Friday, July 1, 2022

ಮಂಗಳೂರಿನಲ್ಲಿ ಖ್ಯಾತ ಸ್ಯಾಕ್ಸೋಫೋನ್‌ ಕಲಾವಿದೆ ನೇಣಿಗೆ ಶರಣು

ಮಂಗಳೂರು: ಖ್ಯಾತ ಸ್ಯಾಕ್ಸೋಫೋನ್‌ ಕಲಾವಿದೆ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಕ್ತಿನಗರ ಬಳಿ ನಿನ್ನೆ ರಾತ್ರಿ ನಡೆದಿದೆ.


ಮೃತಳನ್ನು ಸುಜಾತ ದೇವಾಡಿಗ(29) ಎಂದು ಗುರುತಿಸಲಾಗಿದೆ.
ನಗರದ ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಕ್ತಿನಗರದ ಫ್ಲ್ಯಾಟ್‌ವೊಂದರಲ್ಲಿ ಅವಿಭಕ್ತ

ಕುಟುಂಬದಲ್ಲಿ ವಾಸವಾಗಿದ್ದ ಈಕೆ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತಮ ಸ್ಯಾಕ್ಸೋಫೋನ್‌ ಕಲಾವಿದೆಯಾಗಿದ್ದ ಈಕೆಗೆ ಕೊರೋನಾದಿಂದ ಕಾರ್ಯಕ್ರಮಗಳು ಸಿಗದೆ ಹೋದುದರಿಂದ ಮಾನಸಿಕವಾಗಿ ಕುಗ್ಗಿದ್ದರು.

ಜೊತೆಗೆ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದನ್ನು ತಾಳಲಾರದೆ ಮನನೊಂದು ಆತ್ಮಹತ್ಯೆಗೈದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಇವರು ಪತಿ ಹಾಗೂ ಎರಡೂವರೆ ವರ್ಷದ ಮಗುವನ್ನು ಅಗಲಿದ್ದಾರೆ. ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

Hot Topics

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...

ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದ ಸುಪ್ರೀಂ ಕೋರ್ಟ್‌

ನವದೆಹಲಿ: ಶರ್ಮಾ ಅವರ ಹಿಡಿತವಿಲ್ಲದ ನಾಲಿಗೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ದೇಶದ ಭದ್ರತೆಗೇ ಆತಂಕ ಉಂಟುಮಾಡಿದೆ. ಶರ್ಮಾ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.ಪ್ರವಾದಿ...

ಮಂಗಳೂರು: ಬಿರುವೆರ್ ಕುಡ್ಲ ದುಬೈ ಘಟಕದ ವತಿಯಿಂದ ನೆರವು ನಿಧಿ ವಿತರಣೆ

ಮಂಗಳೂರು: ಫ್ರೆಂಡ್ಸ್‌ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿ೦ದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು...