ಬಂಟ್ವಾಳ :ಪುಟ್ಟಬಾಲಕನ ತುರ್ತು ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯ(ರಿ) ಸ್ಪಂದಿಸಿ ತುರ್ತು ನೆರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಯುವಶಕ್ತಿ ಕಡೇಶಿವಾಲಯ(ರಿ) ಆಶ್ರಯದಲ್ಲಿ ಕಕ್ಯಪದವಿನ ಪುಟ್ಟಬಾಲಕ ಹೇಮಂತ್ ತುರ್ತುಚಿಕಿತ್ಸೆಗಾಗಿ ಹಮ್ಮಿಕೊಂಡಿದ್ದ ಸೇವಾಸಂಕಲ್ಪ ಯೋಜನೆಯಲ್ಲಿ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಒಟ್ಟು ₹ 2,82,602(ಎರಡು ಲಕ್ಷದ ಎಂಬತ್ತೆರಡು ಸಾವಿರದ ಆರುನೂರ ಎರಡು)ಮೊತ್ತವನ್ನು ಕಕ್ಯಪದವು ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫಲಾನುಭವಿಯ ತಂದೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆರೆಸ್ಸಸ್ ಪುತ್ತೂರು ಜಿಲ್ಲಾ ಕಾರ್ಯವಾಹ್ ವಿನೋದ್ ಕೊಡ್ಮಾಣ್. ಹಿಂಜಾವೇ ವಿಟ್ಲ ತಾಲೂಕು ಅಧ್ಯಕ್ಷರಾದ ಗಣೇಶ್ ಕೆದಿಲ,ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ,ಕಡೇಶಿವಾಲಯ ಗ್ರಾಮಪಂಚಾಯತ್ ಅಧ್ಯಕ್ಷರಾದ ಸುರೇಶ್ ಬನಾರಿ, ದಿನೇಶ್ ಕಕ್ಯೆಪದವು,ಲೋಕೇಶ್ ಬೊಳ್ಳಾರು,ಶರತ್ ಅಮೈ,ರಿತೇಶ್ ಹಾಗೂ ಇನ್ನಿತರ ಪ್ರಮುಖರು,ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
ಈ ಹಿಂದೆಯೂ ಯುವ ಶಕ್ತಿ ಕಡೇಶೀವಾಲಯ ಆನೇಕರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಸಾರಿದ್ದಾರೆ.