ಬೆಂಗಳೂರು: ಫೇಕ್ ವೆಬ್‌ಸೈಟ್ ಸೃಷ್ಟಿಸಿ ಮನೆಯ ಸಾಮಗ್ರಿ ಮತ್ತು ವಾಹನಗಳನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ರಾಜುರಾಮ್ ಶಿರವಿ (35), ಬೆಂಗಳೂರು ನಗರದ ಗೊರಗುಂಟೆ ಪಾಳ್ಯ ನಿವಾಸಿ ದಿನೇಶ ಕುಮಾರ್ (23) ಬಂಧಿತ ಆರೋಪಿಗಳು.
ವಿಆರ್‌ಎಲ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಕ್ರಿಯೇಟ್ ಮಾಡಿ ಅದರ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಿ ಸೈಬರ್ ಅಪರಾಧಗಳಲ್ಲಿ ತೊಡಗಿದ್ದಾರೆಂದು ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪತ್ತೆ ಕಾರ್ಯಕ್ಕೆ ಡಾ. ಅನೂಪ್ ಎ ಶೆಟ್ಟಿ, ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು, ಈಶಾನ್ಯ ವಿಭಾಗ, ಬೆಂಗಳೂರು ನಗರ ಅವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಗಳಾದ ಸಂತೋಷ್ ರಾಮ್.ಆರ್ ಪೊಲೀಸ್ ಇನ್ಸ್ಪೆಕ್ಟರ್, ರಘು ಪಿ.ಎಸ್.ಐ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.