ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ಈ ವಾರದ ಸೂಪರ್ ಸಂಡೇ ಕೂಡ ಎಂದಿನಂತೆ ಸ್ಪೆಷಲ್ ಆಗಿರಲಿದೆ. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರನ್ನು ಮನೆಯಿಂದ ಹೊರಗಟ್ಟಿಯೇ ಸಿದ್ದ ಎಂದು ಮನೆಮಂದಿ ನಿರ್ಧರಿಸಿದಂತಿದೆ.
ಭಾನುವಾರದ ಎಪಿಸೋಡ್ ನಲ್ಲಿ ಈ ವಾರದ ಟಾಸ್ಕ್ ಗಳ ಬಗ್ಗೆ ಕಿಚ್ಚನ ಪಂಚಾಯ್ತಿ ಮುಂದುವರಿದಿದ್ದು, ಬಿಗ್ ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ.
ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು ಎಂದಿದ್ದಾರೆ ಈ ಆಟದಲ್ಲಿ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲಾ ಸದಸ್ಯರು ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!
ಭವ್ಯ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾ ಕುಂದಾಪುರ ಅವರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾ ಅವರ ಕಣ್ಣು ನಿಜಕ್ಕೂ ಕೆಂಪಗಾಗಿಸಿದೆ.
ಐಶ್ವರ್ಯಾ ಅವರು ಚೈತ್ರಾ ಅವರಿಗೆ ನೀವು ಮುಖವಾಡ ಕಳಚುತ್ತೇನೆ ಎಂದಿದ್ದೀರಿ. ಆದರೆ ಅವರೇ ಒಂದು ವೇಷ ತೊಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಹನುಮಂತು ಕೂಡ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಹಂಗೆ ಚೈತ್ರಕ್ಕ ಈ ಮನೆಯನ್ನೇ ಕೆಡಿಸಿಬಿಟ್ಟಿದ್ದಾಳೆ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.
ಮೋಕ್ಷಿತಾ ಅವರು, ಕಳಪೆ ಬಂತು ಅಂದ್ರೆ ಚೈತ್ರಾ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್‌ನಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ಇಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ. ಫೈರ್ ಬ್ರಾಂಡ್ ಈಸ್ ಬ್ಯಾಕ್ ಅಂತಾರೆ ಇದು ಹೇಗೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಈ ಡೌವ್‌ಗಳನ್ನ ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು ಎಂದು ಚೈತ್ರಾ ಅವರಿಗೆ ರಜತ್ ಖಡಕ್ ಗೇಟ್ ಪಾಸ್ ಕೊಟ್ಟಿದ್ದಾರೆ.
ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿರುವುದನ್ನು ಕಂಡು ಚೈತ್ರಾಗೆ ಆಘಾತ ಉಂಟುಮಾಡಿದೆ.