Monday, May 23, 2022

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ

ಉಡುಪಿ : ಹಿರಿಯ ಯಕ್ಷಗಾನಾ ಕಲಾವಿದ ಮಾನ್ಯ ತಿಮ್ಮಯ್ಯ (93 ವರ್ಷ) ಇಂದು ಮುಂಜಾನೆ ಕಾಸರಗೋಡಿನ ಮಾನ್ಯದಲ್ಲಿ ನಿಧನರಾದರು.

ಪುಂಡು ವೇಷ ಮತ್ತು ಸ್ತ್ರೀವೇಷದಲ್ಲಿ ವಿಶೇಷ ಪ್ರಸಿದ್ಧಿ ಪಡೆದ ಇವರು ಚೊಕ್ಕಾಡಿ, ಧರ್ಮಸ್ಥಳ, ಮಧೂರು, ಕದ್ರಿ, ಮುಲ್ಕಿ, ಉದ್ಯಾವರ ಸೇರಿದಂತೆ ಹತ್ತಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಸಿಹಿತ್ಲು ಮೇಳದ ಯಜಮಾನರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಿದೆ.

ಯಕ್ಷಗಾನ ಕಲಾರಂಗದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಇವರು ಕಳೆದ ಮೂರು ವರ್ಷಗಳ ಹಿಂದೆ ಸಂಸ್ಥೆಯಲ್ಲಿ ತನ್ನ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದ್ದರು.

ಮೃತರು ಬಂಧುಗಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics