Connect with us

STATE

ಮಹಿಳೆಯರಿಗೆ ಮಾತ್ರ ಎಂಟ್ರಿ ; ಪುರುಷರು ಈ ಪಬ್‌ಗೆ ಬರುವಂತಿಲ್ಲ  !! 

Published

on

ಮಂಗಳೂರು/ಬೆಂಗಳೂರು : ಸಾಮಾನ್ಯವಾಗಿ ಪಬ್ ಎಂದ ಮೇಲೆ ಹುಡಗ ಹುಡುಗಿಯರು ಸ್ನೇಹಿತರು, ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್‌ಗಳೇ ತುಂಬಿರುತ್ತಾರೆ. ಕೆಲವೊಂದು ಪಬ್‌ಗಳಲ್ಲಿ ಹುಡುಗಿ ಜೊತೆ ಬಂದ್ರೆ ಹುಡುಗರಿಗೆ ಫ್ರಿ ಎಂಟ್ರಿ ನೀಡುತ್ತವೆ. ಆದರೆ ಕೇವಲ ಹುಡುಗಿಯರಿಗೆ ಮಾತ್ರ ಪ್ರವೇಶ ಇರುವ ಪಬ್ ಇದೆ ಎಂದರೆ ಅದು ಆಶ್ಚರ್ಯವೇ ಸರಿ.

ಬೆಂಗಳೂರಿನ ಒಂದು ಪಬ್‌ನಲ್ಲಿ ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದು, ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲಿ ಪುರುಷರಿಗೆ ನೋ ಎಂಟ್ರಿ. ಒಳಗಿರುವ ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದಾರೆ. ಕೇವಲ ಮಹಿಳೆಯರಿಗೆ ಮಾತ್ರ ಎಂಟ್ರಿ ಕೊಡುವ ಇಂತಹ ಪರಿಕಲ್ಪನೆಯ ಪಬ್ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶದಲ್ಲೇ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪಬ್ ಇರುವುದು ಬೆಂಗಳೂರಿನ ಬನ್ನೆರುಘಟ್ಟದಲ್ಲಿ ‘ಮಿಸ್ & ಮಿಸೆಸ್‌’ ಎಂಬ ಹೆಸರನ್ನಿಟ್ಟಿದ್ದು,  ಕೇವಲ ಮಹಿಳೆಯರು ಹಾಗೂ ನವ ತರುಣಿಯರಿಗೆ ಮಾತ್ರ ಅವಕಾಶವಿದೆ. ಎಲ್ಲಾ ಮಾಮೂಲಿ ಪಬ್‌ಗಳಂತೆ ಇಲ್ಲಿಯೂ ಮಹಿಳೆಯರು ತಮ್ಮಗಿಷ್ಟ ಬಂದ ಆಹಾರ ಸೇವಿಸಬಹುದು, ಮದ್ಯ/ಪಾನ ಪ್ರಿಯರಾಗಿದ್ದಲ್ಲಿ ಇಷ್ಟವಾಗಿರುವ ಡ್ರಿಂಕ್ಸನ್ನು ಆರ್ಡರ್ ಮಾಡಿ ಎಂಜಾಯ್ ಮಾಡಬಹುದು. ಆದರೆ ಪುರುಷರಿಗೆ ಮಾತ್ರ ಪ್ರವೇಶವಿಲ್ಲ,

‘ಕರ್ಲಿ ಟೇಲ್ಸ್’ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಷಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಪಬ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿವರಿಸಿದ್ದಾರೆ. ‘300 ರೂಪಾಯಿಗಳಿಗೆ ನಿಮಗೆ ಇಲ್ಲಿ ನಿಮಗೆ 2 ಗಂಟೆಯವರೆಗೆ ಅನ್‌ಲಿಮಿಟೆಡ್ ಆಹಾರ ಹಾಗೂ ಕುಡಿಯಲು ವೈನ್ ಸಿಗಲಿದೆ. ಅಲ್ಲದೇ ನೀವು ನಿಮ್ಮ ಉಗುರಿಗೆ ನೇಲ್ ಆರ್ಟ್ ಕೂಡ ಮಾಡಬಹುದು. ಈ ನೇಲ್ ಆರ್ಟ್‌ಗೆ ಮಾತ್ರ ಚಾರ್ಜ್ ಮಾಡಲಾಗುತ್ತದೆ. ಇದು ನಿಮಗೆ ಅಗತ್ಯವಿದ್ದಲ್ಲಿ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು ಇಲ್ಲಿ ವೈನ್‌ ಕುಡಿಯುತ್ತಾ ಫಿಸ್ ಪ್ರೈಸ್ ಅಥವಾ ಇನ್ಯಾವುದೇ ವೆಜ್ ಅಥವಾ ನಾನ್‌ವೆಜ್ ಸ್ನ್ಯಾಕ್ಸ್ ತಿನ್ನುತ್ತಾ ನಿಮ್ಮ ಉಗುರುಗಳ ಬ್ಯೂಟಿ ಕೇರ್ ಮಾಡಬಹುದಾಗಿದೆ’ ಎಂದಿದ್ದಾರೆ.

 

ಇದನ್ನೂ ಓದಿ :  ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !

 

‘ಇದು ಮಹಿಳೆಯರಿಗೆ ಸರಿಯಾದ ಸ್ಥಳ, ಒಳ್ಳೆಯ ಆಹಾರ, ಡ್ರಿಂಕ್ಸ್, ನೇಲ್ ಸಲೂನ್ ಹಾಗೂ ಹುಡುಗರಿಗೆ ಎಂಟ್ರಿ ಇಲ್ಲದಿರುವುದು ಈ ಕ್ಲಬ್‌ನ ವಿಶೇಷ’ ಎಂದು ವಿವರ ನೀಡಲಾಗಿದೆ. ಅನೇಕರು ಈ ಪಬ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಕಾಮೆಂಟ್ ಮಾಡಿದ್ದಾರೆ. ‘ನಾನು ಈ ಪಬ್‌ಗೆ ಹೋಗ್ಬೇಕು ಕನಿಷ್ಟ ಗುರಾಯಿಸುವವರಿಂದ ಮುಕ್ತಿ ಸಿಗುವುದು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬ ‘ಬಿಲ್ ಯಾರು ಪೇ ಮಾಡ್ತಾರೆ’ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಆತನಿಗೆ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು, ‘ನೀವಿನ್ನೂ 90ರ ದಶಕದಲ್ಲಿ ಜೀವನ ಮಾಡ್ತಿದ್ದಂಗೆ ಕಾಣ್ತಿದೆ’ ಎಂದು ಎದುರುತ್ತರ ನೀಡಿದ್ದಾರೆ. ಹಾಗೆಯೇ  ಮತ್ತೆ ಕೆಲವರು ತಾವು ಅಲ್ಲಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದು, ‘ಹೆಣ್ಣು ಮಕ್ಕಳಿಗೆ ಒಳ್ಳೆಯ ಸ್ಥಳ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಇನ್ನಾದರೂ ಪುರುಷರು ತಮಗಿಷ್ಟ ಬಂದಂತೆ ಆರಾಮವಾಗಿ ಕುಡಿದು ನೆಮ್ಮದಿಯಾಗಿ ಇರಬಹುದು’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

LATEST NEWS

ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !

Published

on

ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.

 

 

ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ 


ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.

Continue Reading

STATE

ಅಂಕೋಲಾ: ಕಾರು ಪ*ಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾ*ವು !!

Published

on

ಅಂಕೋಲಾ: ನ್ಯಾನೋ ಕಾರು ಪ*ಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ನಡೆದಿದೆ.

ಪರಿಣಾಮ ಓರ್ವ ಮೃ*ತಪಟ್ಟಟ್ಟು, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಮೃ*ತ ದುರ್ದೈವಿ ಎಂದು ಗುರುತಿಸಲಾಗಿದೆ.

ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ದಿನೇಶ ಎನ್ನುವವನ ತಲೆ ಹಾಗೂ ಇತರೆಡೆ ಗಾ*ಯನೋವುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾದ್ದು ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ.

ಅವೈಜ್ಞಾನಿಕ ಹಾಗೂ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದ ಕೊಡಸಣಿ ಕ್ರಾಸ್ ಬಳಿ ಹತ್ತಾರು ಅಪಘಾತಗಳು ಸಾ*ವು ನೋವುಗಳು ಸಂಭವಿಸುತ್ತಲೇ ಇದ್ದು ಕಳೆದ ವಾರ ಇದೇ ಸ್ಥಳದ ಹತ್ತಿಪತ್ತು ಮೀಟರ್ ದೂರದಲ್ಲಿ ಭಾರೀ ವಾಹನ ಒಂದು ಪ*ಲ್ಟಿಯಾಗಿತ್ತು.

Continue Reading

LATEST NEWS

ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ​: ದೂರು ದಾಖಲು

Published

on

ಮಂಗಳೂರು/ಬೆಂಗಳೂರು: ಹಿಂದೂ ದೇವರುಗಳ  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್​ ಹಾಕಿದ ವ್ಯಕ್ತಿಯ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಜುಮ್ ಶೇಖ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಂಭೆ, ಕೊಲ್ಲೂರು ಮೂಕಾಂಬಿಕೆ ಅಮ್ಮನ ಬಗೆಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಾಘವೇಂದ್ರ ಭಟ್ ಈ ಕುರಿತು ಮಾತನಾಡಿ, “ಅಂಜುಮ್ ಶೇಖ್ ಎಂಬಾತ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಂಭೆ, ಕೊಲ್ಲೂರು ಮೂಕಾಂಬಿಕೆ, ತಿರುಪತಿ ತಿಮ್ಮಪ್ಪ ಮತ್ತು ಗಣೇಶ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್​ನಿಂದ ನಮಗೆ ಅತ್ಯಂತ ನೋವುಂಟು ಆಗಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ :  ವಾರದ ರಜೆಯಲ್ಲಿ “ಪ್ರಕೃತಿಯೊಂದಿಗೆ ಓದು” ವಿನೂತನ ಕಾರ್ಯಕ್ರಮ; ಎಲ್ಲಿ ಗೊತ್ತಾ ??

ಧರ್ಮದ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. “ನಾವು ಅವರ ತರಹ ಬೆಂಕಿ ಹಚ್ಚುವ ಕೆಲಸ ಮಾಡಲ್ಲ. ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದೇವೆ. ನಾವು ರಾಮನ ತರಹ ಇದ್ದೀವಿ, ಆದರೆ ಪರಶುರಾಮ ಆಗಬೇಕಾಗುತ್ತದೆ” ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಸೂಕ್ಷ್ಮ ರಿತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

Trending

Exit mobile version