Saturday, July 2, 2022

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ, ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ಇಂದು ನಿಧನರಾಗಿದ್ದಾರೆ.

ಮೇ.06ರಂದು ಶುಕ್ರವಾರ ರಾತ್ರಿ ಚಿಕ್ಕ ಬಾಣಾವರ ಸಪ್ತಗಿರಿ ಹಾಸ್ಪಿಟಲ್‌ನಲ್ಲಿ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆ.


ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ ಹಾಸ್ಯ ನಟನಾಗಿ ಮಿಂಚಿದ್ದರು.

ತನ್ನ ಕಾಮಿಡಿ ಮಾತಿನ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ಇವರು ಜೋಗಿ ಸಿನಿಮಾ , ಕೆ ಜಿಎಫ್ ಸೇರಿದಂತೆ ಹಲವು‌ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ‌ನಟಿಸಿದ್ದರು.

ಈ ಪ್ರಸಿದ್ಧ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಭಾರತ- ಚೀನಾ ಯುದ್ದಕ್ಕೆ 60 ವರ್ಷ: ‘ರೇಖೆ ದಾಟಿದ ಗಡಿ’ ಪುಸ್ತಕ ಬಿಡುಗಡೆ

ಮಂಗಳೂರು: 1962ರಲ್ಲಿ ನಡೆದ ಭಾರತ ಚೀನಾ ಯುದ್ದಕ್ಕೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಟಿಕುಟಿರ ಪ್ರಕಾಶನ ಬೆಂಗಳೂರು ಪ್ರಸ್ತುತಿಯ ರೇಖೆ ದಾಟಿದ ಗಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಾವುಟಗುಡ್ಡದ...

ದ್ವೇಷದ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ಅಗತ್ಯ-ಶಾಸಕ ಖಾದರ್

ಮಂಗಳೂರು: ಪ್ರವಾದಿ ಕುರಿತಂತೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಇದೀಗ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಈ ಹಿಂದೆಯೇ ಕಾಂಗ್ರೆಸ್‌ ಅವರ ಹೇಳಿಕೆ ಖಂಡಿಸಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಇಂತಹ ಹೇಳಿಕೆಯನ್ನು ಪ್ರತಿಯೊಬ್ಬರೂ...

ಮಂಗಳೂರು: ಒಡೆದು ಹೋದ ನೀರಿನ ಪೈಪ್‌ ಪತ್ತೆ, ದುರಸ್ತಿ ಕಾಮಗಾರಿಗೆ ವೇಗ

ಮಂಗಳೂರು: ತುಂಬೆಯಿಂದ ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಭೂಗತ ಪೈಪ್‌ಲೈನ್ ಜೂನ್ 28ರಂದು ಪಂಪ್ವೆಲ್ ಫ್ಲೈಓವರ್‌ ಬಳಿ ಒಡೆದು ಹೋಗಿತ್ತು.ಇದೀಗ ಒಡೆದು ಹೋಗಿದ್ದ ಪೈಪನ್ನು ಪತ್ತೆ...