Connect with us

KADABA

ಕಡಬದಲ್ಲಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳು-ಅಪಾರ ಬೆಳೆ ನಷ್ಟ

Published

on

ಕಡಬ: ಕಾಡಾನೆಗಳು ತೋಟಕ್ಕೆ ದಾಂಗುಡಿಯಿಟ್ಟು ಬೆಳೆಗಳಿಗೆ ಅಪಾರ ಹಾನಿ ಮಾಡಿರುವ ಘಟನೆ ಕಡಬದ ಕಡ್ಯ ಕೊಣಾಜೆ, ರೆಂಜಿಲಾಡಿ, ಯೇನೆಕಲ್ಲು ಗ್ರಾಮದಲ್ಲಿ ನಡೆದಿದೆ.


ಕೊಣಾಜೆ ಗ್ರಾಮದ ರವಿ ಭಟ್ ಗುಜ್ಜಾಲ ಎಂಬುವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಡಿಕೆ, ತೆಂಗು ಕೃಷಿಗೆ ಹಾನಿ ಮಾಡಿದೆ. ಈ ಭಾಗದಲ್ಲಿ ಒಟ್ಟು ನಾಲ್ಕು ಕಾಡಾನೆಗಳು ಸಂಚರಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದ ನೈಲಬೈಲು, ಅಲಂಗಾಜೆ, ನೈಲ, ಗುತ್ತಿಮಾರ್, ಪಟ್ಟತ್ತಡ್ಕ, ತರ್ಪೆ ಭಾಗದಲ್ಲಿ ಕಾಡಾನೆ ಹಿಂಡು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ.

ಕುಸುಮಾವತಿ ರೈ, ಮಂಜುನಾಥ ಭಂಡಾರಿ, ರಮೇಶ್ ನೈಲ, ಸಂದೀಪ್ ನೈಲ, ಪಾಪಚ್ಚನ್ ಮೀನಾಡಿ ಬೈಲು, ಗಂಗಾಧರ ಮೊದಲಾದವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಹಿಂಡು ಬೆಳೆ ನಾಶ ಮಾಡಿವೆ.

ಹಲವಾರು ಸಮಯಗಳಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಇದ್ದು, ಕೃಷಿ ತೋಟಕ್ಕೆ ಹಾನಿ ಮಾಡುವ ಜತೆಗೆ ಭಯದ ವಾತಾವರಣ ಉಂಟಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆ ಓಡಿಸಲು ಕ್ರಮಕೈಗೊಂಡ ರೀತಿಯಲ್ಲಿ ಈ ಭಾಗದಲ್ಲೂ ಕಾಡಾನೆ ಓಡಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

Kadaba: ಹಠಾತ್ ಕಾಡಾನೆ ದಾಳಿ- ವ್ಯಕ್ತಿ ಗಂಭೀರ..!

Published

on

ಕಡಬ: ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಸ್ಥಿತಿಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆಯಲ್ಲಿ ನಡೆದಿದೆ.

ಐತ್ತೂರು ಗ್ರಾಮದ ಗರ್ತಿಲ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು.

ಚೋಮ ಅವರು ಸಂಜೆ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ನೆಲ್ಯಡ್ಕ ಶಾಲೆಯ ಸಮೀಪ ಇರುವ ಕಾರ್ತಿಕೇಯ ಭಜನಾ ಮಂದಿರ ಬಳಿ ಆನೆಯೊಂದು ಹಠತ್ ದಾಳಿ ನಡೆಸಿದೆ.

ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.

ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಈ ಹಿಂದೆ ಆನೆ ದಾಳಿಯ ಘಟನೆಗಳು ನಡೆದಿದ್ದು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿದೆ ಎನ್ನಲಾಗಿದೆ.

 

 

Continue Reading

DAKSHINA KANNADA

“ಮಂಗಳೂರು ಅಂದ್ರೆ ಅಭಿಮಾನ”-ಒಂದೇ ವೇದಿಕೆಯಲ್ಲಿ ಅಭಿ-ರೂಪಿ,

Published

on

ಮಂಗಳೂರು ಹಿಂದೂ ಯುವ ಸೇನೆ ವತಿಯಿಂದ ನೆಹರು ಮೈದಾನದಲ್ಲಿ ನಡೆದ 31 ನೇ ವರ್ಷದ ಮಂಗಳೂರು ಗಣೇಶೋತ್ಸವ ನಿನ್ನೆ ಸಂಪನ್ನಗೊಂಡಿದೆ. ಉತ್ಸವಕ್ಕೆ ಬಂದಿದ್ದ ಕನ್ನಡ ಚಿತ್ರರಂಗದ ನಾಯಕ ನಟ ಅಭಿಷೇಕ್ ಅಂಬರೀಷ್ ಗಣೇಶನನ್ನು ಕಣ್ತುಂಬಿಕೊಂಡರು

 

ಮಂಗಳೂರು :  ಮಂಗಳೂರು ಹಿಂದೂ ಯುವ ಸೇನೆ ವತಿಯಿಂದ ನೆಹರು ಮೈದಾನದಲ್ಲಿ ನಡೆದ 31 ನೇ ವರ್ಷದ ಮಂಗಳೂರು ಗಣೇಶೋತ್ಸವ ನಿನ್ನೆ ಸಂಪನ್ನಗೊಂಡಿದೆ. ಉತ್ಸವಕ್ಕೆ ಬಂದಿದ್ದ ಕನ್ನಡ ಚಿತ್ರರಂಗದ ನಾಯಕ ನಟ ಅಭಿಷೇಕ್ ಅಂಬರೀಷ್ ಗಣೇಶನನ್ನು ಕಣ್ತುಂಬಿಕೊಂಡರು.

ಈ ಸಂದರ್ಭ ಮಾತನಾಡಿದ ಅವರು “”ದಕ್ಷಿಣ ಕನ್ನಡ ಜಿಲ್ಲೆ ಅಂದ್ರೆ ನಮಗೆ ಭಾರೀ ಅಭಿಮಾನ. ಇಲ್ಲಿನ ಕಲಾವಿದರು ಕನ್ನಡ ಸಿನೆಮಾ ರಂಗದ ಪಿಲ್ಲರ್ಸ್. ಮಂಡ್ಯದಲ್ಲಿ ರೈತರಿಗೆ ದೊಡ್ಡ ಸಮಸ್ಯೆ ಇದೆ.

ಆ ಸಮಸ್ಯೆ ಪರಿಹಾರಕ್ಕಾಗಿ ನೀವು ಗಣಪನಲ್ಲಿ ಪ್ರಾರ್ಥಿಸಿ. ಹಾಗೇ ನಮ್ಮ ಬ್ಯಾಡ್ ಮ್ಯಾನರ್ಸ್ ಸಿನೆಮಾಕ್ಕೆ ಆಶೀರ್ವಾದ ಮಾಡಿ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ತುಳು ಚಿತ್ರನಟ ರೂಪೇಶ್ ಶೆಟ್ಟಿ ಮಾತನಾಡಿ “ನಾನು ಇಲ್ಲೆ ಪಕ್ಕದ ಪಾಂಡೇಶ್ವರದಲ್ಲೆ ಇದ್ದುಕೊಂಡು ಬಾಲ್ಯದಲ್ಲೆ ಹಿಂದೂ ಯುವ ಸೇನೆ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವನ್ನು ನೋಡಿಕೊಂಡು ಬೆಳೆದವ. ಮಂಗಳೂರು ಗಣೇಶೋತ್ಸವವೇ ನಮಗೆ ಬಹುದೊಡ್ಡ ಗಣೇಶೋತ್ಸವ ಎಂದರು.

 

Continue Reading

DAKSHINA KANNADA

ಕಡಬ ಮಸೀದಿ ಆವರಣಕ್ಕೆ ನುಗ್ಗಿ ಜೈಶ್ರೀರಾಂ ಘೋಷಣೆ ಪ್ರಕರಣ- ಓರ್ವ ಬಂಧನ, ಇನ್ನೋರ್ವ ಎಸ್ಕೇಪ್‌..!

Published

on

Kadaba: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಆವರಣಕ್ಕೆ ಇಬ್ಬರು ಯುವಕರು ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್  (25) ಬಂಧಿತ ಆರೋಪಿ.

ಇನ್ನೋರ್ವ ಆರೋಪಿ ಕೈಕಂಬ ನಡ್ತೋಟ ನಿವಾಸಿ ಸಚಿನ್ ಪರಾರಿಯಾಗಿದ್ದು, ಆತನ ಪತ್ತೆಗೆ ಕಡಬ ಪೊಲೀಸರು ಬಲೆ ಬೀಸಿದ್ದಾರೆ.

ಸೋಮವಾರ ರಾತ್ರಿ 11 ಗಂಟೆ ವೇಳೆಗೆ ಬೈಕಿನಲ್ಲಿ ಬಂದ ಈ ಇಬ್ಬರು ಯುವಕರು ಮಸೀದಿಯ ಹೊರ ಭಾಗದಲ್ಲಿ ಬೈಕ್‌ ನಿಲ್ಲಿಸಿ ಕೆಳಗಿಳಿದು ಬಳಿಕ ಮಸೀದಿ ಕೌಂಪೌಂಡ್ ಒಳನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ್ದರು.

ಸಿಸಿಟಿವಿ ಕ್ಯಾಮರಾದಲ್ಲಿ ಇಬ್ಬರು ಕಿಡಿಗೇಡಿಗಳು ಕಂಪೌಂಡ್‌ ಒಳನುಗ್ಗಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

ಮಸೀದಿಯ ಧರ್ಮಗುರುಗಳನ್ನು ನೋಡಿದ ತತ್‌ಕ್ಷಣ ಆರೋಪಿಗಳು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 24 ಗಂಟೆಗಳೊಳಗೆ ಓರ್ವ ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ  ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Continue Reading

LATEST NEWS

Trending