ಮಂಗಳೂರು/ಮುಂಬೈ : ತನ್ನ ಅಭಿನಯದ ಮೂಲಕ ಜನಮನ ಗೆದ್ದಿರುವ ಕಲಾವಿದ ವಿಕ್ರಾಂತ್ ಮಾಸ್ಸೆ ಶಾ*ಕ್ ಕೊಟ್ಟಿದ್ದಾರೆ. ಹೌದು, ವಿಕ್ರಾಂತ್ ಮಾಸ್ಸೆ ನಟನೆಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದು, ಈ ದಿಢೀರ್ ಬೆಳವಣಿಗೆ ಅವರ ಅಭಿಮಾನಿಗಳಿಗೆ ಆ*ಘಾತವನ್ನುಂಟು ಮಾಡಿದೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ನಿರ್ಧಾರಕ್ಕೆ ಕಾರಣವೇನು ಎಂಬ ಚರ್ಚೆ ಶುರುವಾಗಿದೆ.
ಹಿಂತಿರುಗಲು ಇದು ಸಮಯ :
ನಟನೆಗೆ ಗುಡ್ ಬೈ ಹೇಳುತ್ತಿರುವ ಬಗ್ಗೆ ವಿಕ್ರಾಂತ್ ಮಾಸ್ಸೆ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘’ಹಲೋ, ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ನಿಮ್ಮೆಲ್ಲರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ. ಈಗ ಮುಂದೆ ಹೆಜ್ಜೆ ಇಡುತ್ತಾ.. ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡಿದ್ದೇನೆ. ಪತಿಯಾಗಿ, ತಂದೆ ಮತ್ತು ಮಗನಾಗಿ, ಮತ್ತು ನಟನಾಗಿಯೂ ಸಹ. ಆದ್ದರಿಂದ 2025 ರಲ್ಲಿ, ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ಕಳೆದ 2 ಚಲನಚಿತ್ರಗಳು ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ಎಂದೆಂದಿಗೂ ಋಣಿ’’ ಎಂದು ಬರೆದುಕೊಂಡಿದ್ದಾರೆ.
ಗಿಮಿಕ್!?
ತಮ್ಮ ನೆಚ್ಚಿನ ನಾಯಕ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿರುವ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿವೃತ್ತಿ ಘೋಷಿಸದಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಇದನ್ನು ಸಿನಿಮಾ ಪ್ರಚಾರದ ಗಿಮಿಕ್ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರ್ಕೇಟಿಂಗ್ ಮೆಥಡಾಲಜಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ಸಕತ್ ಸೌಂಡ್ ಮಾಡ್ತಿದೆ ಮಾಸ್ಸೆ ಸಿನಿಮಾ :
ವಿಕ್ರಾಂತ್ ಮಾಸ್ಸೆ ಅಭಿನಯದ ‘ದಿ ಸಾಬರಮತಿ ರಿಪೋರ್ಟ್’ ಭಾರೀ ಸದ್ದು ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ವೇಳೆಯೇ ನಟ ನಿವೃತ್ತಿ ಘೋಷಿಸಿರೋದು ಆಶ್ಚರ್ಯ ತಂದಿದೆ. ಧೂಮ್ ಮಚಾವೋ ಧೂಮ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ವಿಕ್ರಾಂತ್, ಬಾಲಿಕಾ ವಧು ಮೂಲಕ ಸಕತ್ ಫೇಮಸ್ ಆದರು. ಲೂಟೆರಾ, ದಿಲ್ ದಢಕ್ನೇ ದೋ, ಹಾಫ್ ಗರ್ಲ್ ಫ್ರೆಂಡ್, ಛಪಾಕ್ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಜನಾನುರಾಗಿದ್ದ ನಟ, 12 th ಫೇಲ್ ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪಡೆದಿದ್ದಾರೆ.
ಇದನ್ನೂ ಓದಿ :ಕನ್ನಡದ ಟಾಪ್ ನಟನಾಗಿದ್ದ ವಿಷ್ಣುವರ್ಧನ್, ಮಾಲಾಶ್ರೀ ಜೊತೆ ಏಕೆ ನಟಿಸಲಿಲ್ಲ? ಕಾರಣ ಬಹಿರಂಗ !
ಸಿನಿಮಾಗಳಲ್ಲಿ ಬ್ಯುಸಿ :
ವಿಕ್ರಾಂತ್ ಮಾಸ್ಸೆ ನಟನೆಯಿಂದ ನಿವೃತ್ತಿ ಘೋಷಿಸಿದ್ದು, ಅವರ ಕೈನಲ್ಲಿ ಇನ್ನೂ 3 ಸಿನಿಮಾಗಳಿವೆ. ಯಾರ್ ಜಿಗ್ರಿ, ಟಿಎಮ್‌ಐ, ಆಂಖೋಕಿ ಗುಸ್ತಾಖಿಯಾ ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.