Connect with us

    LATEST NEWS

    ಲೇಡಿಗೋಷನ್‌ನಲ್ಲಿ ಅದಲು ಬದಲಾಗಿ ಸುದ್ದಿಯಾಗಿದ್ದ ಮಗು ನಿಧನ

    Published

    on

    ಮಂಗಳೂರು: ನಗರದ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಅದಲು ಬದಲಾದ ಸುದ್ದಿಯಾಗಿದ್ದ ಮಗು ಇಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದೆ.

    ಲೇಡಿಗೋಷನ್‌ನ ಎಂಐಸಿಯುನಲ್ಲಿ ಮಗು ನಿಧನ ಹೊಂದಿದೆ.


    ತಿಂಗಳ ಹಿಂದೆ ಲೇಡಿಗೋಷನ್‌ನಲ್ಲಿ ಮಗು ಅದಲು ಬದಲು ಪ್ರಕರಣದ ಮಗು ಇಂದು ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದೆ.

    ಅ. 15ರಂದು ಮಗು ಅದಲು ಬದಲಾಗಿದೆ ಎಂದು ಪೋಷಕರು ಆರೋಪಿಸಿ ಠಾಣೆ ಮೆಟ್ಟಿಲೇರಿದ್ದರು.

    ಹೆಣ್ಣು ಮಗುವೆಂದು ಗಂಡು ಮಗು ನೀಡಿದ್ದಾಗಿ ಲೇಡಿಗೋಷನ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು.

    ಆ ಬಳಿಕ ಡಿಎನ್‌ಎ ಪರೀಕ್ಷೆಗೆ ಸ್ಯಾಂಪಲ್ ಹೈದ್ರಾಬಾದ್‌ಗೆ ಕಳುಹಿಸಲಾಗಿತ್ತು. ಇಂದಿಗೆ 48 ದಿನ ತುಂಬಿದ್ದ ಹಸುಳೆ ಮೃತಪಟ್ಟಿದೆ. ನಮ್ಮ ವೈದ್ಯಾಧಿಕಾರಿಗಳು ಮಗುವನ್ನು ಉಳಿಸುವಲ್ಲಿ ಗರಿಷ್ಠ ಮಟ್ಟದ ಪ್ರಯತ್ನ ನಡೆಸಿದ್ದರು.

    ಆದರೆ ಹುಟ್ಟುವಾಗಲೇ ತೀವ್ರ ಅಸ್ವಸ್ಥತೆ ಕಾಡಿದ್ದರಿಂದ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು  ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಬಗ್ಗೆ ಮಗುವಿನ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದರು.

    Click to comment

    Leave a Reply

    Your email address will not be published. Required fields are marked *

    FILM

    ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ

    Published

    on

    ಉಡುಪಿ : ಖ್ಯಾತ ನಟಿ  ಮಾಲಾಶ್ರೀ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಮಾಲಾಶ್ರೀ ಜೊತೆ ಪುತ್ರಿ ಕಾಟೇರಾ ನಟಿ ಆರಾಧನಾ ಕೂಡ ಉಪಸ್ಥಿತರಿದ್ದರು.

    ಪರ್ಯಾಯದಲ್ಲಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.

    Continue Reading

    LATEST NEWS

    ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಡ್ರೈವರ್ ಎಡವಟ್ಟು: 12 ಮಂದಿಯ ದುರಂತ ಅಂತ್ಯ

    Published

    on

    ಮಂಗಳೂರು/ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದ ಗೊಂಡಿಯಾ ಜಿಲ್ಲೆಯ ಕೊಹ್ಮಾರಾ ರಾಜ್ಯ ಹೆದ್ದಾರಿಯ ಖಾಜ್ರಿ ಎಂಬ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.


    ಅಷ್ಟಕ್ಕೂ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಏಕಾಏಕಿ ಎದುರಿಗೆ ಬಂದಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಇದರ ಪರಿಣಾಮ 9 ಜನರು ಸ್ಥಳದಲ್ಲಿಯೇ ಮೃತಪಟ್ಟು ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
    ಬಸ್ಸ್ ನ ಎದುರಿಗೆ ಸಡನ್ ಆಗಿ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೇರೆ ಕಡೆ ತಿರುಗಿಸಿದ ಪರಿಣಾಮ ಬಸ್ಸ್ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಸಹಾಯದೊಂದಿಗೆ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

    ಇನ್ನೂ ಅಪಘಾತ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಿಲಿಸಿಕೊಂಡಿದ್ದು ತನಿಖೆಯನ್ನು ಶುರು ಮಾಡಿದ್ದಾರೆ.

    Continue Reading

    LATEST NEWS

    ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿ*ಕ್ಕಿ; ಇಬ್ಬರ ದುರ್ಮ*ರಣ

    Published

    on

    ಮಂಗಳೂರು/ಯಾದಗಿರಿ : ಕಾರು ಡಿ*ಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾ*ವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ.

    ಹಳ್ಳೆಪ್ಪ(45) ಹಾಗೂ ಮಲ್ಲಯ್ಯ(35) ಮೃ*ತ ಬೈಕ್ ಸವಾರರು. ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ ಬಳಿಯಿರುವ ಜಮೀನು ನೋಡಿಕೊಂಡು ಬರಲು ಬೈಕ್‌ನಲ್ಲಿ ತೆರಳಿದ್ದರು. ವಾಪಾಸ್ ಊರಿಗೆ ಬರುವಾಗ, ಕಾರು ಚಾಲಕ ಬೈಕ್‌ನ್ನು ಓವರ್‌ಟೇಕ್ ಮಾಡಲು ಹೋಗಿ ಡಿ*ಕ್ಕಿ ಹೊಡೆದಿದ್ದಾನೆ, ಡಿ*ಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಇದನ್ನೂ ಓದಿ : Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ

    ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending