Connect with us

    LATEST NEWS

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

    Published

    on

    ನವದೆಹಲಿ: ಕೊರೊನಾ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಅವರು ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


    ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಕೋವಿಡ್‌-19 ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದಿಲ್ಲಿಯ ಸೇನಾ ರೆಫರಲ್‌ ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್‌) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.


    ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಸೋಮವಾರ ಅವರು ಮೆದುಳಿನ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 84 ವರ್ಷದ ಪ್ರಣಬ್‌ ಸೋಮವಾರ ಬೆಳಗ್ಗೆ ತಾವೇ ಟ್ವೀಟ್‌ ಮಾಡಿ ಕೊರೊನಾ ದೃಢಪಟ್ಟ ವಿಷಯವನ್ನು ಪ್ರಕಟಿಸಿದ್ದರು. ”ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಚಿಕಿತ್ಸೆಗೆ ದಾಖಲಾಗಿದ್ದೇನೆ. ಕಳೆದ ಒಂದು ವಾರದಲ್ಲಿ ನನ್ನನ್ನು ಭೇಟಿಯಾದವರು ಐಸೋಲೇಷನ್‌ಗೆ ತೆರಳುವ ಜತೆಗೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ,” ಎಂದು ಟ್ವೀಟ್‌ ಮಾಡಿದ್ದರು.

    LATEST NEWS

    ಇಸ್ರೇಲ್‌ನ 4 ಮಹಿಳಾ ಸೈನಿಕರ ಬದಲಾಗಿ 200 ಹಮಾಸ್ ಖೈದಿಗಳ ಬಿಡುಗಡೆ!

    Published

    on

    ಮಂಗಳೂರು/ಕೈರೊ : 15 ತಿಂಗಳ ಸಮರದ ಬಳಿಕ ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಘೋಷಿಸಲಾಗಿದೆ. ಇದರ ಭಾಗವಾಗಿ ಹಮಾಸ್ ವಶದಲ್ಲಿದ್ದ ಇಸ್ರೇಲ್‌ನ ನಾಲ್ವರು ಮಹಿಳಾ ಸೇನಾ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ವಶದಲ್ಲಿರುವ 200 ಪ್ಯಾಲೆಸ್ತೀನ್ ಖೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.

    ಇಸ್ರೇಲ್ ಬಿಡುಗಡೆ ಮಾಡಿರುವ 200 ಪ್ಯಾಲೆಸ್ತೀನ್ ಖೈದಿಗಳ ಪಟ್ಟಿಯನ್ನು ಹಮಾಸ್ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ದೀರ್ಘಾವಧಿಯ ಶಿಕ್ಷೆಗೊಳಗಾದವರು ಸೇರಿದಂತೆ ಇತರರು ಇದ್ದಾರೆ ಎಂದು ತಿಳಿದುಬಂದಿದೆ.

    ಹಮಾಸ್ ಬಂಡುಕೋರರು ಮೊದಲ ದಿನ ಮೂವರು ಮಹಿಳಾ ಒತ್ತೆಯಾಳುಗಳು, 7 ನೇ ದಿನ ನಾಲ್ವರು, ಮುಂದಿನ ಐದು ವಾರಗಳಲ್ಲಿ 26 ಮಂದಿಯನ್ನು  ಬಿಡುಗಡೆ ಮಾಡಲಿದ್ದು, ಈ ವೇಳೆ ಪ್ಯಾಲೆಸ್ತೀನ್ ಖೈದಿಗಳ ಬಿಡುಗಡೆಯಾಗಲಿದೆ. ಆರಂಭದಲ್ಲಿ ಯುವ ಜನರು, ಮಹಿಳೆಯರನ್ನು ಬಿಡುಗಡೆ ಮಾಡಲಾಗುತ್ತದೆ.

    2023ರ ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಗುರಿಯಾಗಿಸಿ ಅಪ್ರಚೋದಿತ ದಾಳಿ ನಡೆಸುವ ಮೂಲಕ ಯುದ್ಧ ಆರಂಭಗೊಂಡಿತ್ತು. ಈ ದಾಳಿಯಲ್ಲಿ ಸಾವಿರಾರು ಇಸ್ರೇಲ್‌ನ ಮಂದಿ ಹಾಗೂ ಪ್ಯಾಲೆಸ್ತೀನಿಯರು  ಪ್ರಾಣ ಕಳೆದುಕೊಂಡಿದ್ದು, ಅಪಾರ ಆಸ್ತಿ ಹಾನಿಯಾಗಿದೆ.

    ಇದನ್ನೂ ಓದಿ : ಕೊನೆಗೂ ಖ್ಯಾತ ಉದ್ಯಮಿ ಜೊತೆ ಮೋಹಕ ತಾರೆ ರಮ್ಯಾ ಮದುವೆ; ಇದು ನಿಜನಾ ?

    ಇತ್ತೀಚೆಗೆ ಹಮಾಸ್ ವಶದಲ್ಲಿದ್ದ ಇಸ್ರೇಲ್‌ನ ಮೂರು ಮಂದಿ ಒತ್ತೆಯಾಳುಗಳು ಬಿಡುಗಡೆಯಾದ ಬೆನ್ನಲ್ಲೇ, ಇಸ್ರೇಲ್‌ನ ವಶದಲ್ಲಿದ್ದ 90ಕ್ಕೂ ಅಧಿಕ ಪ್ಯಾಲೆಸ್ತೀನ್ ಖೈದಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಕದನ ವಿರಾಮದ ಬೆನ್ನಲ್ಲೇ ಉಭಯ ರಾಷ್ಟ್ರಗಳಲ್ಲಿ ಸಂಭ್ರಮ ಮನೆ ಮಾಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್. ಜಗದೀಶ್ಚಂದ್ರ ಅಂಚನ್ ಪುನರಾಯ್ಕೆ

    Published

    on

    ಮಂಗಳೂರು: ಸಹಕಾರ ರಂಗದ ಅದ್ವಿತೀಯ ನಾಯಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್ ಸಿಡಿಸಿಸಿ ಬ್ಯಾಂಕಿನ ಬ್ಯಾಂಕ್ ನಿರೀಕ್ಷಕ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಭಗವತಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ರಾಘವ ಆರ್.ಉಚ್ಚಿಲ್ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

    ಶನಿವಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್. ಜಗದೀಶ್ಚಂದ್ರ ಅಂಚನ್ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪುನರಾಯ್ಕೆ ಗೊಂಡರೆ, ರಾಘವ ಆರ್. ಉಚ್ಚಿಲ್ ಮೊದಲ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣೆಯನ್ನು ದಕ್ಷಿಣ ಕನ್ನಡ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ. ನಡೆಸಿಕೊಟ್ಟರು.

    ಜಗದೀಶ್ಚಂದ್ರ ಅಂಚನ್ ಕಳೆದ 20 ವರ್ಷಗಳಿಂದ ಸಂಘದ ನಿರ್ದೇಶಕರಾಗಿ, 2007ರಲ್ಲಿ ಉಪಾಧ್ಯಕ್ಷರಾಗಿ , 2020-25ನೇ ಸಾಲಿನಲ್ಲಿ ಅಧ್ಯಕ್ಷರಾಗಿ, ಇದೀಗ ಮುಂದಿನ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ರಾಘವ ಆರ್.ಉಚ್ಚಿಲ್ ಕಳೆದ ಹತ್ತು ವರ್ಷಗಳಿಂದ ನಿರ್ದೇಶಕರಾಗಿದ್ದು , ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

    ಡಾ.ಎಂಎನ್ ಆರ್ ಅವರಿಗೆ ಕೃತಜ್ಞತೆ ಸಮರ್ಪಣೆ : ಸುಮಾರು 93 ವರ್ಷಗಳ ಇತಿಹಾಸವನ್ನು ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ನೌಕರರ ಏಕೈಕ ಸಹಕಾರಿ ಸಂಸ್ಥೆ ‘ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಇಂದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮುಖ್ಯ ಕಾರಣಕರ್ತರಾಗಿದ್ದಾರೆ. ಅವರ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನದಿಂದಲೇ ಸಂಘವು ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಕೂಡ ಅವರ ಮಾರ್ಗದರ್ಶನದಲ್ಲೇ ನಡೆದು 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದೀಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕೂಡ ಅವಿರೋಧವಾಗಿ ಆಯ್ಕೆಗೊಂಡಿದ್ದು, ಈ ಸಂದರ್ಭದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ನೂತನ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ಕೃತಜ್ಞತೆಯನ್ನು ಸಮರ್ಪಿಸಿದರು.

    ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ. ಕಾರ್ಕಳ, ವಿಶ್ವೇಶ್ವರ ಐತಾಳ್ ಎಸ್. ಕುಂದಾಪುರ, ಜಯಪ್ರಕಾಶ್ ರೈ ಸಿ. ಪುತ್ತೂರು, ವಿಶ್ವನಾಥ್ ಕೆ.ಟಿ. ಸುಳ್ಯ, ವಿಶ್ವನಾಥ್ ಎನ್. ಅಮೀನ್ ಉಡುಪಿ, ಶಿವಾನಂದ ಪಿ. ಬಂಟ್ವಾಳ, ಗಿರಿಧರ್ ಕೆ. ಬೆಳ್ತಂಗಡಿ, ಚಂದ್ರಕಲಾ ಕೆ. ಮಂಗಳೂರು, ಗೀತಾಕ್ಷಿ ಮಂಗಳೂರು, ಕಿರಣ್ ಕುಮಾರ್ ಶೆಟ್ಟಿ ಮಂಗಳೂರು, ನಿಶಿತಾ ಜಯರಾಮ್ ಮಂಗಳೂರು, ಮೋಹನ್ ಎಸ್. ಮಂಗಳೂರು, ಪ್ರೇಮರಾಜ್ ಭಂಡಾರಿ ಮಂಗಳೂರು ಹಾಗೂ ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

    Continue Reading

    FILM

    ಕೊನೆಗೂ ಖ್ಯಾತ ಉದ್ಯಮಿ ಜೊತೆ ಮೋಹಕ ತಾರೆ ರಮ್ಯಾ ಮದುವೆ; ಇದು ನಿಜನಾ ?

    Published

    on

    ಮಂಗಳೂರು/ಬೆಂಗಳೂರು: ಹಲವಾರು ಸಮಯಗಳಿಂದ ಚಿತ್ರರಂಗದಿಂದ ದೂರವಿರುವ ಮೋಹಕತಾರೆ ರಮ್ಯಾ ಇದೀಗ ಖ್ಯಾತ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ಧಿ ಫುಲ್ ವೈರಲ್ ಆಗುತ್ತಿದೆ.42 ವರ್ಷವಾದ್ರೂ ಸಿಂಗಲ್ ಆಗಿರುವ ರಮ್ಯಾ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಹರಿದಾಡುತ್ತಿದೆ.

    2024 ರ ನವೆಂಬರ್‌ನಲ್ಲಿ ರಮ್ಯಾ ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಮ್ಯಾ ಉದ್ಯಮಿ ಸಂಜೀವ್‌ಗೆ ಬರ್ತ್‌ಡೇ ವಿಶ್ ಮಾಡಿದ್ದರು.”ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್, ನಿನ್ನೊಂದಿಗೆ ಹೋಗುವ ಪ್ರವಾಸಗಳು ಎಂದಿಗೂ ಅದ್ಭುತ” ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರೂ ಈ ಹಿಂದೆ ರಮ್ಯಾ – ಸಂಜೀವ್ ಜತೆಯಾಗಿ ಪ್ರವಾಸ ಹಾಗೂ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಣೆ ಮಾಡಲು ಹೋಗಿದ್ದರು. ಇದರ ನಡುವೆಯೇ ಸಂಜೀವ್ ರಮ್ಯಾ ಅವರ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಕೂಡ ಹರಿದಾಡಿತ್ತು.

    “ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ!! ಇವರು ರಮ್ಯಾ ಅವರನ್ನು ಪ್ರೀತಿಯಿಂದ divs ಅಂತ ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ.ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣಪ್ಪ” ಎಂದು ರಮ್ಯಾ – ಸಂಜೀವ್ ಅವರ ಫೋಟೋ ಎಡಿಟ್ ಮಾಡಿ ಟ್ರೋಲ್ ಪೇಜ್‌ವೊಂದು ಹಾಕಿಕೊಂಡಿದೆ. ರಮ್ಯಾ ಈ ಫೋಟೋವನ್ನು ಇನ್ಸಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡು ‘ಫೇಕ್’ ಎಂದು ಬರೆದುಕೊಂಡಿದ್ದು, ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇನ್ನು ಸಿನಿಮಾದ ವಿಚಾರಕ್ಕೆ ಬಂದರೆ ‘2016’ ನಾಗರಾಹಾವು’ ಚಿತ್ರದ ಬಳಿಕ ರಮ್ಯಾ ಅವರು ಯಾವ ಸಿನಿಮಾದಲ್ಲೂ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದಿದ್ದರು.

    Continue Reading

    LATEST NEWS

    Trending