Connect with us

    DAKSHINA KANNADA

    ಡೆಂಗಿ ನಿಯಂತ್ರಣಕ್ಕೆ ತಜ್ಞರ ಸಮಿತಿ: ಮೇಯರ್‌ ಸುಧೀರ್‌ ಶೆಟ್ಟಿ

    Published

    on

    ಮಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಇರುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಇಂದು ನಡೆದ ಮಹಾನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಗಿದೆ.

    ಈ ಸಮಿತಿಯಲ್ಲಿ ಪಾಲಿಕೆಯ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು, ಮಂಗಳೂರಿನ ಹಿರಿಯ ವೈದ್ಯ ಡಾ. ಶಾಂತಾರಾಮ ಬಾಳಿಗಾ, ಸ್ಥಳೀಯ ಸಂಘ ಸಂಸ್ಥೆಗಳು, ನಗರದ ಮೆಡಿಕಲ್‌ ಕಾಲೇಜುಗಳ ಆಡಳಿತದ ಪ್ರತಿನಿಧಿಗಳು ಇರುತ್ತಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಸುಧೀರ್‌ ಶೆಟ್ಟಿ ಅವರು ತಿಳಿಸಿದರು. ಇದಲ್ಲದೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮಾಹಿತಿ ಕೇದ್ರ ಸ್ಥಾಪನೆ ಮತ್ತು ಟೋಲ್‌ ಫ್ರೀ ಫೋನ್‌ ವ್ಯವಸ್ಥೆ ಮಾಡಲಾಗುವುದು. ಐಯುಸಿಪಿ ಆ್ಯಪ್‌ ಮೂಲಕ ಪಾಲಿಕೆ ವ್ಯಾಪ್ತಿಯ ಯಾವುದೇ ಲ್ಯಾಬ್‌ ನಲ್ಲಿ ಡೆಂಗ್ಯೂ ಪರೀಕ್ಷೆ ಮಾಡಿಸಿದರೂ ಅದರ ವರದಿ ಲಭಿಸುವಂತೆ ವ್ಯವಸ್ಥೆ ಮಾಡಲಾಗುವುದು. 60 ಮಂದಿ ಎಂಪಿಡಬ್ಲ್ಯೂ ಕಾರ್ಯಕರ್ತರನ್ನು ನೇಮಕ ಮಾಡಿದ್ದು, ಅವರು ಮನೆಮನೆಗೆ ಹೋಗಿ ತಪಾಸಣೆ ಮಾಡಿ ಮಾಹಿತಿ ಕಲೆ ಹಾಕಲಿದ್ದಾರೆ ಎಂದರು.

    ಮಲೇರಿಯಾ ಆ್ಯಪ್‌ ಕೂಡಾ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು. ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಮಹಾನಗರ ಪಾಲಿಕೆಯು ಯೋಜಿತವಾಗಿ, ವ್ಯವಸ್ಥಿತವಾಗಿ ಕಾರ್ಯತಂತ್ರಗಳನ್ನು ರೂಪಿಸಿ ಡೆಂಗ್ಯೂ ನಿಯಂತ್ರಣಕ್ಕೆ ತರ ಬೇಕು. ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಅನುಸರಿಸ ಬೇಕೆಂದರು. ನಿಯಂತ್ರಣ ಕ್ರಮಗಳ ಕುರಿತಂತೆ ಜನರಿಗೆ ಮಾಹಿತಿ ಇಲ್ಲ. ಅವರಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳ ಬೇಕೆಂದು ಕಾರ್ಪೊರೇಟರ್‌ ಸಂಗೀತಾ ಆರ್‌. ನಾಯಕ್‌ ಸಲಹೆ ಮಾಡಿದರು.

    ಪ್ರತಿ ಪಕ್ಷ ಸದಸ್ಯ ಎ.ಸಿ. ವಿನಯರಾಜ್‌ ಅವರು ಈ ಹಿಂದೆ 2013- 14 ರಲ್ಲಿ ಮಲೇರಿಯಾ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಮಲೇರಿಯಾ ಆ್ಯಪ್‌ ಮತ್ತು ಸಮಿತಿ ರಚಿಸಿ ಅದರ ಮೂಲಕ ಮಲೇರಿಯಾ ನಿಯಂತ್ರಣ ಮಾಡಿದ ಉದಾಹರಣೆ ಇದೆ. 7 ವರ್ಷಗಳ ಕಾಲ ಸಕ್ರಿಯವಾಗಿದ್ದ ಈ ಸಮಿತಿ ಬಳಿಕ ನಿಷ್ಕ್ರಿಯವಾಗಿದೆ. ಆದೇ ರೀತಿ ಇದೀಗ ಡೆಂಗ್ಯೂ ಸಮಿತಿ ರಚಿಸಿದರೆ ಡೆಂಗ್ಯೂ ನಿಯಂತ್ರಣಕ್ಕೆ ತರ ಬಹುದು ಎಂದು ಸಲಹೆ ಮಾಡಿದರು.  ಡೆಂಗ್ಯೂ ಜ್ವರ ಸೋಂಕಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಅದು ಸೋಂಕದಂತೆ ತಡೆಯುವುದು ಮುಖ್ಯ.

    ಮಂಗಳೂರಿನಲ್ಲಿ 18 ರಿಂದ 36 ವರೆಗಿನ ಉಷ್ಣಾಂಶವಿದ್ದು, ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿಗೆ ಇದು ಅನುಕೂಲಕರ ವಾತಾವರಣ. ಹಾಗಾಗಿ ಸೊಳ್ಳೆ ಉತ್ಪನ್ನ ಆಗದಂತೆ ಮೂಲದಲ್ಲಿಯೇ ತಡೆಯುವ ಕೆಲಸ ಆಗ ಬೇಕೆಂದು ಡೆಂಗ್ಯೂ ನಿಯಂತ್ರಣ ನೋಡಲ್ ಅಧಿಕಾರಿ ಡಾ. ನವೀನ್‌ ಚಂದ್ರ ಕುಲಾಲ್‌ ಹೇಳಿದರು.

    ಶಾಸಕ ಡಿ. ವೇದವ್ಯಾಸ ಕಾಮತ್‌, ಪ್ರತಿಪಕ್ಷ ನಾಯಕ ಪ್ರವೀನ್‌ ಚಂದ್ರ ಆಳ್ವ, ಉಪ ಮೇಯರ್ ಸುನಿತಾ, ಆಯುಕ್ತ ಆನಂದ್‌ ಸಿ.ಎಲ್. ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

    DAKSHINA KANNADA

    ಬಜಪೆ: ಅದ್ಯಪಾಡಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತ

    Published

    on

    ಬಜಪೆ ಸಮೀಪದ ಅದ್ಯಪಾಡಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 80 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಸಿದ ಕಿಂಡಿ ಅಣೆಕಟ್ಟು ಈ ನೆರೆಗೆ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ.

    ಕಳೆದ ಹತ್ತು ವರ್ಷದಿಂದ ಈ ಗ್ರಾಮದ ಜನರು ಮಳೆಗಾಲದಲ್ಲಿ ಸಂಕಷ್ಟಕ್ಕೆ ಗುರಿಯಾಗುತ್ತಿದ್ದು, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ರೈತರು ಈಗಾಗಲೇ ತಮ್ಮ ಕೃಷಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಉಂಟಾಗುವ ನೆರೆಯಿಂದ ಮನೆಗಳೂ ಕುಸಿಯುವ ಭೀತಿ ಎದುರಾಗಿದೆ.

    ಈ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಜನರ ಸಂಕಷ್ಟ ಕೇಳಿದ್ದಾರೆ. ದೋಣಿಯ ಮೂಲಕ ಇಲ್ಲಿನ ಮನೆಗಳಿಗೆ ತೆರಳಿದ ಜಿಲ್ಲಾದಿಕಾರಿ ಮನೆಯಲ್ಲಿದ್ದ ವೃದ್ಧರಿಗೆ ಸಾಂತ್ವಾನ ಹೇಳಿದ್ದಾರೆ. ಸುಮಾರು 80 ಜನರು ಇಲ್ಲಿ ವಾಸವಾಗಿದ್ದು, ಜನರನ್ನು ಸ್ಥಳಾಂತರ ಮಾಡಿ ಸುರಕ್ಷಿತ ಜಾಗಕ್ಕೆ ಕಳುಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ಥಳೀಯ ಜನರ ಬಳಿ ಮಾತನಾಡಿದ್ದು, ಅವರು ಪ್ರಮುಖ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಗಮನ ಹರಿಸಲಾಗುವುದು ಆದ್ರೆ ಅದಕ್ಕೂ ಮೊದಲು ಈಗ ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

    Continue Reading

    BANTWAL

    ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

    Published

    on

    ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

    ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

    Continue Reading

    DAKSHINA KANNADA

    ಒಂದೇ ಗಂಟೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ

    Published

    on

    ಮಂಗಳೂರು: ರೈಲ್ವೇ ಇಲಾಖೆಗೆ ಹೆಚ್ಚುವರಿ ರೈಲು ಓಡಿಸುವಂತೆ ಸಂಸದ ಬ್ರಿಜೇಶ್ ಚೌಟ ಮಾಡಿದ ಮನವಿಗೆ ನೈರುತ್ಯ ರೈಲ್ವೇ ಇಲಾಖೆ ಸ್ಪಂಧಿಸಿದೆ.

    ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ಆದೇಶ ಹೊರಡಿಸಿದೆ. ಶುಕ್ರವಾರ ಹಾಗೂ ಶನಿವಾರದಂದು ತಲಾ ಒಂದು ಹಾಗೂ ಶನಿವಾರ ಹಾಗೂ ಭಾನುವಾರದಂದು ತಲಾ ಎರಡು ಹೆಚ್ಚುವರಿ ರೈಲು ಓಡಿಸುವ ಬಗ್ಗೆ ರೈಲ್ವೇ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

    ಮಂಗಳೂರು ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಿದ್ದು, ಮಳೆಯ ಕಾರಣ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದ ವಿಧಿಸಲಾಗಿದೆ. ಹೀಗಾಗಿ ಜನರ ಅಗತ್ಯತೆ ಪೂರೈಸಲು ಹೆಚ್ಚುವರಿ ರೈಲು ಓಡಿಸುವಂತೆ ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು.

    ಸಂಸದರ ಪತ್ರ ಕೈ ಸೇರಿದ ಒಂದೇ ಘಂಟೆಯಲ್ಲಿ ನೈರುತ್ಯ ರೈಲ್ವೇ ಇಲಾಖೆ ಹೆಚ್ಚುವರಿ ರೈಲು ಓಡಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದು, ಹೆಚ್ಚುವರಿ ರೈಲು ಓಡಾಟದ ಸಮಯವನ್ನು ನಿಗಧಿ ಪಡಿಸಿದೆ. ಈ ಕಾರಣದಿಂದ ಮಾಮೂಲ ರೈಲಿನಲ್ಲಿ ಪ್ರಯಾಣಿಕರಿಗೆ ಸೀಟು ಸಿಗದ ಪರದಾಡುವುದು ಕೂಡಾ ತಪ್ಪಿದಂತಾಗಿದೆ.

    Continue Reading

    LATEST NEWS

    Trending