Connect with us

    DAKSHINA KANNADA

    ಎಲಿಕ್ಸಿರ್  ಇಂಡಿಯಾ ಸೂಪರ್ ಮಾಡೆಲ್ ಹಂಟ್ 2020..!

    Published

    on

    ಎಲಿಕ್ಸಿರ್  ಇಂಡಿಯಾ ಸೂಪರ್ ಮಾಡೆಲ್ ಹಂಟ್ 2020..!

    ಬೆಂಗಳೂರು :ದೇವನ ಹಳ್ಳಿ  ಗೋಲ್ಡ್ ಫಿಂಚ್ ರಿಟ್ರೀಟ್ನಲ್ಲಿ ಎಲಿಕ್ಸಿರ್ ವರ್ಲ್ಡ್ ಪ್ರೊಡಕ್ಷನ್ಸ್ ಹೌಸ್ . ಮಿಸ್, ಮಿಸ್ಟರ್ ಮತ್ತು ಮಿಸೆಸ್ ಎಲಿಕ್ಸಿರ್  ಇಂಡಿಯಾ 2020 ಸೂಪರ್ ಮಾಡೆಲ್ ಹಂಟ್ ಆಯೋಜಿಸಿತ್ತು. ಡಿಸೆಂಬರ್ 22ರಂದು ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲ ವಿಭಾಗದಲ್ಲಿ ವಿಜೇತರಾದ ವಿಜೇತರಿಗೆ ಶಶಿಧರ್ ಕೋಟೆ  ಶೀರ್ಷಿಕೆ ನೀಡಿ ಗೌರವಿಸಿದರು.

    ಕಾರ್ಯಕ್ರಮವನ್ನು ಜೋಯ ಅಫ್ರೋಝ,ಸೂಫಿ ಖಾನ್, ರಘು ಮುಖರ್ಜಿ ಶಶಿಧರ್ ಕೋಟೆ ಎಲ್ಲ ವಿಭಾಗಗಳ    ವಿಜೇತರಿಗೆ ಶೀರ್ಷಿಕೆಯನ್ನು ನೀಡಿ ಗೌರವಿಸಿದರು. ಸಾಮಾನ್ಯವಾಗಿ ಸೌಂದರ್ಯ ಸ್ಪರ್ಧಯಲ್ಲಿ ಹೀಗೇ ಇರಬೇಕು ಎನ್ನುವ ನಿಯಮವಿದೆ ಆದರೆ   ಎಲಿಕ್ಸಿರ್ ಪೆಜೆಂಟ್ ಎಲ್ಲಾ ಅಭ್ಯರ್ಥಿಗಳಿಗೆ ಭಾಗವಹಿಸುವ ಅವಕಾಶ ಕಲ್ಪಿಸಿತ್ತು. ಉದಾಹರಣೆಗೆ ವಿಚ್ಛೇದನ ಪಡೆದವರು ,ಎತ್ತರ ತೂಕದಲ್ಲಿ ಕಡಿಮೆ ಹೆಚ್ಚಿದ್ದರೂ ಭಾಗವಹಿಸುವ ಅವಕಾಶವನ್ನು ಕಲ್ಪಿಸಿತ್ತು

    ಶ್ರೀಮತಿ ಪಲ್ಲವಿ ಕೌಶಿಕ್ ಮತ್ತು ಸಾರ್ಥಕ್ ಚೌಧರಿ ಫ್ಯಾಶನ್ ಶೋಗೆ ಅಭ್ಯರ್ಥಿಗಳನ್ನು ಸಿದ್ದ ಪಡಿಸಿದರು. ಅಲ್ಲದೆ ವೇದಿಕೆಯಲ್ಲಿ ಆತ್ಮ ವಿಶ್ವಾಸದಿಂದ ಭಾಗವಹಿಸುವಂತೆ ಮಾಡಿದರು.. 

    ನಾಗಪುರದ ಡಾ. ಯಶಶ್ರೀ ಚೌಹಾಣ್ ಮಿಸ್ ಎಲಿಕ್ಸಿರ್  ಇಂಡಿಯಾ 2020 ಕಿರೀಟ ತನ್ನದಾಗಿಸಿಕೊಂಡಿದ್ದಾರೆ. ಹಾಸನದ ಮಗ್ಗೆಯ ಸಂಜಯ್ ಮೂರ್ತಿ ಮಿಸ್ಟರ್ ಎಲಿಕ್ಸಿರ್ ಇಂಡಿಯಾ 2020 ಪಟ್ಟ ತನ್ನದಾಗಿಸಿಕೊಂಡರು.

    ಶ್ರೀಮತಿ ಆರತಿ ಪಾಂಡೆ ಮಿಸೆಸ್ ಎಲಿಕ್ಸಿರ್ ಇಂಡಿಯಾ 2020 ಶೀರ್ಷಿಕೆ ಗೆದ್ದುಕೊಂಡರು.

    ಮಂಗಳೂರಿನ ಡ್ರೀಮ್ ಝೋನ್ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮಿಸ್ ವಿಮರ್ಷಾ ಗೌಡ ಮಿಸ್ ಎಲಿಕ್ಸಿರ್ ಇಂಡಿಯಾ 2020 ಇನ್ಫೆಕ್ಷಿಯಸ್ ಸ್ಮೈಲ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ..

    ವಿಜೇತರಿಗೆ ಥಾಯ್ಲೆಂಡ್ಗೆ ಹಾಲಿಡೇ ಟ್ರಿಪ್,ನಟನೆಯ ಸ್ಕಾಲರ್ಷಿಪ್ ಗಿಫ್ಟ್ ಹ್ಯಾಂಪರ್ ಹಾಗೂ ಗಿಫ್ಟ್ ಹಾಗೂ ಮಾಡೆಲಿಂಗ್ ಕಾಂಟ್ರ್ಯಾಕ್ಟ್ ಗಳನ್ನು ನೀಡಲಾಯಿತು.  ಎಲಿಕ್ಸಿರ್ ವರ್ಲ್ಡ್ ಪ್ರೊಡಕ್ಷನ್ ಹೌಸನ್ನು ಭಾರತದ ವಿವಿಧ ವಿಭಾಗಗಳ 6ಮಂದಿ ರಾಷ್ಟ್ರೀಯ ವಿಜೇತ ಮಹಿಳೆಯುರು ಪ್ರಾರಂಭಿಸಿದ್ದು  ಯಾವುದೇ ಮಾರ್ಗದರ್ಶನ ಪಡೆಯದೆ ವೇದಿಕೆ ಇಲ್ಲದ ಜನರ ಕನಸುಗಾರರನ್ನು ಗುರುತಿಸುಂತಹ ಕಲಸ ಎಲಿಕ್ಸಿರ್ ನಿಂದಾಗಿದೆ .

    ರಿತೇಶ್, ಅರುಣ್, ಪ್ರಿಯಾಂಕ್, ಕಾಜಲ್ ಅಗರ್ ವಾಲ್, ಖುಷ್ಬೂ ಅವರನ್ನು ಎಲಿಕ್ಸಿರ್ ತಂಡದಿಂದ ಸನ್ಮಾನಿಸಲಾಯಿತು.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು : ಕೂಟ ಮಹಾ ಜಗತ್ತಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೇತನ ವಿತರಣೆ

    Published

    on

    ಮಂಗಳೂರು : ಕೂಟ ಮಹಾ ಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣಾ ಕಾರ್ಯಕ್ರಮವು ಜರುಗಿತು.

    ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಘ್ನೇಶ್ ಕಾರಂತ್, ಮೈಟ್‌ನ ಬಿ.ಇ ಹಾಗೂ ಸಂಜನಾ ಹೇರ್ಳೆ ಕೆ. ಅವರಿಗೆ ತಲಾ ೨೫ ಸಾವಿರ ಸ್ಕಾಲರ್‌ಶಿಪ್ ನೀಡಲಾಯಿತು.

    “ಭವಿಷ್ಯದ ದಿನಗಳಲ್ಲಿ ಮತ್ತೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು” ಎಂದು ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.

    “ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಸದಸ್ಯತ್ವ ಅಭಿಮಾನ ಆಗಬೇಕಿದೆ. ವ್ಯಾಪ್ತಿಯ ಎಲ್ಲರೂ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಆಗಬೇಕು” ಎಂದು ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಹೇಳಿದರು.

    ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ, ಶಿವರಾಮಯ್ಯ, ಪದ್ಮನಾಭ ಮಯ್ಯ, ಮಹಿಳಾ ವೇದಿಕೆಯ ಪ್ರಭಾರಾವ್, ಲಲಿತಾ ಆರ್.ಉಪಾಧ್ಯಾಯ, ಶಶಿಪ್ರಭಾ ಐತಾಳ್, ಸುಮತಿ ಕೋರಿಯಾ, ಅನುರಾಧ, ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಂಗಳೂರು : ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

    Published

    on

    ಮಂಗಳೂರು: ದೇವಾಲಯದ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರ ದಂಡು, ನೂರಾರು ವರ್ಷಗಳ ಇತಿಹಾಸವಿದ್ದ ದೇವರಿಗೆ ಸಂಬಂಧಿಸಿದ ಲಕ್ಷಾಂತರ ರೂ ಮೌಲ್ಯ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ (ನ.04) ಮುಂಜಾನೆ ನಡೆದಿದೆ.

    ದೇವಳಕ್ಕೆ ಸಂಬಂಧಿಸಿದಂತೆ ಅನಾದಿ ಕಾಲದ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದಂತ ಸುಮಾರು ಒಂದುವರೆ ಕೆ.ಜಿ‌ ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ಕೊಂಡುಹೋಗಿದ್ದಾರೆ.

    ಆದಿತ್ಯವಾರ ಮಂದಿರದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿದ್ದ ಕಾರಣ ಕಾಣಿಕೆ ಹುಂಡಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಹಣವಿರಬಹುದು ಎಂದು ಹೇಳಲಾಗುತ್ತಿದೆ.

    ಸಿ.ಸಿ.ಕ್ಯಾಮರಾದಲ್ಲಿ ದೃಶ್ಯ ಸೆರೆ :

    ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ. ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಮಾಹಿತಿ ಪಡೆದುಕೊಂಡು, ಗರ್ಭಗುಡಿಯ ಒಳಗೆ ಪ್ರವೇಶ ಮಾಡಿದ್ದಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬಂದು, ಕಳ್ಳತನ ಮಾಡಿದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.

    ನಾಯಿ ನೀಡಿದ ಸುಳಿವು :

    ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ. ಆದರೂ ಕಳ್ಳರು ಕಳ್ಳತನ ಧೈರ್ಯದಿಂದ ಕಳ್ಳತನ ಮಾಡಿದ್ದಾರೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ. ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು, ನನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಪ್ರಕರಣ ದಾಕಲು :

    ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಚಪ್ಪಲಿ ಧರಿಸದೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ, ಅಲ್ಲಿಂದ ಚಿನ್ನಾಭರಣಗಳನ್ನು ಕಳವು ಮಾಡುವ ದೃಶ್ಯ ಕಂಡು ಬಂತು. ಇದನ್ನು ಖಚಿತಪಡಿಸಿಕೊಂಡ ಬಳಿಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.

    ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಭೇಟಿ ನೀಡಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಎಂಡಿಎಂಎ ಮಾದಕದ್ರವ್ಯ ಮಾರಾಟ ; ಆರೋಪಿಗಳು ಬಂಧನ !

    Published

    on

    ಬಜಪೆ: ನಗರದ ಹೊರವಲಯದ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಫಾರೂಕ್ ಮತ್ತು ಅಬ್ದುಲ್ ಜುನೈದ್ ಬಂಧಿತ ಆರೋಪಿಗಳು.

    ಮಂಗಳೂರಿನ ತೆಂಕ ಎಕ್ಕಾರು ಗ್ರಾಮದ ನಿವಾಸಿಗಳು ಎಮದು ಗುರುತಿಸಲಾಗಿದೆ.

    ಬಜ್ಪೆಯಿಂದ ಕಟೀಲು ಕಡೆಗೆ ಹೋಗುವ ಪೆರ್ಮುದೆ ಪಂಚಾಯತ್ ಕ್ರಾಸ್‌ನಿಂದ ಅನತಿ ದೂರದಲ್ಲಿ ಆರೋಪಿಗಳು ಮಾದಕದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದರು. ಬಜ್ಪೆ ಠಾಣೆಯ ಪಿಎಸ್‌ಐ ರೇವಣಸಿದ್ದಪ್ಪರವರು ಸಿಬ್ಬಂದಿಯೊಂದಿಗೆ ದಾಳಿನಡೆಸಿ ಬಂಧಿಸಿದ್ದಾರೆ.

    ಬಂಧಿತರಿಂದ 50,000 ರೂ. ಮೌಲ್ಯದ 9.11 ಗ್ರಾಂ ತೂಕದ ಮಾದಕದ್ರವ್ಯ ಎಂಡಿಎಂಎ ಸೇರಿದಂತೆ 2 ಮೊಬೈಲ್ ಪೋನ್‌ಗಳು, ಒಂದು ಬೈಕ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಮಾದಕವಸ್ತು ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

    ಬಜಪೆ ಪೊಲೀಸ್ ಠಾನೆಯಲ್ಲಿ ಪ್ರಕರನ ದಾಖಲಾಗಿದೆ.

    Continue Reading

    LATEST NEWS

    Trending