Connect with us

    LATEST NEWS

    ನಾಳೆ ಮಧ್ಯರಾತ್ರಿ ಆಕಾಶದಲ್ಲಿ ಗೋಚರಿಸಲಿದೆ ಉಲ್ಕಾಪಾತ-ಬರಿಗಣ್ಣಿನಿಂದಲೂ ವೀಕ್ಷಿಸಬಹುದು

    Published

    on

    ನವದೆಹಲಿ: ನಾಳೆ ಅಂದ್ರೆ ಡಿ. 13ರ ಮಧ್ಯರಾತ್ರಿ ಮತ್ತು ಡಿ. 14ರ ಮುಂಜಾನೆ ಆಕಾಶದಲ್ಲಿ ಉಲ್ಕಾಪಾತ ಕಾಣಿಸಿಕೊಳ್ಳುವುದರಿಂದ ಖಗೋಳಾಸ್ತಕರು ನೋಡಿದರೆ ಆ ಅದ್ಭುತ ಕ್ಷಣಗಳನ್ನು ಆನಂದಿಸಬಹುದು.


    ಉಲ್ಕೆ ಬೀಳುವುದನ್ನು ನೋಡಲು ಶುಭ್ರ ಆಕಾಶ ಇರಬೇಕು. ಚಂದಿರ ಹೆಚ್ಚು ಪ್ರಕಾಶಮಾನವಾಗಿರಬಾರದು. ಈ ಬಾರಿ ಮೋಡದ ವಾತಾವರಣ ಇರುವುದರಿಂದ ಉಲ್ಕೆಗಳ ಪತನ ಕಾಣಿಸಬಹುದೇ ಎಂಬ ಕುತೂಹಲವಿದೆ.

    ಬೆಳಕಿನ ಮಾಲಿನ್ಯ ಇಲ್ಲದ ನಗರ ಪ್ರದೇಶಗಳಿಂದ ದೂರ ಹೋಗಿ ನೋಡಿದರೆ ಉಲ್ಕಾಪಾತ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ.

    ಆದರೂ ಡಿ. 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆ ಸಮಯಕ್ಕೆ ಉಲ್ಕಾಪಾತ ತನ್ನ ಉತ್ತುಂಗಕ್ಕೆ ತಲುಪಲಿದೆ. ಇದನ್ನು ನೋಡಲು ದೂರದರ್ಶಕದ ಆವಶ್ಯಕತೆ ಇಲ್ಲ.

    ಇನ್ನು ಇದನ್ನು ಬರಿ ಕಣ್ಣಿನಿಂದ ವೀಕ್ಷಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
    ಈ ವರ್ಷ ಡಿ. 13ರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಉಲ್ಕಾಪಾತಗಳು ಭೂಮಿಯ ಸಮೀಪ ಬರಲಿವೆ.

    ಉಲ್ಕಾಪಾತವನ್ನು ವೀಕ್ಷಿಸಲು ಬೆಂಗಳೂರಿನ ಜವಾಹರಲಾಲ್‌ ತಾರಾಲಯ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

    chikkamagaluru

    ಮುಳ್ಳಯ್ಯನಗಿರಿಯಲ್ಲಿ ಪ್ರಪಾತಕ್ಕೆ ಉರುಳಿದ ಕಾರು..!

    Published

    on

    ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಸುಮಾರು 250 ಅಡಿ ಆಳದ ಪ್ರಪಾತಕ್ಕೆ ಕಾರು ಉರುಳಿ ಬಿದ್ದಿದ್ದು, ಪ್ರಯಾಣಿಕರು ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಕಾರಿನಲ್ಲಿ ಹೈದರಾಬಾದ್ ಮೂಲದ ಐವರು ಪ್ರವಾಸಿಗರು ಮುಳ್ಳಯ್ಯನಗಿರಿ ವೀಕ್ಷಣೆಗೆ ಬಂದಿದ್ದರು. ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪ್ರಪಾತಕ್ಕೆ ಉರುಳಿ ಬಿದ್ದಿದೆ. ತಕ್ಷಣ ಘಟನೆ ವೀಕ್ಷಿಸಿದ ಕೆಲವರು ಪ್ರಪಾತಕ್ಕೆ ಬಿದ್ದಿದ್ದ ಪ್ರವಾಸಿಗರನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಗಾಯಾಳುಗಳನ್ನು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    FILM

    ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡ್ರಾ ಐಶ್ – ಅಭಿ; ಏನಿದರ ಅಸಲಿತ್ತು?

    Published

    on

    ಮುಂಬೈ : ಬಾಲಿವುಡ್‌ ಸೂಪರ್‌ಸ್ಟಾರ್ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇದೀಗ ದಂಪತಿ ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡಿದ್ದಾಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪಿಂಕ್ ಪ್ಯಾಂಥರ್ಸ್‌ ಕಬ್ಬಡಿ ಪಂದ್ಯದ ಸಮಯದಲ್ಲಿ ಗ್ಯಾಲರಿಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ಎಂದು ಹೇಳಲಾಗಿದೆ.


    ಪ್ರೋ ಕಬಡ್ಡಿ ಪಂದ್ಯಾವಳಿಯ ವೇಳೆ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ಪುತ್ರಿ ಆರಾಧ್ಯ ಜೊತೆಯಲ್ಲಿ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್‌  ಸೊಸೆ ನವ್ಯಾ, ಮತ್ತಾಕೆಯ ಸ್ನೇಹಿತ ಸಿಕಂದರ್ ಕೂಡಾ ಗ್ಯಾಲರಿಯಲ್ಲಿ ಇದ್ದಾರೆ. ಈ ವೇಳೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ವಾಗ್ವಾದ ನಡೆದಿದ್ದು , ಐಶ್ವರ್ಯಾ ಕೈ ಹಿಡಿದು ಸಮಜಾಯಿಶಿ ನೀಡುವ ಪ್ರಯತ್ನವನ್ನು ಅಭಿಷೇಕ್‌ ಮಾಡಿದ್ದಾರೆ. ಆದ್ರೆ, ಐಶ್ವರ್ಯಾ ರೈ ಮಾತ್ರ ಕೋಪದಿಂದ ಹರಿಹಾಯ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

    ಪಿಂಕ್ ಪ್ಯಾಂಥರ್ಸ್‌ ತಂಡದ ಮಾಲಕರಾಗಿರುವ ಅಭಿಷೇಕ್‌ ಬಚ್ಚನ್‌ ತಂಡಕ್ಕೆ ಪ್ರೋತ್ಸಾಹ ನೀಡಲು ಕುಟುಂಬ ಸಮೇತರಾಗಿ ಬಂದಿದ್ದರು. ಇದು ಜನವರಿಯಲ್ಲಿ ಮುಂಬೈನ ಸರ್ದಾರ್ ವಲ್ಲಭಾಯಿ ಪಟೇಲ್ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಘಟನೆ ಎಂದು ಗೊತ್ತಾಗಿದೆ.

    ಈ ಹಿಂದೆ ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ನಡುವೆ ನಿರಂತರ ಜಗಳ ನಡೆಯುತ್ತದೆ ಎಂದು ಹೇಳಿದ್ದರು. 2010 ರಲ್ಲಿ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲೂ ಐಶ್ವರ್ಯಾ ರೈ ಅಭಿಷೇಕ್‌ ಯಾವಾಗಲು ಜಗಳ ಆಡ್ತಾರೆ ಅಂತ ಹೇಳಿದ್ದರು. ಈ ವೇಳೆ ಅಭಿಷೇಕ್ ಅದು ಜಗಳ ಅಲ್ಲ ಭಿನ್ನಾಭಿಪ್ರಾಯ ಎಂದು ಸರಿ ಮಾಡಿದ್ದರು. ಅಂಬಾನಿ ಮಗನ ಮದುವೆಯಲ್ಲೂ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಬಳಿಕ ಐಶ್ವರ್ಯಾ ತನ್ನ ಮದುವೆ ಉಂಗರುವಿಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.

    ಇದನ್ನೂ ಓದಿ : ಸರಿಯಾದ ಬಟ್ಟೆ ಹಾಕದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕುವೆ; ಪತ್ರಕರ್ತನ ಹೆಂಡತಿಗೆ ಬೆದರಿಕೆ
    ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವೀಡಿಯೋ ಕೂಡ ಇದೇ ರೀತಿಯಾಗಿದ್ದಾಗಿದೆ. ಅಸಲಿಗೆ ಪಂದ್ಯದಲ್ಲಿ ಗೆದ್ದಿದ್ದ ಅಭಿಷೇಕ್ ಬಚ್ಚನ್‌ ಅವರ ಪಿಂಕ್ ಪ್ಯಾಂಥರ್ ತಂಡಕ್ಕೆ ದಂಪತಿ ಚಿಯರ್‌ಅಪ್‌ ಮಾಡಿದ್ದಾರೆ. ಈ ವೇಳೆ ಪಂದ್ಯದ ವಿಚಾರವಾಗಿ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

    Continue Reading

    LATEST NEWS

    ಮೇಷ್ಟ್ರ ಕಾಮಚೇಷ್ಟೆ; ಸರ್ಕಾರಿ ಶಾಲೆ ಶಿಕ್ಷಕ ಅರೆಸ್ಟ್..!

    Published

    on

    ಮಂಗಳೂರು/ನವದೆಹಲಿ: ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಪ್ಪನಾಡು ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 42 ವಿದ್ಯಾರ್ಥಿನಿಯರಿಗೆ ಗಣಿತ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
    ಒಂದು ತಿಂಗಳ ಬಳಿಕ ತಮಿಳುನಾಡಿನ ನಾಗರಕೋಯಿಲ್‌ನ ಕೇಂದ್ರೀಯ ವಿದ್ಯಾಲಯ ಶಾಲೆಯ ಶಿಕ್ಷಕಿಯೊಬ್ಬರು ಎಂಟನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದ್ದು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

    ಗಣಿತ ಶಿಕ್ಷಕ 35 ವರ್ಷದ ಬಿ.ಮುತ್ತುಕುಮಾರನ್ ಬಂಧಿತ ಆರೋಪಿ. ಪೋಷಕರು ಮತ್ತು ವಿದ್ಯಾರ್ಥಿಗಳ ಸರಣಿ ದೂರಿನ ಮೇರೆಗೆ ಅಕ್ಟೋಬರ್ 9 ರಂದು ಒರತನಾಡು ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದಿದ್ದರು.
    2024ರ ಆಗಸ್ಟ್ 12 ರಂದು 9 ಹಾಗೂ ಹತ್ತನೇ ತರಗತಿಗಳಲ್ಲಿ ಓದುತ್ತಿರುವ ಹಲವಾರು ಹುಡುಗಿಯರ ಪೋಷಕರು ಮುತ್ತುಕುಮಾರನ್ ಅವರ ಆಪಾದಿತ ದುರ್ವರ್ತನೆಯನ್ನು ವರದಿ ಮಾಡಲು ಮಕ್ಕಳ ಸಹಾಯವಾಣಿ (1098) ಯನ್ನು ಸಂಪರ್ಕಿಸಿದ್ದರು.
    ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಆಗಸ್ಟ್ 13 ರಂದು ಶಾಲೆಗೆ ಭೇಟಿ ನೀಡಿ, ವಿವೇಚನಾಯುಕ್ತ ವಿಚಾರಣೆ ನಡೆಸಿದರು. ಅನೇಕ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳದ ಘಟನೆಗಳನ್ನು ವರದಿ ಮಾಡಿದ್ದಾರೆ.
    ಈ ವಿಚಾರಣೆಯ ನಂತರ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮುಖ್ಯ ಶಿಕ್ಷಣಾಧಿಕಾರಿಗಳಿಗೆ ವಿವರವಾದ ವರದಿಯನ್ನು ಸಲ್ಲಿಸಿದರು. ಇದರ ಪರಿಣಾಮವಾಗಿ, ಮುತ್ತುಕುಮಾರನನ್ನು ಆಗಸ್ಟ್ 14 ರಂದು ಬೋಧನಾ ಕರ್ತವ್ಯದಿಂದ ಅಮಾನತುಗೊಳಿಸಲಾಯಿತು.
    ಆದರೆ, ಅವರ ವಿರುದ್ಧ ತಕ್ಷಣದ ಕ್ರಿಮಿನಲ್ ಕ್ರಮ ಕೈಗೊಳ್ಳದ ಕಾರಣ ಪೋಷಕರು ಬಂಧಿಸುವಂತೆ ಒತ್ತಾಯಿಸಿ ಅಕ್ಟೋಬರ್ 9 ರಂದು ಪ್ರತಿಭಟನೆ ನಡೆಸಿದ್ದರು. ನಂತರ ಮಕ್ಕಳ ಸಹಾಯವಾಣಿಯ ಅಧಿಕಾರಿಯೊಬ್ಬರು ಒರತನಾಡು ಎಲ್ಲಾ ಮಹಿಳಾ ಪೊಲೀಸ್ ಠಾಣೆಗೆ ಔಪಚಾರಿಕವಾಗಿ ದೂರು ನೀಡಿದ್ದಾರೆ. ಮುತ್ತುಕುಮಾರನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದರು. ನಂತರ ಆತನನ್ನು ಒರತನಾಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪುದುಕ್ಕೊಟ್ಟೈ ಜೈಲಿಗೆ ಕಳುಹಿಸಲಾಗಿದೆ.ಈ ಸಂಬಂಧ ಪ್ರಕರಣದ ತನಿಖೆ ಮುಂದುವರಿದಿದೆ.

    Continue Reading

    LATEST NEWS

    Trending