Monday, October 18, 2021

ದಯವಿಟ್ಟು ಗಮನಿಸಿ: ವೀಸಾ ಅವಧಿ ಮುಗಿದರೂ ಯುಎಇಗೆ ತೆರಳಬಹುದು

ದುಬೈ: ಕೊರೊನಾ ಕಾರಣದಿಂದ ತಾಯ್ನಾಡಿಗೆ ತೆರಳಿದ ಕೆಲವು ಅನಿವಾಸಿ ಭಾರತೀಯರ ವೀಸಾ ಅವಧಿ ಮುಗಿದಿದ್ದು, ಅವರ ವೀಸಾ ಅವಧಿಯನ್ನು ಡಿಸೆಂಬರ್‌ 9, 2021ರವರೆಗೆ ವಿಸ್ತರಿಸಲಾಗಿದೆ ಎಂದು ಯುಎಇಯ ಖಲೀಜ ಟೈಮ್ಸ್‌ ತಿಳಿಸಿದೆ.


ಕೆಲವು ಅನಿವಾಸಿ ಭಾರತೀಯರು ಮಾರ್ಚ್‌ನಲ್ಲಿ ತಾಯ್ನಾಡಿಗೆ ಮರಳಿದ್ದರು. ಏ.24ರಂದು ಯುಎಇ ಭಾರತೀಯ ವಿಮಾನಗಳನ್ನು ನಿರ್ಬಂಧಿಸಿತ್ತು. ಏ.24ರಿಂದ ಆ.5ರವರೆಗೆ ವಿಮಾನ ನಿರ್ಬಂಧವಿತ್ತು. ಈ ಮಧ್ಯೆ ತಾಯ್ನಾಡಿಗೆ ಮರಳಿದವರ ಪೈಕಿ ಹಲವರ ವೀಸಾ ಅವಧಿ ಮುಗಿದಿದೆ. ಯುಎಇಯ ಈ ಹಿಂದಿನ ನಿಯಮದ ಪ್ರಕಾರ ವೀಸಾ ಅವಧಿ ಮುಗಿದವರು, ಹೊಸ ವೀಸಾ ಅಥವಾ ವಿಸಿಟ್‌ ವೀಸಾದೊಂದಿಗೆ ದುಬೈಗೆ ಮರಳಬೇಕು. ಆದರೆ ಈ ಬಾರಿ ಕೋವಿಡ್‌ ರೋಗವಿರುವುದರಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ. ಆದ್ದರಿಂದ ಈ ಬಾರಿ ವೀಸಾ ಅವಧಿ ಮುಗಿದರೂ ಯುಎಇಗೆ ಮರಳಬಹುದು. ಆದರೆ ಯುಎಇ ಪ್ರವೇಶಿಸಲು ಜಿಡಿಆರ್‌ಎಫ್‌ಎ ಹಾಗೂ ಕೋವಿಡ್‌ ಎರಡನೇ ಡೋಸ್‌ ಪೂರೈಸಿರಬೇಕು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...