Connect with us

    LATEST NEWS

    ಮೈಸೂರು ಮೃಗಾಲಯದಲ್ಲಿ ದುರಂತ: ಮಾವುತನನ್ನೆ ಸಾಯಿಸಿದ ಆನೆ..!

    Published

    on

    ಮೈಸೂರು ಮೃಗಾಲಯದಲ್ಲಿ ದುರಂತ: ಮಾವುತನನ್ನೆ ಸಾಯಿಸಿದ ಆನೆ..!

    ಮೈಸೂರು : ಇತಿಹಾಸ ಪ್ರಸಿದ್ದ ಮತ್ತು ವಿಶ್ವ ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದ ಸಾಯಿಸಿದ ದಾರುಣ ಘಟನೆ ಸಂಭವಿಸಿದೆ. ಮಾವುತ ಹರೀಶ್ (38) ಮೃತ ದುರ್ದೈವಿಯಗಿದ್ದಾನೆ.

    ಹರೀಶ್ ಅಭಿ ಎಂಬ ಮೃಗಾಲಯದ ಆನೆಯ ಆರೈಕೆ ಮಾಡುತ್ತಿದ್ದರು. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ನಿನ್ನೆ ಕೆಲಸಕ್ಕೆ ಹಾಜರಾಗಿದ್ದರು.

    ಈ ಹಿಂದಿನಂತೆಯೇ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿ ಹಾಕಿದೆ. ಕೂಡಲೇ ಹರೀಶನನ್ನು ರಕ್ಷಿಸಿ ಆಸಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಹರೀಶ್​ ಮೈಸೂರಿನ ಲಲಿತಾದ್ರಿಪುರ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ನೌಕರನಾಗಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

    ಪ್ರಕರಣ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    FILM

    ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ‘ಗೋಲ್ಡನ್ ಸ್ಟಾರ್’ ಹಿಂದೇಟು ..! ಇದೇ ಕಾರಣನಾ..!?

    Published

    on

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೌದು, ಜು.2ಕ್ಕೆ ಗಣೇಶ್ ಹುಟ್ಟುಹಬ್ಬವಿದ್ದು 46ನೇ ವಯ್ಸಸಿಗೆ ಕಾಲಿಡುತ್ತಿದ್ದಾರೆ. ಆದರೆ ಕೊರೋನಾ ಹಾವಳಿ ಬಳಿಕ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಿಸಿಕೊಳ್ಳುತ್ತಿಲ್ಲ.

    ನಟರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಮನೆಗೆ ಭೇಟಿ ನೀಡಿ ವಿಶ್ ಮಾಡುತ್ತಾರೆ. ಕೇಕ್, ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತಾರೆ. ಗಣೇಶ್ ಕೊರೋನಾ ಮಹಾಮಾರಿಯ ಬಳಿಕ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಮಾಡ್ತಾ ಬಂದಿದ್ದಾರೆ. ಈ ಬಾರಿಯಾದರೂ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರಂತೆ ಗಣೇಶ್. ಪ್ರೀತಿಯ ಅಭಿಮಾನಿಗಳಿಗೆ ಪೋಸ್ಟ್ ಹಾಕಿ ವಿನಂತಿಸಿಕೊಂಡಿದ್ದಾರೆ.

    “ನನ್ನ ಆತ್ಮೀಯ ಅಭಿಮಾನಿಗಳೇ, ಜು. 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ” ಎಂದು ಪ್ರೀತಿಯಿಂದ ಕೇಳಿಕೊಂಡಿದ್ದಾರೆ.

    “ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

    ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಂದ ಹಲವಾರು ಸುದ್ದಿಗಳು ಹರಿದಾಡುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಕಪ್ಪು ಛಾಯೆ ಮೂಡಿದೆ ಅಂತ ಹೇಳಿದ್ರೆ ತಪ್ಪಾಗಲ್ಲ. ಇನ್ನು ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದರಿಂದಾಗಿ ಈಗಾಗಲೇ ಚಿತ್ರರಂಗ ಮಂಕಾಗಿ ಹೋಗಿದೆ. ಈ ಎಲ್ಲದರ ನಡುವೆ ಗಣೇಶ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಆಸಕ್ತರಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

    ‘ಗಾಳಿಪಟ-2’ ಬಳಿಕ ಗಣೇಶ್ ಸಿನೆಮಾಗಳು ಅಷ್ಟೇನು ಸದ್ದು ಮಾಡುತ್ತಿಲ್ಲ. ಸದ್ಯಕ್ಕೆ ‘ಕೃಷ್ಣಂ ಪ್ರಣಯ ಸಖಿ’ ಸಿನೆಮಾ ರಿಲೀಸ್‌ಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಈ ಸಿನೆಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.ಇನ್ನು ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

    Continue Reading

    LATEST NEWS

    ಗ್ರಾಹಕರಿಗೆ ಗುಡ್ ನ್ಯೂಸ್ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆ ಇಳಿಕೆ

    Published

    on

    ಮಂಗಳೂರು : ಎಲ್​ಪಿಜಿ ಸಿಲಿಂಡರ್ ಬಳಕೆದಾರರಿಗೆ ಜುಲೈ ತಿಂಗಳಾರಂಭದಲ್ಲೇ ಸಿಹಿ ಸುದ್ದಿ ಸಿಕ್ಕಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ 31ರೂ. ಇಳಿಕೆ ಆಗಿದೆ. ಈ ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ.


    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಸಿದ್ದರಿಂದ ಹೋಟೆಲ್​, ರೆಸ್ಟೋರೆಂಟ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ದರ ಹೀಗಿದೆ :

    ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್​ ಬೆಲೆ 1813 ರೂಪಾಯಿ ಆಗಿದೆ. . ದೆಹಲಿಯಲ್ಲಿ ಪ್ರತಿ ಸಿಲಿಂಡರ್​ ಬೆಲೆ 1,646 ರೂಪಾಯಿ ಇದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್​ ಬೆಲೆ 1,598 ಮತ್ತು 1,809.5 ರೂ. ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ.

    ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    ಇಂಡಿಯನ್​ ಆಯಿಲ್​ ಪ್ರಕಾರ, 14.5 ಕೆಜಿಯ ಸಬ್ಸಿಡಿ ಅಡುಗೆ ಅನಿಲ ಬೆಲೆ ಕೋಲ್ಕತ್ತಾದಲ್ಲಿ 892 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆ ಕ್ರಮವಾಗಿ 803, 802.5, 818.5 ರೂ. ಆಗಿದೆ.

    Continue Reading

    chikkamagaluru

    ವೀಕೆಂಡ್ ಮಸ್ತಿಯಲ್ಲಿ ಯುವಕರು..! ದೇವರಮನೆಯಲ್ಲಿ ಯುವಕರ ಡ್ಯಾನ್ಸ್..!!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಇನ್ನು ಮಳೆಗಾಲದಲ್ಲಿ ಹೇಳಲೇಬೇಕಿಲ್ಲ. ಹಚ್ಚ ಹಸಿರ ವಾತಾವರಣ.. ಝಳಝಳಿಸುವ ಪುಟ್ಟ ಪುಟ್ಟ ಜಲಪಾತಗಳು ಕಣ್ಮನ ಸೆಳೆಯುತ್ತದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ದೇವರಮನೆ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಪ್ರವಾಸಿಗರು ಅಂತರ್‌ರಾಜ್ಯದಿಂದಲೂ ಬರುತ್ತಾರೆ.

    ಇದೀಗ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಕ್ಷೇತ್ರ ಮೋಜು ಮಸ್ತಿಯ ಅಡ್ಡವಾಗಿ ಕಂಡುಬರುತ್ತಿದೆ. ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ. ಮೋಜು, ಮಸ್ತಿ, ಡ್ಯಾನ್ಸ್‌ ಮಾಡಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್‌ ಮಾಡಿದ್ದರು. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕುಣಿದು ಕುಪ್ಪಳಿಸಿರವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರ ಭಯ ಹೇಗೂ ಇಲ್ಲ.. ಸ್ಥಳೀಯರ ಮಾತಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ.

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    ಚಾರ್ಮಾಡಿ ಘಾಟಿಯಲ್ಲೂ ಇದೇ ಪರಿಸ್ಥಿತಿ

    ಇನ್ನು ಚಾರ್ಮಾಡಿ ಘಾಟಿಯಲ್ಲೂ ಇಂಥದ್ದೇ ಪರಿಸ್ಥಿತಿ. ಪ್ರವಾಸಿಗರು ಅಲ್ಲಿನ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಜಲಪಾತಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಇನ್ನು ಜಾರುವ ಬಂಡೆಗಳಲ್ಲಿ ನಿಂತು ಮೋಜು, ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    Continue Reading

    LATEST NEWS

    Trending