Connect with us

    LATEST NEWS

    Facebook crises : ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್​ಬರ್ಗ್ ಘೋಷಣೆ..!

    Published

    on

    ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್ (Facebook), ಇನ್​ಸ್ಟಾಗ್ರಾಮ್ (Instagram) ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್​ಆ್ಯಪ್ (WhatsApp) ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ (Meta ) 11,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ದತೆಗಳು ನಡೆದಿವೆ.

    ನವದೆಹಲಿ: ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್ (Facebook), ಇನ್​ಸ್ಟಾಗ್ರಾಮ್ (Instagram) ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್​ಆ್ಯಪ್ (WhatsApp) ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ (Meta ) 11,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ದತೆಗಳು ನಡೆದಿವೆ.

    ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾರ್ಕ್ ಝುಕರ್​ಬರ್ಗ್ (Mark Zuckerberg ) ಈ ವಿಷಯ ಬಹಿರಂಗಪಡಿಸಿದ್ದಾರೆ.

    ಜಾಗತಿಕವಾಗಿ ಕಂಪನಿಯ ಶೇಕಡಾ 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅವರು ಅಧಿಕೃತ ಬ್ಲಾಗ್​ಪೋಸ್ಟ್​ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಂಪನಿಯು ಅಪಾರ ನಷ್ಟ ಅನುಭವಿಸುತ್ತಿದ್ದು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕಳೆದ ವಾರವಷ್ಟೇ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​​ನಿಂದ 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

    LATEST NEWS

    ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾ*ಣ ಕಳೆದುಕೊಂಡ ಪಾಗಲ್ ಪ್ರೇಮಿ

    Published

    on

    ಮಂಗಳೂರು/ಮೈಸೂರು : ಗೆಳತಿ ದೂರವಾದಳೆಂದು ಗೆಳೆಯನು ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಬಳಿಕ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ.

    ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ ವಿನಯ್ ಆ*ತ್ಮಹ*ತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.

    ವಿನಯ್ ಹಾಗೂ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಯುವತಿಯ ಮನೆಯವರು ಇವರ ಪ್ರೀತಿಯನ್ನು ಒಪ್ಪಿರಲಿಲ್ಲ. ಅಷ್ಟೇ ಅಲ್ಲದೇ, ಅವಳ ಇಚ್ಛೆಗೆ ವಿರುದ್ದವಾಗಿ ಬೇರೆ ಮದುವೆ ಮಾಡಿಸಿದ್ದರು. ಆದರೂ ಅವರಿಬ್ಬರ ಪ್ರೀತಿ ಮುಂದುವರೆದಿತ್ತು. ಯುವತಿ ಪೋಷಕರು ಈ ಪ್ರೀತಿಗೆ ಅಡ್ಡಿಯಾದರೂ. ಮಗಳು ಬೇರೆ‌ ಹುಡುಗನ ಜೊತೆ ಮದುವೆಯಾದರೆ ಎಲ್ಲಾ ಸರಿಯಾಗುತ್ತೆ ಎಂಬುವುದು ಯುವತಿಯ ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ವಿನಯ್‌ನೊಂದಿಗೆ ಯುವತಿಯ ಸುತ್ತಾಟ ಮುಂದುವರೆದಿದ್ದು, ಕೆಲವು ಬಾರಿ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದ ವೇಳೆ ಮನೆಯವರು ಹುಡುಕಿಕೊಂಡು ಬಂದಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

    ಜನವರಿ 16 ರಂದು ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಅದರಿಂದ ವಿನಯ್ ಅವಮಾನಕ್ಕೊಳಗಾಗಿದ್ದ.‌ ಕೊನೆಗೆ ಮಹಿಳೆಯೂ’ನಾನು ನನ್ನ ಪತಿ ಜೊತೆ ಹೋಗುವೆ’ ಎಂದು ಹೇಳಿದ್ದಳು. ಇದರಿಂದ ಅಸಮಧಾನಗೊಂಡ ವಿನಯ್ ಆಕೆಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದು ತನ್ನ ಸಹೋದರಿಯ ಮನೆಗೆ ಹೋಗಿ ನೇ*ಣಿಗೆ ಶರಣಾಗಿದ್ದಾನೆ‌. ಈ ಸಾ*ವಿಗೆ ಯುವತಿಯ‌ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ. ‘ಅವರಿಬ್ಬರು ಚೆನ್ನಾಗಿಯೇ ಇದ್ದರು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು’ ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ.

    ಪ್ರೀತಿ ಪರಿಶುದ್ಧವಾಗಿತ್ತು , ಆದರೆ ಕುಟುಂಬಕ್ಕೆ ಅದೇ ಪ್ರೀತಿ ಕಳಂಕವಾಗಿ ಕಂಡಿತ್ತು. ಮನೆಯವರ ಸ್ವಾರ್ಥಕ್ಕೆ ಇಲ್ಲಿ ಒಂದು ಜೀವ ಬ*ಲಿಯಾಗಿದೆ. ಮಗಳು ಮನೆ ಮರ್ಯಾದೆ ಹೌದು ಆದರೆ ಅವಳ ಭಾವನೆಗೂ ಸ್ಪಂದಿಸುವ ಗುಣ ಮನೆಯವರಲ್ಲಿರಬೇಕು. ಅವಳ ಜೀವನ, ಅವಳ ಇಷ್ಟ, ಅವಳ ಆಯ್ಕೆಯಾಗಿರುತ್ತದೆ. ಒಂದು ವೇಳೆ ವಿನಯ್‌ನನ್ನು ಯುವತಿಯ ಮನೆಯವರು ಒಪ್ಪಿದ್ದಲ್ಲಿ ಒಂದು ಜೀವ ಬದುಕುಳಿಯುತ್ತಿತ್ತು. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಾ ಜೊತೆಯಾಗಿ ಬಾಳಬಹುದಿತ್ತು. ಆದರೆ, ಎಲ್ಲವೂ ಕೈ ಮೀರಿಯಾಗಿತ್ತು. ಏನೇ ಇರಲಿ, ಮದುವೆಯ ನಂತರವೂ ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ವಿನಯ್ ಪ್ರಾ*ಣ ಕಳೆದುಕೊಂಡದ್ದು ಮಾತ್ರ ದುರಂತವೇ ಸರಿ.

    Continue Reading

    FILM

    ಮಂಥರೆಯಾಗಿ ಮೊದಲ ಬಾರಿ ಯಕ್ಷಗಾನದಲ್ಲಿ ಮಿಂಚಿದ ನಟಿ ಉಮಾಶ್ರೀ

    Published

    on

    ಮಂಗಳೂರು/ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶುಕ್ರವಾರ (ಜ.17) ರಾತ್ರಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀಯವರು ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಮಂಥರೆ ಪಾತ್ರದಲ್ಲಿ ಅಭಿನಯಿಸಿದರು.

    ಯಕ್ಷಗಾನ ರಂಗದಲ್ಲಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗದಲ್ಲಿ ಉಮಾಶ್ರೀಯವರು ಪಾತ್ರ ನಿರ್ವಹಿಸಿದರು.
    ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ ನಡೆಯಿತು.

    ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ನಟಿಗೆ ಕೂತುಹಲಕಾರಿಯಾಗಿ ಕಾಯುತ್ತಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀಯವರೊಂದಿಗೆ ಸಂಭಾಷಣೆಯಲ್ಲಿ ಗಮನ ಸೆಳೆದರು.

    ಇದನ್ನೂ ಓದಿ: ಧರ್ಮಸ್ಥಳ : ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಮಂಥರೆ ಪಾತ್ರವನ್ನು ಉಮಾಶ್ರೀ ಅವರು ತುಂಬಾನೇ ಚೆನ್ನಾಗಿ ಮಾಡಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರೋ ಉಮಾಶ್ರೀ ಅವರು, ಈ ಒಂದು ಮಂಥರೆ ಪಾತ್ರದ ಮೂಲಕವೇ ಹೊನ್ನಾವರದ ಜನರ ಹೃದಯ ಗೆದ್ದಿದ್ದಾರೆ ಅಂತಲೂ ಹೇಳಬಹುದು.

    ಉಮಾಶ್ರೀ ಮಂಥರೆ ಪಾತ್ರ ಮಾಡಲು ಕಾರಣ ಏನು?
    ಉಮಾಶ್ರೀ ಅವರಿಗೆ ಮಂಥರೆ ಪಾತ್ರ ಹೊಸದೇ ಆಗಿದೆ. ಇಲ್ಲಿವರೆಗೂ ಈ ರೀತಿಯ ಪಾತ್ರ ಮಾಡಿದ್ದೇ ಇಲ್ಲ. ಆದರೆ, ಈ ಒಂದು ಪಾತ್ರ ಮಾಡೋಕೆ ಕಾರಣವೂ ಇದೆ. ಆ ಕಾರಣದ ಹೆಸರು ರಾಮಚಂದ್ರ ಚಿಟ್ಟಾಣಿ ಅಂತಲೇ ಹೇಳಬೇಕಾಗುತ್ತದೆ.

    ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನದಲ್ಲಿ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ.

    ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿಯವರು ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿಯವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಈ ಮೂಲಕ ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ.

    ನಿನ್ನೆ ರಾತ್ರಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಧರ್ಮಸ್ಥಳ : ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    Published

    on

    ಧರ್ಮಸ್ಥಳ :  53 ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ.3 ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ ನಡೆಯಲಿದೆ.

    ‘ಮದುವೆ’ ಎನ್ನುವುದು ಅದೆಷ್ಟೋ ಜನರ ಸುಂದರ ಕನಸು. ಆದರೆ ಆರ್ಥಿಕ ಪರಿಸ್ಥಿತಿಯು ಆ ಖುಷಿಗೆ ಸಾಥ್ ನೀಡದೆ ಇರಬಹುದು. ಕೆಲವೊಮ್ಮೆ ಜೋಡಿಯ ಪವಿತ್ರ ಪ್ರೇಮಕ್ಕೆ ಕುಟುಂಬವೂ ಅಡ್ಡಿಯಾಗಬಹುದು. ಅಂತಹ ಯುವ ಜೋಡಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಶ್ರೀ ಕ್ಷೇತ್ರ ದರ್ಮಸ್ಥಳದಲ್ಲುಇ ನಡೆಯುವ ಸಾಮೂಹಿಕ ವಿವಾಹದ ಸದುಪಯೊಗವನ್ನು ಪಡೆದುಕೊಳ್ಳಬಹುದು.

    ಎರಡನೇ ವಿವಾಹಕ್ಕೆ ನಿರ್ಬಂಧ ಹೇರಿದ್ದು, ಮೊದಲ ಮದುವೆಗೆ ಮಾತ್ರ ಆದ್ಯತೆ ನೀಡಲಾಗುವುದು. ಮಧುಮಗನಿಗೆ ಧೋತಿ, ಶಾಲು ನೀಡಲಾಗುವುದು. ಮಧುಮಗಳಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಹೂವಿನ ಹಾರ ಕೊಡಲಾಗುವುದು.

    ಇದನ್ನೂ ಓದಿ : ಕಣ್ಣೀರು ಹಾಕುತ್ತಾ ಮಹಾಕುಂಭಮೇಳದಿಂದ ಹೊರ ನಡೆದ ಸುಂದರಿ ಸಾಧ್ವಿ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ವತಿಯ ಮೂಲಕವೇ ಮದುವೆಯ ಎಲ್ಲಾ ವೆಚ್ಚವನ್ನು  ಮಾಡಲಾಗುವುದು. ಆಸಕ್ತರು 2025 ಫೆ.25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08256-266644 ಸಂಖ್ಯೆಯನ್ನು ಸಂಪರ್ಕಿಸಬಹುದು.

    Continue Reading

    LATEST NEWS

    Trending