Home ಪ್ರಮುಖ ಸುದ್ದಿ ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕಾಸರಗೋಡು: ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯಗೊಂಡಿದೆ. ತುರ್ತು ವೈದ್ಯಕೀಯ ಅಗತ್ಯ ಇದ್ದರೆ ಮಾತ್ರ ಕೇರಳಕ್ಕೆ ಕರ್ನಾಟಕ ಗಡಿ ತೆರೆಯಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಕೇರಳ ಕರ್ನಾಟಕ ಗಡಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆದಿದ್ದು,

ಎರಡು ರಾಜ್ಯಗಳು ಗಡಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿವೆ ಎಂದು ಈ ಸಂದರ್ಭ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.

ಈ ಹಿನ್ನಲೆ ಗಡಿ ವಿವಾದ ಈಗ ಅಂತ್ಯಗೊಂಡಿದೆ.

ಕೊವಿಡ್ 19 ಸೊಂಕು ಇಲ್ಲದ ಇತರ ರೋಗಿಗಳ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಆಂಬುಲೆನ್ಸ್ ನಲ್ಲಿ ತಲಪಾಡಿ ಗಡಿ ಮೂಲಕ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಕೇರಳ ಸರಕಾರ  ಹಾಗೂ ಕರ್ನಾಟಕ ರಾಜ್ಯ ಸರಕಾರದ ಮದ್ಯೆ ನಡೆದಿತ್ತು.

ಈ ಒಪ್ಪಂದ ಪ್ರಕಾರ ಕೇರಳ ಸರಕಾರ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರವನ್ನು ಸಲ್ಲಿಸಿತ್ತು.

ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತುರ್ತ ಚಿಕಿತ್ಸೆ ಮತ್ತು ಅಗತ್ಯ ವಸ್ತುಗಳಿಗೆ ಗಡಿ ತೆರೆಯಲು ಅವಕಾಶ ನೀಡುವಂತೆ ಕರ್ನಾಟಕ ಸರಕಾರಕ್ಕೆ ಸೂಚಿಸಿದೆ.

ರೋಗಿಗಳನ್ನು ಅಂಬ್ಯುಲೆನ್ಸ್ ಮೂಲಕವೇ ತಲಪಾಡಿ ಗಡಿ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಬೇಕು.

ಅಲ್ಲದೆ ರೋಗಿಯ ಕುರಿತು ವೈದ್ಯಕೀಯ ಪ್ರಮಾಣಪತ್ರವನ್ನು ತಲಪಾಡಿ ಚೆಕ್ ಪೋಸ್ಟ್ ನಲ್ಲಿರುವ ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತೋರಿಸಿ ಗಡಿ ಪ್ರವೇಶಕ್ಕೆ ಅನುಮತಿ ಪಡೆಯಲು ಸೂಚಿಸಲಾಗಿದೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...