Connect with us

    DAKSHINA KANNADA

    ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!

    Published

    on

    ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಅವರೊಂದಿಗೆ ನಂಟು ಬೆಸೆದುಕೊಂಡಿರುವ ಭಾರತೀಯ ನೋಟುಗಳಿಗೆ ಭಾರಿ ಬೇಡಿಕೆ ಬಂದಿದೆ. ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳನ್ನು ಜನರು ಆನ್‌ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ.

    ದೇಶದಲ್ಲಿ ನೋಟುಗಳ ಮೇಲೆ ಸಹಿ ಮಾಡಿರುವ ಏಕೈಕ ಪ್ರಧಾನಿ ಮನಮೋಹನ್ ಸಿಂಗ್. ಅದರಲ್ಲೂ ಒಂದು ರೂಪಾಯಿಂದ ಹಿಡಿದು ಎಲ್ಲಾ ಮುಖಬೆಲೆಯ ನೋಟುಗಳ ಮೇಲೆ ಸಹಿ ಮಾಡಿದ ಏಕೈಕ ವ್ಯಕ್ತಿ ಕೂಡಾ ಮನಮೋಹನ್ ಸಿಂಗ್. 1976 ರಲ್ಲಿ ದೇಶದ ಹಣಕಾಸು ಕಾರ್ಯದರ್ಶಿಯಾಗಿದ್ದ ಮನಮೋಹನ್ ಸಿಂಗ್ ಅವರು 1982 ರಿಂದ 1985 ರ ತನಕ ಭಾರತೀಯ ರಿಸರ್ವ ಬ್ಯಾಂಕ್‌ ನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.


    1976 ರಲ್ಲಿ ಹಣಕಾಸು ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ಒಂದು ರೂಪಾಯಿ ಮುಖಬೆಲೆಯ ನೋಟುಗಳಿಗೆ ಸಹಿ ಮಾಡಿದ್ದರು. ಈ ಒಂದು ರೂಪಾಯಿಗಳ ನೋಟಿನ ಮೇಲೆ ಸಹಿ ಮಾಡುವ ಅಧಿಕಾರ ಕೇವಲ ಹಣಕಾಸು ಕಾರ್ಯದರ್ಶಿಗೆ ಮಾತ್ರ ಇರುತ್ತದೆ. ಇದಾದ ಬಳಿಕ 1982 ರಲ್ಲಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆದ ಮನಮೋಹನ್ ಸಿಂಗ್ ಅವರು ಗವರ್ನರ್ ಗೆ ಇರುವ ಅಧಿಕಾರದಂತೆ ಉಳಿದ ಎಲ್ಲಾ ಮುಖಬೆಲೆಯ ಕರೆನ್ಸಿಗೆ ಸಹಿ ಮಾಡಿದ್ದರು.


    ಡಿಸೆಂಬರ್ 26 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಆನ್‌ಲೈನ್‌ನಲ್ಲಿ ಪುರಾತನ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ವೇದಿಕೆಯಾದ ಬಿಡ್ ಕಯೂರಿಯೋಸ್‌ ನಲ್ಲಿ ಮನಮೋಹನ್ ಸಿಂಗ್ ಅವರ ಸಹಿ ಇರುವ ನೋಟುಗಳು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಒಂದು ರೂಪಾಯಿ ಮುಖಬೆಲೆಯ ನೋಟುಗಳು ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟ

    Published

    on

    ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಎನ್ನಲಾಗಿದೆ.

    ಒಟ್ಟು 6 ತಂಡಗಳು ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್‌ಫಾರ್ಮ್ ಒಂದರಲ್ಲಿ ಬಿತ್ತರಗೊಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಲಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್‌ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು.

    ಮೊದಲ ಡಿವಿಷನ್ ಆಟಗಾರರು ಮಂಗಳೂರು ಝೋನ್ ಆಡಿದವರು ಕೆಟಗರಿ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಅದೇ ರೀತಿ ಕೆಟಗರಿ B ಯಲ್ಲಿ ದ್ವಿತೀಯ ಮತ್ತು ತೃತೀಯ ಡಿವಿಷನ್ ಆಟಗಾರರು KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು ಆಗಿರಬೇಕು. ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.

    Continue Reading

    DAKSHINA KANNADA

    ಮಂಗಳೂರು : ಆರ್‌ಪಿಸಿ ವಂಚನೆಯಿಂದ ಯುವಕ ಆ*ತ್ಮಹ*ತ್ಯೆಗೆ ಶರಣು

    Published

    on

    ಮಂಗಳೂರು : ಡಿ.24ರಂದು ಆರ್‌ಪಿಸಿ ಸ್ಥಗಿತಗೊಂದು ವಂಚನೆ ಬಗ್ಗೆ ವ್ಯಾಪಕ ಸುದ್ದಿಯಾಗಿದ್ದು, ಅದೇ ದಿನ ನಾ*ಪತ್ತೆಯಾಗಿದ್ದ ಯುವಕ ಶ*ವವಾಗಿ ಗುರುವಾರ (ಡಿ.26) ಮಂಗಳೂರಿನ ಮರವೂರು ನದಿಯಲ್ಲಿ ಪ*ತ್ತೆಯಾಗಿದ್ದಾನೆ.

    ಮೂಡುಶೆಡ್ಡೆ ನಿವಾಸಿ ಸೂರ್ಯ (24) ಜೀ*ವಾಂತ್ಯಗೊಳಿಸಿದ ಯುವಕ.

    ಸೈಬರ್ ಕ್ರೈಮ್ ಗಳ ವಂಚನೆ ಜಾಲ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ಆನ್‌ಲೈನ್ ವಂ*ಚನೆಗಳು ಮತ್ತು ಮೋಸದ ಆಟಗಳು ಸಾಮಾನ್ಯವಾಗಿದ್ದು, ಹೆಚ್ಚು ಹೆಚ್ಚು ಜನರು ಇಂತಹ ಬಲೆಗೆ ಬ*ಲಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಹೊರತಾಗಿಯೂ, ಈ ಬಗ್ಗೆ ಎಚ್ಚರಿಕೆ ನೀಡಿದರು ಜನರು ಮರುಳಾಗೋದು ಕಮ್ಮಿಯಾಗುತ್ತಿಲ್ಲ. ಸದ್ಯ 24 ವರ್ಷದ ಯುವಕ ಆರ್‌ಪಿಸಿ ವಂಚನೆಯಿoದ ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಸೂರ್ಯ ಆರ್‌ಪಿಸಿ ಆ್ಯಪ್‌ನಲ್ಲಿ ಸುಮಾರು 70,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು ಮತ್ತು ಕಂಪನಿಯು ಮುಚ್ಚಲ್ಪಟ್ಟಿದೆ ಎಂದು ತಿಳಿದ ನಂತರ, ಹೂಡಿಕೆಗಾಗಿ ಹಣವನ್ನು ಸಾಲವಾಗಿ ಪಡೆದಿದ್ದರಿಂದ ತನ್ನ ಜೀ*ವ ಕಳೆದುಕೊಂಡಿದ್ದಾನೆ. ಆರ್‌ಪಿಸಿ ಆನ್‌ಲೈನ್ ಆಪ್, ಇದು ಬಳಕೆದಾರರಿಗೆ ವೀಡಿಯೊಗಳನ್ನು ನೋಡುವ ಮೂಲಕ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಆರಂಭದಲ್ಲಿ, ಹಲವಾರು ವ್ಯಕ್ತಿಗಳು ಸ್ವಲ್ಪ ಹಣವನ್ನು ಗಳಿಸಿದ್ದಾರೆ. ಇದರಿಂದ ಲಾಭದಾಯಕ ಆದಾಯದ ಭರವಸೆಯಿಂದ ವಿಷಪ ವೇಗವಾಗಿ ಹಬ್ಬಿ ದೊಡ್ಡ ಜಾಲವಾಗಿ ಬೆಳೆದುನಿಂತ್ತಿತ್ತು. ಇದರಿಂದ ಹಲವರು ಕೋಟ್ಯಂತರ ರೂ.ಗಳನ್ನು ಈ ಹಗರಣದಲ್ಲಿ ತೊಡಗಿಸಿದ್ದಾರೆ. ಸದ್ಯ ಇದರ ವಂಚನೆ ಬಯಲಾಗಿದೆ. ಕಾವೂರು ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಪುತ್ತೂರು : ಕಾರು ಕಂ*ದಕಕ್ಕೆ ಬಿ*ದ್ದು ತಂದೆ-ಮಗ ಸೇ*ರಿದಂತೆ ಮೂವರ ದು*ರ್ಮರಣ

    Published

    on

    ಪುತ್ತೂರು : ಚಾಲಕನ ನಿದ್ದೆ ಮಂಪರಿನಲ್ಲಿ ಕಾರೊಂದು ಕಂ*ದಕಕ್ಕೆ ಬಿ*ದ್ದು, ಮೂವರು ಸ್ಥಳದಲ್ಲೇ ಸಾ*ವನ್ನಪ್ಪಿದ ದಾ*ರುಳ ಘಟನೆ ಪುತ್ತೂರಿನ ಪರ್ಲಡ್ಕದಲ್ಲಿ ಇಂದು (ಡಿ.28) ಮುಂಜಾನೆ ಸಂಭವಿಸಿದೆ.

    ಅಣ್ಣು ನಾಯ್ಕ್, ಚಿದಾನಂದ್,  ರಮೇಶ್ ನಾಯ್ಕ್ ಮೃ*ತರು ಎಂದು ಗುರುತಿಸಲಾಗಿದೆ.

    ಮೃತರು ಸುಳ್ಯ ಜಟ್ಟಿಪಳ್ಳ ನಿವಾಸಿಗಳಾಗಿದ್ದು, ಗೋಂದೊಳ್ ಪೂಜೆಗೆ ಪುತ್ತೂರಿನ ಪುಣಚಕ್ಕೆ ಆಗಮಿಸಿದ್ದರು. ಪೂಜೆ ಮುಗಿಸಿ ಮುಂಜಾನೆ ಹಿಂದಿರುಗುವ ವೇಳೆ  ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಆಲ್ಟೋ ಕಾರು ಕಂ*ದಕಕ್ಕೆ ಬಿದ್ದಿದೆ. ಬೆಳ್ಳಂ ಬೆಳಗ್ಗೆ 4:15 ಕ್ಕೆ ಕಾರು ಅ*ಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending