡುವವರು ಕೂಡಾ ಬಿಪಿಎಲ್ ಕಾರ್ಡ್ ಹೊಂದಿರುವ ಕಾರಣ ಅರ್ಹರಿಗೆ ವಂಚನೆ ಆಗುತ್ತಿದೆ ಎಂದು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ತಾಲೂಕು ಕಚೇರಿಯಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್‌ಪಿ ನಟರಾಜ್‌ ಜನರನ್ನು ವಿನಾ ಕಾರಣ ಕಚೇರಿಗಳಿಗೆ ಅಲೆದಾಡಿಸಿದ್ರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ.

Continue Reading

LATEST NEWS

Trending

Exit mobile version