Connect with us

LATEST NEWS

ರಾಜ್ಯಕ್ಕೂ ಕಾಲಿಟ್ಟ ಮುಂಬೈ ಚಾಳಿ: ಪೊಲೀಸ್‌ ಶೂಟೌಟ್‌ಗಳ ಹಿಂದೆ ‘ಧನ’ದ ವಾಸನೆ

Published

on

ಬೆಂಗಳೂರು: ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಆಗಾಗ ಶೂಟೌಟ್‌ ಸುದ್ದಿಗಳು ಕೇಳಿಬರುತ್ತಿವೆ. ಈ ಶೂಟೌಟ್‌ಗಳ ಹಿಂದೆ ಹಣದ ವ್ಯವಹಾರದ ವಾಸನೆ ಬಡಿಯುತ್ತಿದೆ ಎಂದು ಸುದ್ದಿ ತಿಳಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ.
ಈ ಡೀಲ್‌ನಲ್ಲಿ ಪೊಲೀಸರ ಗುಂಡು ಚರ್ಮಕ್ಕೆ ತಗುಲಿದರೆ ಒಂದು ರೇಟು, ಬುಲೆಟ್‌ ಸವರಿ ಹೋದರೆ ಒಂದು ರೇಟು. ದುಡ್ಡು ಇಲ್ಲದಿದ್ದ ಕೇಸ್‌ಗಳಲ್ಲಿ ಖಾಕಿ ಗುಂಡೇಟಿಗೆ ಮಾಂಸ ಕಿತ್ತು ಬರೋದು ಕನ್ಪರ್ಮ್ ಎನ್ನಲಾಗಿದೆ‌.


ಶೂಟೌಟ್‌ನಲ್ಲಿಯೂ ಪೊಲೀಸರು ದುಡ್ಡು ಮಾಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅದರ ಹಿನ್ನೆಲೆಯಲ್ಲಿ ಇನ್ನು ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಬೇಕೇ ಬೇಕು. ಶೂಟೌಟ್ ಆದ ಕಾಲಿನ ಎಕ್ಸ್ ರೇಯನ್ನ ಹಿರಿಯ ಅಧಿಕಾರಿಗಳಿಗೆ ಕಳಿಸಲೇಬೇಕು, ಗುಂಡು ಬಿದ್ದ ಸ್ಥಳದ ಅನ್ವಯ ಗುಂಡು ನುಗ್ಗಿಸಿದವನು ಸಮಜಾಯಿಷಿ ನೀಡಬೇಕು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ ಎನ್ನಲಾಗಿದೆ. ರೌಡಿಶೀಟರ್ ಗಳಿಂದ ತಿಂಗಳ ವಸೂಲಿ ಬಗ್ಗೆಯೂ ಹಿರಿಯ ಪೊಲೀಸ್ ಆಯುಕ್ತ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.
ರೌಡಿ ಪರೇಡ್ ಮಾಡಿ ವಾರ್ನಿಂಗ್ ನೀಡಿದ್ದರೂ ಭೀಕರ ಹತ್ಯೆಯಾಗಿತ್ತು. ಬೆದರಿಕೆಗಾಗಿ ಪೊಲೀಸರನ್ನ ಬಳಸಿಕೊಳ್ಳುತ್ತಿರುವ ಕಿಡಿಗೇಡಿಗಳು, ಬೆದರಿಕೆಗೆ ಎನ್ ಸಿ ಆರ್ ಎಫ್ ಐ ಆರ್ ಗಳನ್ನ ಅಸ್ತ್ರ ಮಾಡಿಕೊಂಡಿರೋ ಕಿಡಿಗೇಡಿಗಳು, ಆಸ್ತಿ ಸಮಸ್ಯೆಗಳು, ಹಣ ವಸೂಲಿಗೆ, ಬಡ್ಡಿ ಕೇಸ್ ಗಳಿಗೆ ದೂರು ದಾಖಲಿಸುತ್ತಿರುವ ಕೇಸ್ ಗಳ ಪತ್ತೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಠಾಣೆಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಬ್ಲಾಕ್ ಮೇಲ್ ಮಾಡೋದಕ್ಕೂ ಪೊಲೀಸರನ್ನ ಬಳಸುತ್ತಿರುವ ಕಿಡಿಗೇಡಿಗಳು, ದೂರು ಬಂದ ಕೂಡಲೇ ದೂರುದಾರನ ಮಾಹಿತ ಆಧರಿಸಿ ಎಫ್ ಐ ಆರ್ ಅಥವಾ ಎನ್ ಸಿ ಆರ್ ದಾಖಲಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಎಫ್ ಐ ಆರ್, ಎನ್ ಸಿ ಆರ್ ಗಳನ್ನು ಹಿರಿಯ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

LATEST NEWS

ಆಭರಣ ಪ್ರಿಯರಿಗೆ ನಿರಾಸೆ….ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ…!

Published

on

ಬೆಂಗಳೂರು : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ನಿನ್ನೆಗಿಂತ ಇಂದು(ಮಾ.29)  ಚಿನ್ನದ ದರ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆಯೂ ಕೂಡ ಹೆಚ್ಚಾಗಿದ್ದು, ಶುಭಕಾರ್ಯಗಳಿಗೆ ಚಿನ್ನ ಖರೀದಿಸಬೇಕು ಎಂದುಕೊಂಡವರು ಯೋಚಿಸುವಂತಾಗಿದೆ.

ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

ಎಷ್ಟಿದೆ ಬೆಲೆ ?
ಸದ್ಯ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 61,700 ರೂಪಾಯಿ ಇದ್ದು, 24 ಕ್ಯಾರೆಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 67,310 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,750 ರೂಪಾಯಿ ಇದೆ.

ಒಂದು ಗ್ರಾಂ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ – 6,170 ರೂಪಾಯಿ
24 ಕ್ಯಾರೆಟ್ ಚಿನ್ನದ ದರ – 6,731 ರೂಪಾಯಿ

10 ಗ್ರಾಂ ಚಿನ್ನದ ದರ

22 ಕ್ಯಾರೆಟ್ ಆಭರಣ ಚಿನ್ನದ ದರ – 61,700 ರೂಪಾಯಿ
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 67,310 ರೂಪಾಯಿ

8 ಗ್ರಾಂ ಚಿನ್ನದ ದರ
22 ಕ್ಯಾರೆಟ್ ಆಭರಣ ಚಿನ್ನದ ದರ – 49,360 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು- 61,700 ರೂಪಾಯಿ
ಚೆನ್ನೈ – 62,500 ರೂಪಾಯಿ
ಮುಂಬೈ – 61,700 ರೂಪಾಯಿ
ಕೇರಳ -61,700 ರೂಪಾಯಿ
ಕೋಲ್ಕತ್ತಾ – 61,700 ರೂಪಾಯಿ
ಜೈಪುರ್ -61,850 ರೂಪಾಯಿ
ಭುವನೇಶ್ವರ್- 61,700 ರೂಪಾಯಿ
ಅಹ್ಮದಾಬಾದ್- 61,750 ರೂಪಾಯಿ
ಲಕ್ನೋ – 61,850 ರೂಪಾಯಿ
ನವದೆಹಲಿ – 61,850 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು-7,750 ರೂಪಾಯಿ
ಚೆನ್ನೈ- 8,050 ರೂಪಾಯಿ
ಮುಂಬೈ-7,750 ರೂಪಾಯಿ
ಕೋಲ್ಕತ್ತಾ-7,750 ರೂಪಾಯಿ
ನವದೆಹಲಿ-7,750 ರೂಪಾಯಿ

Continue Reading

LATEST NEWS

ಏಪ್ರಿಲ್ 3 ರ ವರೆಗೆ ಭಾರೀ ಮಳೆ ಮುನ್ಸೂಚನೆ; ಎಲ್ಲೆಲ್ಲಿ ಮಳೆ?

Published

on

ದೇಶದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದೆ. ಮಳೆ ಬಂದರೆ ಸಾಕು ಅನ್ನೋ ಮನೋಭಾವನೆ ಇದೆ. ಈ ನಡುವೆ ಏಪ್ರಿಲ್‌ 3ರವರೆಗೆ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ?

ಮಾರ್ಚ್ 29 ಮತ್ತು 30 ರಂದು ಪಶ್ಚಿಮ ಹಿಮಾಲಯ ಪ್ರದೇಶದ ಪ್ರತ್ಯೇಕವಾಗಿ ಅಲ್ಲಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಮಾರ್ಚ್ 29 ರಿಂದ 31 ರ ವರೆಗೆ ವಾಯುವ್ಯ ಮತ್ತು ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಸಾಧರಾಣ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

ಚಂಡಮಾರುತದ ಪರಿಣಾಮವಾಗಿ, ಬಿಹಾರದ, ದಕ್ಷಿಣ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಚದುರಿದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಶ್ಚಿಮ ಬಂಗಾಳ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 3ರ ವರೆಗೆ ಆರ್ದ್ರ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್‌ಗಳು ಮುಂದಿನ ಕೆಲವು ದಿನಗಳವರೆಗೆ ಮಳೆ ಸಾಧ್ಯತೆ ಇದೆ.

ಮಾರ್ಚ್ 31 ರಂದು ಹಿಮಾಲಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವ್ಯಾಪಕವಾದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳ ವರೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

ಇದಲ್ಲದೆ, ಅರುಣಾಚಲ ಪ್ರದೇಶದದಲ್ಲಿ ಏಪ್ರಿಲ್ 1 ರಂದು ಅಲ್ಲಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Continue Reading

DAKSHINA KANNADA

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಲಕ್ಷಾಧಿಪತಿ….ಅವರ ಆಸ್ತಿ ವಿವರ ಇಲ್ಲಿದೆ!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಅವರ ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ. ಆಗಿದೆ. ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ. ಆಗಿದೆ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ., ಇನ್ನು ಒಟ್ಟು 9,62,010 ರೂ. ಅನ್ನು ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಇನ್ನು ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್​ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ. ಅವರು, ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.

ಬ್ರಿಜೇಶ್‌ ಚೌಟ ಯಾರು?

ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ತೊಡಗಿಕೊಂಡಿದ್ದು, ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್ ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.

ಇದನ್ನೂ ಓದಿ ಐದು ವರ್ಷದಲ್ಲಿ ನಾಲ್ಕು ಪಟ್ಟು ಏರಿದ ಆಸ್ತಿ…! ಪ್ರಜ್ವಲ್ ರೇವಣ್ಣ ಘೋಷಿಸಿದ ಆಸ್ತಿ ವಿವರದಲ್ಲಿ ಬಹಿರಂಗ..!!

ನಳಿನ್ ಬದಲು ಚೌಟ ಕಣಕ್ಕೆ :

ಕಳೆದ 15 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಹಿಡಿತದಲ್ಲಿದೆ. ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರು ಗೆದ್ದುಕೊಂಡು ಬಂದಿದ್ದರು. ಈ ಬಾರಿ ಮಾಜಿ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಆ ಮೂಲಕ ನಳಿನ್ ಕುಮಾರ್ ಕಟೀಲ್​ಗೆ ಟಿಕೆಟ್​ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರ ಅಫಿಡವಿಟ್‌ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.

Continue Reading

LATEST NEWS

Trending