Connect with us

DAKSHINA KANNADA

ಮಂಗಳೂರು : ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಪರಿಸರದಲ್ಲಿ ಪರಿಶೀಲನೆ

Published

on

ಮಂಗಳೂರು : ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭಾನುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲು ಮಂಗಳೂರು ಮಹಾನಗರಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕ ಪಚ್ಚನಾಡಿಗೆ ಭೇಟಿ ನೀಡಿದ ಅವರು ಘಟಕದ ಒಳಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ತಪಾಸಣೆ ನಡೆಸಿದರು. ತ್ಯಾಜ್ಯ ನಿರ್ವಹಣೆ, ಪ್ರತ್ಯೇಕಿಸುವಿಕೆಯ ಘಟಕಗಳಿಗೂ ಖುದ್ದು ಹೋಗಿ ವೀಕ್ಷಿಸಿದರು. ತ್ಯಾಜ್ಯ ವಿಲೇವಾರಿಯ ಪ್ರತೀ ಹಂತದ ಮಾಹಿತಿ ಕೇಳಿದ ಅವರು ಘಟಕದ ಕಾರ್ಮಿಕ ರಲ್ಲಿಯೂ ಅಹವಾಲು ಆಲಿಸಿದರು. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕಕ್ಕೂ ಹೋಗಿ ವೀಕ್ಷಿಸಿದರು.

ಬಳಿಕ ಮಹಾನಗರಪಾಲಿಕೆ ಆಯುಕ್ತರಿಗೆ ಪಚ್ಚನಾಡಿ ತ್ಯಾಜ್ಯ ಘಟಕದ ನಿರ್ವಹಣೆ ಕುರಿತು ಹಲವು ನಿರ್ದೇಶನಗಳನ್ನು ನೀಡಿದರು. ತ್ಯಾಜ್ಯ ಘಟಕ  ಸುತ್ತ ಮುತ್ತಲಿನ ಜನವಸತಿ ಪ್ರದೇಶಗಳ ಬಾವಿ ನೀರನ್ನು ಪರೀಕ್ಷಿಸಬೇಕು. ಇಲ್ಲಿನ  ಆಸುಪಾಸಿನ ಪ್ರದೇಶದಲ್ಲಿ ಬೆಳೆಯುತ್ತಿರುವ ತರಕಾರಿ, ಹೈನುಗಾರಿಕಾ ಹಾಲನ್ನು ಪರೀಕ್ಷಿಸಬೇಕು. ಘಟಕದ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ಅಕ್ಕಪಕ್ಕದ ಪ್ರದೇಶಗಳಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶಿಸಿದರು.

ಉಪಲೋಕಾಯುಕ್ತರು ಬಳಿಕ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಭೇಟಿ ನೀಡಿದರು. ಹಾಸ್ಟೆಲ್ ಅಡುಗೆ ಕೋಣೆ, ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿದ ಅವರು ಆಹಾರ ಸಾಮಾಗ್ರಿಗಳನ್ನು ತಪಾಸಣೆ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿ, ಸಂವಾದ ನಡೆಸಿದರು. ಉಪಲೋಕಾಯುಕ್ತರ ಭೇಟಿಯ ಸಂದಭ೯ದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹಷ೯ವಧ೯ನ, ಮಹಾನಗರಪಾಲಿಕೆ ಆಯುಕ್ತ ಆನಂದ್, ತಹಶೀಲ್ದಾರ್ ಪ್ರಶಾಂತ್ ಮತ್ತಿತರರು ಇದ್ದರು.

DAKSHINA KANNADA

ಸಂಪಾಜೆ ಬಳಿ ಭೀಕರ ಅಪಘಾತ : ಇಬ್ಬರನ್ನು ಬಲಿ ಪಡೆದ ಕಂಟೈನರ್..!

Published

on

ಮಂಗಳೂರು :  ಸಂಪಾಜೆಯ ಚೆಡಾವು ಎಂಬಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಲಿಯಾಗಿದ್ದಾರೆ. ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಂಟೈನರ್ ಹಾಗೂ ಸುಳ್ಯಕ್ಕೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಎಂ. ಚಿದಾನಂದ ಆಚಾರ್ಯ ಎಂಬವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಅವರ ಜೊತೆಗೆ ಸಹ ಸವಾರೆಯಾಗಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡಾ ಮೃತ ಪಟ್ಟಿದ್ದಾರೆ. ಮೃತರು ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದುಕೇರಿ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ಕಂಟೈನರ್ ರಸ್ತೆ ಬಿಟ್ಟು ಕೆಲ ಮೀಟರ್ ಗಳಷ್ಟು ದೂರ ಕಾಡಿನ ಒಳಗೆ ಚಲಿಸಿದೆ. ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ತಡೆ ಬೇಲಿ ಕೂಡಾ ಮುರಿದು ಬಿದ್ದಿದ್ದು, ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಈ ಅಪಘಾತ ನಡೆದಿದ್ದು,  ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಕರಾವಳಿ ಉತ್ಸವ : ತುಳು ಸಂಸ್ಕೃತಿ ಅನಾವರಣದ ಮೂಲಕ ಪ್ರೇಕ್ಷಕರಿಗೆ ರಸದೌತಣ

Published

on

ಮಂಗಳೂರು: ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ‘ಕರಾವಳಿ ಉತ್ಸವ’ ದ ಪ್ರಯುಕ್ತ ನಡೆಯುತ್ತಿದೆ. ಡಿ. 22ರಂದು ಪ್ರಾರಂಭವಾದ ಈ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ಕದ್ರಿ ಪಾರ್ಕ್ ನಲ್ಲಿ ಸಂಜೆ 4 ರಿಂದ ರಾತ್ರಿ 9ರ ವರೆಗೆ ನಡೆಯಲಿದೆ. ಕರಾವಳಿಯ ನೈಜ ಸಂಸ್ಕೃತಿ ಸಾಹಿತ್ಯ, ಉಡುಗೆತೊಡುಗೆಗಳು, ಸಂಸ್ಕೃತಿಯ ಅನಾವರಣದೊಂದಿಗೆ ಡಿ.21ರಿಂದ ಜ.19 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವವನ್ನು ದ.ಕ ಜಿಲ್ಲಾಡಳಿತ ಆಯೋಜಿಸಿದೆ.

ಕನ್ನಡ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ. ಡಿಸೆಂಬರ್ 22ರಿಂದ ಡಿಸೆಂಬರ್ 30ರ ವರೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.

ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ : 

  •  ಡಿ.24ರಂದು ಸಂಜೆ 6.30 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಾ ಪರ್ಕ ತಂಡದಿಂದ ತುಳು ಹಾಸ್ಯನಾಟಕ ‘ಎರ‍್ಲಾ   ಗ್ಯಾರಂಟಿ  ಅತ್ತ್’ ಪ್ರದರ್ಶನಗೊಳ್ಳಲಿದೆ.
  •  ಡಿಸೆಂಬರ್ 25ರಂದು ಸಂಜೆ 6.30ರಿಂದ ಝೀ ಟಿವಿ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಈ ಟಿವಿ ಖ್ಯಾತಿಯ ಕಲಾವಿದರಿಂದ ಮಧುರ ಗೀತೆಗಳು     ಪ್ರೇಕ್ಷಕರನ್ನು ರಂಜಿಸಲಿದೆ.
  •  ಡಿಸೆಂಬರ್ 26ರಂದು ಸಂಜೆ 6.30ರಿಂದ ಸುರ್-ಸ್ವಾಗರ್ ಲೋಕೇಶ್ ಸಾಲ್ಯಾನ್ ಬ್ಯಾಂಡ್ ಮತ್ತು ಬಳಗದಿಂದ ಫ್ಯೂಶನ್ ಬ್ಯಾಂಡ್ ಕಾರ್ಯಕ್ರಮ   ನಡೆಯಲಿದೆ.
  •  ಡಿಸೆಂಬರ್ 27ರಂದು ಸಂಜೆ 6.30 ರಿಂದ ರಂಜನ್ ಬ್ಯೂರಾ & ಬಳಗ, ಬೆಂಗಳೂರು ವತಿಯಿಂದ ಮೆಲ್ಲೊಟ್ರೀ ಖ್ಯಾತಿಯ ಕಲಾವಿದರು ಕಾರ್ಯಕ್ರಮ   ನಡೆಸಿಕೊಡಲಿದ್ದಾರೆ.
  •  ಡಿಸೆಂಬರ್ 28ರಂದು ಸಂಜೆ 6.30 ರಿಂದ ನೃತ್ಯಾಂಕುರ ಕಲಾತಂಡ, ಮಂಗಳ ಗಂಗೋತ್ರಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು   ನಡೆಯಲಿದೆ. ಜೊತೆಗೆ ಮಕ್ಕಳ ಬ್ಯಾಂಡ್(ಸರಿಗಮಪ ಬಳಗ) ಮಧುರ ಗೀತೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲಿದೆ.
  •  ಡಿಸೆಂಬರ್ 29ರಂದು ಸಂಜೆ 6.30 ರಿಂದ ಕುದ್ರೋಳಿ ಗಣೇಶ್ ಮತ್ತು ತಂಡದಿಂದ ವಿಸ್ಮಯ ಜಾದೂ ಕಾರ್ಯಕ್ರಮ ನಡೆಯಲಿದೆ.
  •  ಡಿಸೆಂಬರ್ 30ರಂದು ಸಂಜೆ 6.30 ರಿಂದ ಅರೆಹೊಳೆ ಪ್ರತಿಷ್ಠಾನ- ನಂದಗೋಕುಲ ವತಿಯಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.

ಇತರ ಕಾರ್ಯಕ್ರಮಗಳು:

  • ಡಿಸೆಂಬರ್ 21-31: ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಹೆಲಿಟ್ಯಾಕ್ಸಿ ರೈಡ್‌ಗಳು (ಒಬ್ಬರಿಗೆ 4,500 ರೂ.)
  •  ಡಿಸೆಂಬರ್ 28-29: ತಣ್ಣೀರಭಾವಿ ಬೀಚ್‌ನಲ್ಲಿ ಎರಡು ದಿನಗಳ ಬೀಚ್ ಉತ್ಸವ
  • ಡಿಸೆಂಬರ್ 22-ಜನವರಿ 19: ಕದ್ರಿ ಪಾರ್ಕ್ ನಲ್ಲಿ ರೋಬೋಟಿಕ್ ಬಟರ್‌ಫ್ಲೈ ಪ್ರದರ್ಶನ (ಸಂಜೆ 4ರಿಂದ ರಾತ್ರಿ 9ರವರೆಗೆ)
  • ಜನವರಿ 4-5: ಕದ್ರಿ ಪಾರ್ಕ್ ನಲ್ಲಿ ಆಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ
  • ಜನವರಿ 11-12: ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ – ಯುವಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು
  • ಜನವರಿ 18-19: ತಣ್ಣೀರಭಾವಿ ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

Continue Reading

DAKSHINA KANNADA

ಕರಾವಳಿ ಉತ್ಸವ : ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ನಿಲ್ದಾಣ ಸ್ಥಳಾಂತರ

Published

on

ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಸಾವ೯ಜನಿಕರ ಆಕಷ೯ಣೆಗೆ ನಡೆಯುತ್ತಿರುವ ಹೆಲೆಕಾಪ್ಟರ್ ಸಂಚಾರದ ನಿಲ್ದಾಣವನ್ನು ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸಂಚಾರ ಕಾಯಾ೯ಚರಣೆ ನಡೆಸುತ್ತಿತ್ತು. ತಾಂತ್ರಿಕ ಕಾರಣಗಳಿಂದ ಇದನ್ನು ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.

 

ಇದನ್ನೂ ಓದಿ : ‘ಏರ್ಲಾ ಗ್ಯಾರೆಂಟಿ ಅತ್ತ್’ ; ಕರಾವಳಿಗರ ನಗಿಸಲು ಬರುತ್ತಿದ್ದಾರೆ ಕಾಪಿಕಾಡ್ ಅ್ಯಂಡ್ ಟೀಮ್

 

ಸಾರ್ವಜನಿಕರು ಹೆಲಿಕಾಪ್ಟರ್ ನಲ್ಲಿ ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಆಕಷ೯ಕವಾಗಿ ವೀಕ್ಷಿಸಬಹುದಾಗಿದೆ. ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‍ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು, ಪ್ರತಿ ವ್ಯಕ್ತಿಗೆ ರೂ. 4,500/- ದರ ನಿಗದಿಪಡಿಸಲಾಗಿದೆ. ಹೆಲಿಕಾಫ್ಟರ್‍ನಲ್ಲಿ ಸಂಚರಿಸಲು ಆಸಕ್ತರು ಬುಕ್ಕಿಂಗ್‍ಗಾಗಿ ವೆಬ್‍ಸೈಟ್ www.helitaxii.com (ಮೊಬೈಲ್ ಸಂಖ್ಯೆ:- 9400399999 / 7483432752) ಸಂಪರ್ಕಿಸಬಹುದಾಗಿದೆ.

Continue Reading

LATEST NEWS

Trending

Exit mobile version