Connect with us

BANTWAL

ಉಪ್ಪಿನಂಗಡಿ ಮಹಿಳೆ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ

Published

on

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಸಾಕು ಕರು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.


ಈ ಕುರಿತು ಟ್ವಿಟ್ ಮಾಡಿರುವ ಅವರು ‘ಬಜರಂಗ ದಳದ ಕಾರ್ಯಕರ್ತರು ಮಹಿಳೆ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿರುವ ವರದಿಗಳನ್ನು ಕೇಳಿ ಅತೀವ ಬೇಸರವಾಗಿದೆ. ಬಜರಂಗದಳದ ಕಾರ್ಯಕರ್ತರು ರಣಹದ್ದುಗಳ ರೀತಿ ವರ್ತಿಸುತ್ತಿದ್ದಾರೆ.
ಸುದ್ದಿಯಲ್ಲಿ ಬರಲು ಅಮಾಯಕ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥಿತವಾಗಿಲ್ಲ. ಇದು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಲಿ.

ಬಿಜೆಪಿಯು ನಕಲಿ ಚೌಕಿದಾರರಿಂದ ತುಂಬಿದೆ ಮತ್ತು ಕರ್ನಾಟಕವು ಯುಪಿಯಂತಾಗುವುದನ್ನು ತಪ್ಪಿಸಲು ಬದಲಾವಣೆಯ ಅಗತ್ಯವಿದೆ. ಹಿಂದೂ ಸಂಸ್ಕೃತಿಯ ರಕ್ಷಕರು ಎಂದು ಬಜರಂಗದಳ ಕಾರ್ಯಕರ್ತರು ಹೇಳಿಕೊಳ್ಳುತ್ತಾರೆ. ಅವರ ಯಾವ ಧಾರ್ಮಿಕ ಗ್ರಂಥಗಳು ಮಂಗಳಸೂತ್ರ ಮತ್ತು ಸೀರೆ ಎಳೆಯಲು ಕೇಳಿಕೊಂಡಿವೆ?

ಅಥವಾ ಅವರ ಪೂರ್ವಜರು ಕಲಿಸಿದ ಪಾಠವೇ? ಭಜರಂಗದಳಕ್ಕೆ ಸೇರಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.

ಕರ್ನಾಟಕದ ಪೊಲೀಸ್ ಇಲಾಖೆಯು ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದೆಯೇ ಅಥವಾ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಗೂಂಡಾಗಳಿಗಾಗಿ ಕೆಲಸ ಮಾಡುತ್ತಿದೆಯೇ? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

Bantwala: ಅಕ್ಕಪಕ್ಕ ಮನೆಯ ಯುವಕ-ಯುವತಿ ಒಂದೇ ದಿನ ನಾಪತ್ತೆ..!

Published

on

ಬಂಟ್ವಾಳ: ಅಕ್ಕ ಪಕ್ಕದ ಮನೆಯ ಯುವಕ ಮತ್ತು ಯುವತಿ ಒಂದೇ ದಿನ ನಾಪತ್ತೆ ಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದ್ದು, ಈ ಕುರಿತಂತೆ ಎರಡೂ ಮನೆಯವರು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಆಯಿಷತ್‌ ರಸ್ಮಾ (18) ಮತ್ತು  ಮಹಮ್ಮದ್‌ ಸಿನಾನ್‌ (23) ನಾಪತ್ತೆಯಾದವರು. ರಸ್ಮಾ ನಡುಪದವು ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದಾರೆ. ಅವರು ನ. 23ರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದು, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು. ಸಿನಾನ್‌ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ನ. 23ರ ರಾತ್ರಿ ಊಟ ಮಾಡಿ ಮಲಗಿದವರು ಮರುದಿನ ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಎರಡೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Continue Reading

BANTWAL

Bantwala: ಅಕ್ರಮ ಮರ ಸಾಗಾಟ-ಇಬ್ಬರು ಆರೋಪಿಗಳು ವಶ..!

Published

on

ಬಂಟ್ವಾಳ: ಅಕ್ರಮ ಮರ ಸಾಗಟ ಮಾಡುತ್ತಿದ ಸ್ಥಳಕ್ಕೆ ಖಚಿತ ಮಾಹಿತ ಪಡೆದ ಬಂಟ್ವಾಳ ಅರಣ್ಯ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಹಾಗೂ ಉಳ್ಳಾಲ ತಾಲೂಕಿನ ಸಜೀಪಪಡು ಗ್ರಾಮದ ಕೋಟೆಕಣಿಯಲ್ಲಿ ನಡೆದಿದೆ.

ಮರ ಹಾಗೂ ವಿವಿಧ ಜಾತಿಯ ದಿಮ್ಮಿಗಳನ್ನು ಪಿಕಪ್ ಮೂಲಕ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ 2 ಪಿಕಪ್ ವಾಹನ,6 ಲಕ್ಷ ರೂ ಮೌಲ್ಯದ ದಿಮ್ಮಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಲು ಪಾಲ್ಗೊಂಡಿದ್ದರು. ವಲಯ ಅರಣ್ಯ ಅಧಿಕಾರಿ ಪ್ರಪುಲ್ ಶೆಟ್ಟಿ ಪಿ.ಅವರು ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Continue Reading

BANTWAL

ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್‌ ಶೆಟ್ಟಿ ಆಯ್ಕೆ

Published

on

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕ ಇಂಡೋನೇಶ್ಯಾದ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕುಕ್ಕಿಪ್ಪಾಡಿ ಹುಣಸೆಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಅವರ ಪುತ್ರ ಧನೇಶ್ ಶೆಟ್ಟಿ ಇಂಡೋನೇಶ್ಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಶ್ಯಾದಲ್ಲಿ ನೆಲೆಸಿದ್ದು, ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದ ಇವರು ಇದೀಗ ಇಂಡೋನೇಸ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Continue Reading

LATEST NEWS

Trending