Connect with us

    LATEST NEWS

    7ನೇ ತರಗತಿ ಪಾಸಾದರೂ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ !!

    Published

    on

    ಮಂಗಳೂರು/ಕೊಪ್ಪಳ: 7ನೇ ತರಗತಿ ಪೂರ್ಣಗೊಳಿಸಿದ ನಂತರವೂ 7 ಸಾವಿರ ಮಕ್ಕಳಿಗೆ ಓದಲು ಬರೆಯಲು ಬಾರದೆ ಇರುವ ಘಟನೆ  ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ. ಇದೀಗ ಕೊಪ್ಪಳದಲ್ಲಿ ನಡೆಯುತ್ತಿರುವ ಆತಂಕಕಾರಿ ವಿಷಯವನ್ನು ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

    ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸದ್ಯ ಶೈಕ್ಷಣಿಕವಾಗಿ ಹಿಂದುಳಿದಿವೆ. ಎಸ್​ಎಸ್​ಎಲ್​ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಫಲಿತಾಂಶವನ್ನು ಮೇಲಿನಿಂದ ನೋಡುವ ಬದಲು ಕೆಳಗಿನಿಂದ ನೋಡುವದೇ ರೂಢಿಯಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ಇದೀಗ ಮತ್ತೊಂದು ಆತಂಕಕಾರಿ ಅಂಶ ಬಯಲಾಗಿದೆ. ಎಸ್​ಎಸ್​ಎಲ್​ಸಿಯಲ್ಲಿ ಮಕ್ಕಳ ಫಲಿತಾಂಶ ಕಡಿಮೆಯಾಗುತ್ತಿರುವುದು ಏಕೆ ಎಂದು ಪ್ರೌಢ ಶಾಲೆಯ ಶಿಕ್ಷಕರನ್ನು ಶಿಕ್ಷಣ ಇಲಾಖೆ ಪ್ರಶ್ನಿಸಿದೆ. ಆಗ, ಶಿಕ್ಷಕರು “ಪ್ರಾಥಮಿಕದಿಂದ ಪ್ರೌಢಶಾಲೆಗೆ ಬರುವ ಅನೇಕ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ” ಎಂದು ಉತ್ತರ ನೀಡಿದ್ದಾರೆ. ಕೂಡಲೆ ಎಚ್ಚೆತ್ತ ಕೊಪ್ಪಳ ಜಿಲ್ಲೆಯ ಶಿಕ್ಷಣ ಇಲಾಖೆ ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪ್ರೌಢಶಾಲೆ ಶಿಕ್ಷಕರಿಗೆ ತಿಳಿಸಿತ್ತು.

    ಶೈಕ್ಷಣಿಕ ಪ್ರಗತಿ ಪರಿಶೀಲನೆ :

    2025 ರ ಜನವರಿಯಲ್ಲಿ ಎಫ್​ಎಲ್​ಎನ್ ಪರೀಕ್ಷೆ (ಫಂಡಮೆಂಟಲ್ ಲಿಟರಸಿ ಆ್ಯಂಡ್​ ನ್ಯೂಮರಸಿ) ಪರಿಶೀಲನೆ ಮಾಡುವುದಾಗಿ ಇಲಾಖೆ ತಿಳಿಸಿದೆ. “ಮಕ್ಕಳಿಗೆ ಓದು, ಬರಹ ಬಾರದೆ ಇದ್ದರೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ವಾರ್ಷಿಕ ಬಡ್ತಿಯನ್ನು ತಡೆಹಿಡಿಯುತ್ತೇವೆ” ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. “ಪ್ರತಿಯೊಂದು ಮಗುವಿನ ಹಾಜರಾತಿ ಸರಿಯಾಗಿ ಇರುವಂತೆ ನೋಡಕೊಳ್ಳಬೇಕು. ಪ್ರತಿನಿತ್ಯ ಅವರಿಗೆ ಹೋಮ್ ವರ್ಕ್ ನೀಡಬೇಕು, ಅದನ್ನು ಪ್ರತಿದಿನ ಚೆಕ್ ಮಾಡಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು” ಅಂತ ಸೂಚನೆ ನೀಡಿದ್ದಾರೆ. ಏಳನೇ ತರಗತಿ ಪಾಸಾದರೂ ಸಾವಿರಾರು ಮಕ್ಕಳಿಗೆ ಓದಲು ಬರೆಯಲು ಬಾರದೆ ಇರುವುದು ದುರ್ದೈವದ ಸಂಗತಿಯಾಗಿದ್ದು, ಇದನ್ನು ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ಇನ್ನುಷ್ಟು ಶ್ರಮವಹಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮ ವಹಿಸಬೇಕಿದೆ. ಜೊತೆಗೆ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಸರಿಯಾಗಿ ಕಳುಹಿಸುವಂತೆ ಮನವಿ ಮಾಡಿದ್ದಾರೆ.

    LATEST NEWS

    ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?

    Published

    on

    ಮಂಗಳೂರು/ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಸಂಪುಟದ ಸಚಿವರಿಗೆ ಶನಿವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

    ಗೃಹ ಖಾತೆಯ ಜೊತೆಗೆ ಇಂಧನ, ಕಾನೂನು ಮತ್ತು ನ್ಯಾಯಾಂಗ, ಸಿಬ್ಬಂದಿ ಆಡಳಿತ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಖಾತೆಗಳನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

    ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ನಗರಾಭಿವೃದ್ದಿ, ವಸತಿ ಮತ್ತು ಲೋಕೋಪಯೋಗಿ ಖಾತೆಗಳು ಹಂಚಿಕೆಯಾಗಿದ್ದರೆ, ಮತ್ತೋರ್ವ ಉಪ ಮುಖ್ಯಮಂತ್ರಿ ಅಜಿತ್ ಪವರ್ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಅಬಕಾರಿ ಖಾತೆ ಹಂಚಿಕೆಯಾಗಿವೆ.

    ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

    ಉಳಿದಂತೆ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ, ಪಂಕಜಾ ಮುಂಡೆ ಅವರಿಗೆ ಪರಿಸರ, ಮಾಣಿಕ್ರಾವ್ ಕೊಕಾಟೆ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ. ಧನಂಜಯ್ ಮುಂಡೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಅಶೋಕ್ ಅವರಿಗೆ ಬುಡಕಟ್ಟು ಅಭಿವೃದ್ದಿ, ಆಶಿಶ್ ಶೆಲಾರ್ ಅವರಿಗೆ ಐಟಿ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ವಹಿಸಲಾಗಿದೆ.

    ಇನ್ನೂ ಬಿಜೆಪಿಯ ಚಂದ್ರಶೇಖರ್ ಬಾವಂಕುಲೆಗೆ ಕಂದಾಯ, ಶಿವಸೇನೆಯ ದಾದಾಜಿ ಭುಸೆಗೆ ಶಾಲಾ ಶಿಕ್ಷಣ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆಯನ್ನು ಬಿಜೆಪಿಯ ಇಬ್ಬರು ಸಚಿವರುಗಳಾದ ರಾಧಾಕೃಷ್ಣ ವಿಖೆ ಪಾಟೇಲ್ ಮತ್ತು ಗಿರೀಶ್ ಮಹಾಜನ್ ನಡುವೆ ಹಂಚಿಕೆ ಮಾಡಲಾಗಿದೆ.

    ಡಿಸೆಂಬರ್ 5ರಂದು ಫಡ್ನವೀಸ್, ಏಕನಾಥ ಶಿಂಧೆ, ಅಜಿತ್ ಪವರ್ ಸಿಎಂ, ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಡಿಸೆಂಬರ್ 15 ರಂದು 39 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

     

     

    Continue Reading

    LATEST NEWS

    ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!

    Published

    on

    ಮಂಗಳೂರು/ಕೋಲ್ಕತಾ: ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮ*ತಾಂಧರು ದಾಳಿ ನಡೆಸುತ್ತಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಇದೀಗ ನಿಷೇಧಿತ ಉ*ಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹ*ತ್ಯೆ ಮತ್ತು ರಸ್ತೆ ಕಾರಿಡಾರ್‌ ಸ್ಫೋ*ಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕಳೆದ ಕೆಲ ಹಿಂದೆ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅನ್ಸರ್‌ ಅಲ್‌ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉ*ಗ್ರರನ್ನು ಬಂಧಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹ*ತ್ಯೆಯ ಉದ್ದೇಶವನ್ನು ಉ*ಗ್ರರು ಹೊಂದಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದ ಸಿಲಿಗುರಿಗೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ‘ಚಿಕನ್‌ ನೆಕ್‌’ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್‌ ರಸ್ತೆ ಸ್ಫೋ*ಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅ*ಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.

    ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವಧಿಯಲ್ಲಿ ನಡೆದಿದ್ದ ಬಾಂಗ್ಲಾ ಪ್ರಜೆಗಳ ಬಲವಂತದ ನಾ*ಪತ್ತೆ ಹಿಂದೆ ಭಾರತದ ಕೈವಾಡವಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ರಚಿಸಿರುವ ಸಮಿತಿಯ ವರದಿ ಹೇಳಿದೆ. ಬಾಂಗ್ಲಾದ ಸುದ್ದಿ ಸಂಸ್ಥೆ, ಸಂಗ್ಬಾದ್ ಸಂಸ್ಥೆಯು ಬಲವಂತದ ನಾ*ಪತ್ತೆಯ ಕುರಿತಾದ ತನಿಖಾ ವರದಿಯನ್ನು ಉಲ್ಲೇಖಿಸಿ ವರದಿ ನೀಡಿದ್ದು, ‘ಬಾಂಗ್ಲಾದೇಶದ ಬಲವಂತದ ನಾ*ಪತ್ತೆ ಪ್ರಕರಣಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ಭಾರತದಲ್ಲಿ ಇನ್ನೂ ಬಂಧಿಯಾಗಿರುವ ಯಾವುದೇ ಬಾಂಗ್ಲಾದೇಶದ ನಾಯಕರನ್ನು ಗುರುತಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಶಿಫಾರಸ್ಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಈ ಜಾಡು ಅನುಸರಿಸುವುದು ನ್ಯಾಯದ ವ್ಯಾಪ್ತಿಯನ್ನು ಮೀರುತ್ತದೆ’ ಎಂದು ತನಿಖಾ ಆಯೋಗದ ವರದಿ ಉಲ್ಲೇಖಿಸಿದೆ.

    Continue Reading

    International news

    ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ

    Published

    on

    ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !

    4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.

    Continue Reading

    LATEST NEWS

    Trending