Monday, January 24, 2022

ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ಓರ್ವ ವಿದ್ಯಾರ್ಥಿ ಸಾವು

ಮಡಿಕೇರಿ: ಕಾಡಾನೆ ದಾಳಿಗೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸಿದ್ಧಾಪುರ ಗ್ರಾಮದಲ್ಲಿ ಸಂಭವಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ಕಬೀರ್ ಮತ್ತು ಸಮೀರಾ ದಂಪತಿಗಳ ಪುತ್ರ ವಿದ್ಯಾರ್ಥಿ ಆಶಿಕ್ (19) ಮೃತ ವಿದ್ಯಾರ್ಥಿ , ಮತ್ತೋರ್ವ ವಿದ್ಯಾರ್ಥಿ ಅಸ್ಮಿಲ್ (19) ಗಾಯಗೊಂಡಿದ್ದಾರೆ.

ಅರೆಕಾಡಿನಿಂದ ನೆಲ್ಯಹುದಿಕೇರಿಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ಹಠಾತನೆ ಕಾಡಾನೆಯೊಂದು ಕಾಫಿ ತೋಟದಿಂದ ರಸ್ತೆಗೆ ಬಂದು ಬೈಕ್ ಸವಾರರ ಮೇಲೆ ದಾಳಿ ಮಾಡಿದೆ.

ಕಾಡಾನೆ ದಾಳಿಗೆ ಆಶಿಕ್ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು.
ಚಿಂತಾಜನಕ ಸ್ಥಿತಿಯಲ್ಲಿದ್ದ ಆಶಿಕ್‌ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭ ಸಾವನ್ನಪ್ಪಿದೆ. ಅಸ್ಮಿಲ್ ಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...