ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇವತ್ತು ಮತ್ತೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ವಾರದ ಎಲಿಮಿನೇಷನ್ ಟ್ವಿಸ್ಟ್‌ಗೆ ಇವತ್ತು ಮೆಗಾ ಕ್ಲೈಮ್ಯಾಕ್ಸ್ ಕಾದಿದೆ. ಬಿಗ್ ಬಾಸ್ ವೀಕ್ಷಕರ ಕುತೂಹಲ ಹಾಗೂ ಕಾಡುತ್ತಿರುವ ಪ್ರಶ್ನೆಗೆ ಕೆಲವೇ ಕ್ಷಣದಲ್ಲಿ ಉತ್ತರ ಸಿಗುತ್ತಿದೆ.
ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಜಿದ್ದಾಜಿದ್ದಿ ಜೋರಾಗಿದೆ. 12ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲಿ ಐಶ್ವರ್ಯ ಹಾಗೂ ತ್ರಿವಿಕ್ರಮ್ ಡೇಂಜರ್ ಝೋನ್ ತಲುಪಿದ್ದರು. ಕೊನೆಗೆ ತ್ರಿವಿಕ್ರಮ್ ಅವರೇ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿದ್ದು, ಬಿಗ್ ಬಾಸ್ ಆದೇಶದಂತೆ ತ್ರಿವಿಕ್ರಮ್ ಬಿಗ್ ಬಾಸ್ ಗೇಟ್ ಓಪನ್ ಮಾಡಲಾಗಿದೆ.
ತ್ರಿವಿಕ್ರಮ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರಾ ಅನ್ನೋದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ವೀಕ್ಷಕರಿಗೆ ಇವತ್ತು ಮೆಗಾ ಟ್ವಿಸ್ಟ್ ಕಾದಿದೆ. ಬಿಗ್ ಬಾಸ್ ಮನೆಯ ಸದಸ್ಯರು ಕೂಡ ತ್ರಿವಿಕ್ರಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ಈಗಲೂ ನಂಬುತ್ತಿಲ್ಲ. ಮತ್ತೊಂದು ಸರ್‌ಪ್ರೈಸ್ ಕಾದಿದೆ ಅಂದುಕೊಂಡೇ ಕಾಲ ಕಳೆಯುತ್ತಿದ್ದಾರೆ.
ಮೂಲಗಳ ಪ್ರಕಾರ ತ್ರಿವಿಕ್ರಮ್ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸಾಧ್ಯತೆ ಕಡಿಮೆ ಇದೆ. ಪ್ರತಿ ಸೀಸನ್ ಅಂತೆ ತ್ರಿವಿಕ್ರಮ್ ಅವರನ್ನ ಬಿಗ್ ಬಾಸ್ ಸೀಕ್ರೆಟ್ ರೂಮ್‌ಗೆ ಕಳುಹಿಸಿರುವ ಸಾಧ್ಯತೆ ಇದೆ. ಮನೆಯವರ ಮಾತುಗಳನ್ನ ಕೇಳಿಸಿಕೊಂಡು ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಸರ್‌ಪ್ರೈಸ್ ಆಗಿ ಎಂಟ್ರಿ ಕೊಡಬಹುದು ಎನ್ನಲಾಗಿದೆ.
ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್‌ಗಳಲ್ಲೂ ತ್ರಿವಿಕ್ರಮ್ ಅವರು ಚೆನ್ನಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್‌ನಿಂದ ವೀಕ್ಷಕರ ವೋಟಿಂಗ್ ಕೂಡ ಓಪನ್ ಆಗಿಲ್ಲ. ಹೀಗಾಗಿ ತ್ರಿವಿಕ್ರಮ್ ಅವರು ಎಲ್ಲರ ನಿರೀಕ್ಷೆಯಂತೆ ಎಲಿಮಿನೇಟ್ ಆಗದೆ ಇಂದು ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಸಾಗುತ್ತಿದ್ದು 14ನೇ ವಾರಕ್ಕೆ ಎಂಟ್ರಿಕೊಟ್ಟಿದೆ. ಬಿಗ್ಬಾಸ್ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದು ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.
ಮಂಗಳೂರು/ಬೆಂಗಳೂರು: ಶನಿವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಮನೆಯ ಹಲವು ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಹನುಮಂತನಿಗೆ ಕೆಲವು ಎಚ್ಚರಿಕೆಗಳನ್ನು ಕೊಟ್ಟರು.
ಈ ವಾರದ ಪಂಚಾಯ್ತಿಯಲ್ಲಿ ಟಾಸ್ಕ್‌ಗಳ ಗಲಾಟೆಯನ್ನೇ ಚರ್ಚಿಸಿದ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್, ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳನ್ನ ಕರೆಕ್ಟ್ ಆಗಿ ಆಡೋಕೆ ಆದ್ರೆ ಆಡಿ. ಇಲ್ಲದಿದ್ದರೆ ಈ ವೇದಿಕೆ ಮೂಲಕ ನಾನೇ ಮಾತು ಕೊಡುತ್ತಿದ್ದೇನೆ. ಟಾಸ್ಕ್ ನಡೆಸೋದಕ್ಕೆ ನಾನೇ ಬಿಡಲ್ಲ. ಹಾಗೇ ಇರೋಣ ಎಂದಿದ್ದಾರೆ.
ಅದರಲ್ಲೂ,ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರನ್ನು ಸುದೀಪ್ ಸದಾ ಹೊಗಳುತ್ತಾ ಬರುತ್ತಿದ್ದರು. ಅವರ ಮಾತಿಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ, ಈ ವಾರ ಬೇರೆಯದ್ದೇ ರೀತಿಯಲ್ಲಿ ಎಪಿಸೋಡ್ ಸಾಗಿದೆ. ಸುದೀಪ್ ಅವರು ಹನುಮಂತ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಹನುಮಂತ ಅವರು ಸೈಲೆಂಟ್ ಆಗಿ ತಲೆ ಆಡಿಸಿದ್ದಾರೆ.
ಬಿಗ್ ಬಾಸ್ ಪ್ರತಿ ವಾರ ಕಷ್ಟ ಪಟ್ಟು ಟಾಸ್ಕ್‌ಗಳ ರಚನೆ ಮಾಡಿ ಅದನ್ನು ನೀಡುತ್ತಾರೆ. ಇದನ್ನು ಸ್ಪರ್ಧಿಗಳು ಆಡಬೇಕು. ಆದರೆ, ಅವರು ಮಾಡುವ ಎಡವಟ್ಟಿನಿಂದ ಕೆಲವೊಮ್ಮೆ ಟಾಸ್ಕ್ ರದ್ದಾದ ಉದಾಹರಣೆ ಇದೆ. ಈ ವಾರವೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಫಲಿತಾಂಶ ಘೋಷಿಸಲು ಸ್ಪರ್ಧಿಗಳು ಒಪ್ಪದ ಕಾರಣ ಟಾಸ್ಕ್ ರದ್ದಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವಾಗ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಸರಿಯಾಗಿ ಟಾಸ್ಕ್ ಆಡಿ. ಕೆಲವೊಮ್ಮೆ ಉಸ್ತುವಾರಿಗಳಾಗಿ ನೀವು ನಡೆದುಕೊಳ್ಳೊದು ಸರಿ ಇರಲ್ಲ. ಅದನ್ನು ಸರಿ ಮಾಡಿಕೊಳ್ಳಿ. ಚೈತ್ರಾ ಅವರು ನಡೆಸಿಕೊಟ್ಟ ಉಸ್ತುವಾರಿ ನನಗೆ ಹೇಸಿಗೆ ತಂದಿತ್ತು. ಮಾತಾಡಿದ್ರೆ ಫೌಲ್ ಎನ್ನುತ್ತಾರೆ. ನಿಮ್ಮದೇ ರೂಲ್ಸ್ ಮಾಡಿಕೊಂಡಿದ್ರಿ’ ಎಂದರು ಸುದೀಪ್. ಆ ಬಳಿಕ ಹನುಮಂತ ಅವರ ವಿಚಾರಕ್ಕೆ ಬಂದರು.
ಹನುಮಂತು ಅವರ ಹೆಸರನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್, ನಿಮ್ಮ ಬಾಯಿಂದ ಇನ್ನೊಂದು ಸಾರಿ ಟಾಸ್ಕ್ ರದ್ದಾದ್ರು ಪರವಾಗಿಲ್ಲ ಅಂತ ಬಂದ್ರೆ ಸರಿ ಇರಲ್ಲ. ನಿಮಗೆ ಎಷ್ಟೇ ವೋಟ್ ಬೀಳುತ್ತಾ ಇರಲಿ. ಹೊರಗಡೆ ಕಳಿಸೋ ಜವಾಬ್ದಾರಿ ನನ್ನದು ಎಂದು ಸುದೀಪ್ ನೇರವಾಗಿ ಎಚ್ಚರಿಸಿದರು. ರದ್ದಾದ್ರೂ ಪರ್ವಾಗಿಲ್ಲ ಅನ್ನೋ ಗಾಂಚಲಿ ಮಾತುಗಳು ಯಾರ ಬಾಯಲ್ಲೂ ಬೇಡ ಮಾ.. ಇದು ಯಾರ ಅಪ್ಪನ ಮನೆಯೂ ಅಲ್ಲ. ಟಾಸ್ಕ್ ರದ್ದಾಗಬೇಕೋ, ಬೇಡಾವೋ ಅಂತ ಬಿಗ್ ಬಾಸ್ ಡಿಸೈಡ್ ಮಾಡುತ್ತಾರೆ ಎಂದು ಮನೆಯ ಎಲ್ಲಾ ಸದಸ್ಯರಿಗೂ ಕಿಚ್ಚ ಸುದೀಪ್ ಖಡಕ್ ಕಿವಿಮಾತು ಹೇಳಿದ್ದಾರೆ.
ಈ ಮಾತಿಗೆ ಹನುಮಂತ ಸೈಲೆಂಟ್ ಆಗಿದ್ದಾರೆ. ಏನು ಮಾತುಗಳನ್ನಾಡದೇ ಸುಮ್ಮನೆ ತಲೆ ಆಡಿಸಿದರು. ಒಟ್ಟಿನಲ್ಲಿ ಸುದೀಪ್ ಅವರು ಹಮನುಮಂತ ಬಳಿ ಇಷ್ಟು ಕಠಿಣವಾಗಿ ನಡೆದುಕೊಂಡಿದ್ದು ಇದೇ ಮೊದಲು.
ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ಈ ವಾರದ ಸೂಪರ್ ಸಂಡೇ ಕೂಡ ಎಂದಿನಂತೆ ಸ್ಪೆಷಲ್ ಆಗಿರಲಿದೆ. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರನ್ನು ಮನೆಯಿಂದ ಹೊರಗಟ್ಟಿಯೇ ಸಿದ್ದ ಎಂದು ಮನೆಮಂದಿ ನಿರ್ಧರಿಸಿದಂತಿದೆ.
ಭಾನುವಾರದ ಎಪಿಸೋಡ್ ನಲ್ಲಿ ಈ ವಾರದ ಟಾಸ್ಕ್ ಗಳ ಬಗ್ಗೆ ಕಿಚ್ಚನ ಪಂಚಾಯ್ತಿ ಮುಂದುವರಿದಿದ್ದು, ಬಿಗ್ ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ.
ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು ಎಂದಿದ್ದಾರೆ ಈ ಆಟದಲ್ಲಿ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲಾ ಸದಸ್ಯರು ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ.
ಭವ್ಯ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾ ಕುಂದಾಪುರ ಅವರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾ ಅವರ ಕಣ್ಣು ನಿಜಕ್ಕೂ ಕೆಂಪಗಾಗಿಸಿದೆ.
ಐಶ್ವರ್ಯಾ ಅವರು ಚೈತ್ರಾ ಅವರಿಗೆ ನೀವು ಮುಖವಾಡ ಕಳಚುತ್ತೇನೆ ಎಂದಿದ್ದೀರಿ. ಆದರೆ ಅವರೇ ಒಂದು ವೇಷ ತೊಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಹನುಮಂತು ಕೂಡ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಹಂಗೆ ಚೈತ್ರಕ್ಕ ಈ ಮನೆಯನ್ನೇ ಕೆಡಿಸಿಬಿಟ್ಟಿದ್ದಾಳೆ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.
ಮೋಕ್ಷಿತಾ ಅವರು, ಕಳಪೆ ಬಂತು ಅಂದ್ರೆ ಚೈತ್ರಾ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್‌ನಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ಇಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ. ಫೈರ್ ಬ್ರಾಂಡ್ ಈಸ್ ಬ್ಯಾಕ್ ಅಂತಾರೆ ಇದು ಹೇಗೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಈ ಡೌವ್‌ಗಳನ್ನ ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು ಎಂದು ಚೈತ್ರಾ ಅವರಿಗೆ ರಜತ್ ಖಡಕ್ ಗೇಟ್ ಪಾಸ್ ಕೊಟ್ಟಿದ್ದಾರೆ.
ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿರುವುದನ್ನು ಕಂಡು ಚೈತ್ರಾಗೆ ಆಘಾತ ಉಂಟುಮಾಡಿದೆ.