International news
ಇಸ್ರೊದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಮಿಷನ್ ಉಡಾವಣೆ
Published
8 hours agoon
By
NEWS DESK3ಮಂಗಳೂರು/ಶ್ರೀಹರಿಕೋಟ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬುಧವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ ಮಿಷನ್ ಪ್ರೊಬಾ-3 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ಸಜ್ಜಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಅಪರಾಹ್ನ 4:08 ನಿಮಿಷಕ್ಕೆ ಉಡಾವಣೆಯಾಗಲಿದ್ದು, ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುತ್ತದೆ.
ಇದನ್ನೂ ಓದಿ: ಭಾರತೀಯ ನೌಕಪಡೆಯ ದಿನದ ವಿಶೇಷತೆಗಳೇನು ಗೊತ್ತಾ ?
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ಇದು ಪೋಲಾರ್ ಸ್ಯಾಟ್ ಲೈಟ್ ಲಾಂಚ್ ವಹಿಕಲ್ (ಪಿಎಸ್ ಎಲ್ ವಿ ರಾಕೆಟ್)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್ ಕೈಗೊಳ್ಳುವಲ್ಲಿ ಪಿಎಸ್ ಎಲ್ ವಿ ರಾಕೆಟ್ ಹೆಸರುವಾಸಿಯಾಗಿದೆ.ಈ ಮಿಷನ್ ಅಡಿ ಕರೋನಾಗ್ರಾಫ್ ಮತ್ತು ಆಕಲ್ಚರ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.
ಈಯೋಜನೆಯಲ್ಲಿ ಇಸ್ರೋ ಪಾತ್ರ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಪ್ರೋಬಾ-3 ಮಿಷನ್ ನ ವೈಜ್ಞಾನಿಕ ಅಂಶಗಳನ್ನು ಮುನ್ನಡೆಸುತ್ತದೆ. ಈ ಯೋಜನೆಯ ಉಡಾವಣೆ ಯಶಸ್ಸಿಗೆ ಇಸ್ರೋ ಪಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಯೋಜನೆಗಾಗಿ ಇಸ್ರೋ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಅನ್ನು ಒದಗಿಸುತ್ತದೆ. ನಿಗದಿತ ಕಕ್ಷೆಗೆ 500 ಕೆಜಿವರೆಗಿನ ಪೇಲೋಡ್‌ಗಳನ್ನು ಕೊಂಡೊಯ್ಯುವ ವಿಷಯದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಹೆಸರುವಾಸಿಯಾಗಿದೆ. ಈ ಬಾಹ್ಯಾಕಾಶ ನೌಕೆಗಳನ್ನು ನಿಗದಿಪಡಿಸಿದ ಕಕ್ಷೆಗೆ ನಿಯೋಜಿಸುವಲ್ಲಿ ಇಸ್ರೋದ ಪಾತ್ರ ಮಹತ್ವದ್ದಾಗಿದೆ.
ಈಗಾಗಲೇ ಭಾರತವು ಸೌರ ಮಿಷನ್ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ.
ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.
International news
ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !
Published
3 hours agoon
04/12/2024By
NEWS DESK3ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿನಲ್ಲಿ 2. 63 ಕೋಟಿ ರೂಪಾಯಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.
ಕ್ರಿಕೆಟ್ ಇತಿಹಾಸದ ಅಪರೂಪದ ವಸ್ತುವೊಂದನ್ನು ಮಂಗಳವಾರ ಹರಾಜಿಗಿಟ್ಟ ನಂತರ ಬ್ರಾಡ್ಮನ್ ಅವರ ಕ್ಯಾಪ್ ಗೆ ಇಷ್ಟೊಂದು ದೊಡ್ಡ ಮೊತ್ತ ಲಭಿಸಿದೆ. 1947-48ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬ್ರಾಡ್ಮನ್ ಈ ಕ್ಯಾಪ್ ಧರಿಸಿದ್ದರು ಎಂದು ಹೇಳಲಾಗಿದೆ. ಈ ಕ್ಯಾಪ್ ಗೆ ಈಗ 80 ವರ್ಷ ವಯಸ್ಸಾಗಿದೆ ಎಂದು ಹರಾಜು ಸಂಸ್ಥೆ ಬೊನ್ಸಾಮ್ ಹೇಳಿದೆ.
ಇದನ್ನೂ ಓದಿ: 16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !
ಕ್ರಿಕೆಟ್ ಅಂಗಳದಲ್ಲಿ ”ದಿ ಡಾನ್” ಎಂದು ಕರೆಸಿಕೊಂಡಿದ್ದ ಬ್ರಾಡ್ಮನ್ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಆದರೆ 20 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ನಿರ್ಮಿಸಿದ ದಾಖಲೆಗಳು ಇನ್ನೂ ಸಹ ಅವರನ್ನು ಅಜರಾಮರರನ್ನಾಗಿರಿಸಿದೆ.
ಆಸ್ಟ್ರೇಲಿಯಾ ಪರ 52 ಟೆಸ್ಟ್ ಗಳನ್ನಾಡಿದ್ದ ಬ್ರಾಡ್ಮನ್, 2 ತ್ರಿಶತಕ, 12 ದ್ವಿಶತಕ, 29 ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ 6996 ರನ್ ಗಳನ್ನು ಗಳಿಸಿದ್ದಾರೆ. ಅಂದರೆ ಅವರ ಬ್ಯಾಟಿಂಗ್ ಸರಾಸರಿ 99.94 ಇತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ಬ್ಯಾಟರ್ ರೊಬ್ಬರ ಗರಿಷ್ಠ ರನ್ ಸರಾಸರಿ ಎಂಬುದು ವಿಶೇಷ.
International news
ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?
Published
1 day agoon
03/12/2024By
NEWS DESK3ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.
ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು !
ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.
ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.
FILM
ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್
Published
1 day agoon
03/12/2024By
NEWS DESK4ಮಂಗಳೂರು/ನವದೆಹಲಿ : ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನು ಬಂಧಿಸಲಾಗಿದೆ. ಮಾಜಿ ಪ್ರಿಯಕರ ಎಡ್ವರ್ಡ್ ಜೇಕಬ್ಸ್(35) ಮತ್ತು ಅನಸ್ತಾಸಿಯಾ ಎಟಿಯೆನ್ನೆಯನ್ನು ಹ*ತ್ಯೆಗೈದಿರುವ ಗಂಭೀರ ಆರೋಪ ಅಲಿಯಾ ವಿರುದ್ಧ ಕೇಳಿ ಬಂದಿದೆ. ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಅಲಿಯಾ ಫಕ್ರಿ ಬೆಂ*ಕಿ ಹಚ್ಚಿದ್ದರು. ನೀವೆಲ್ಲರೂ ಸಾಯಿರಿ ಎಂಬುದಾಗಿ ಆಕೆ ಕೂಗಾಡಿದ್ದರು ಎಂಬ ಬಗ್ಗೆ ವರದಿಯಾಗಿದೆ.
ಬೆಂ*ಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್ ಮತ್ತು ಅನಸ್ತಾಸಿಯಾಗೆ ತಪ್ಪಿಕೊಳ್ಳಲಾಗಿರಲಿಲ್ಲ. ಹೀಗಾಗಿ, ದಟ್ಟ ಹೊಗೆ ಆವರಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಪ್ರಾ*ಣಬಿಟ್ಟಿದ್ದರು.
ಇದನ್ನೂ ಓದಿ : ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್
ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೂ ಅಲಿಯಾ ನನ್ನ ಮಗನನ್ನು ಹಿಂಬಾಸುತ್ತಿದ್ದಳು ಎಂಬುದಾಗಿ ಜೇಕಬ್ಸ್ ತಾಯಿ ಆರೋಪಿಸಿದ್ದಾರೆ. ಸದ್ಯ ಅಲಿಯಾರನ್ನು ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.
LATEST NEWS
ಎಂ.ಆರ್.ಪಿ.ಎಲ್ ನಿಂದ ಶಿಕ್ಷಣಕ್ಕೆ ಪೂರಕ ಗೋಡೆ ಬರಹ…!!
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ನಾಳೆ ಪ್ರಮಾಣ ವಚನ ಸ್ವೀಕಾರ
12ನೇ ತರಗತಿ ವಿದ್ಯಾರ್ಥಿಯಿಂದ ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್ ಆವಿಷ್ಕಾರ !!
ಭಟ್ರಕುಮೇರು : ಡಿ.8 ರಂದು ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ
16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Trending
- BANTWAL6 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM5 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru7 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !