Connect with us

DAKSHINA KANNADA

ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಪ್ರಕ್ರಿಯೆ-ಕಾಂಗ್ರೆಸ್ ಆರೋಪ ಅರ್ಥಹೀನ: CM ಬೊಮ್ಮಾಯಿ

Published

on

ಮಂಗಳೂರು: ಕಾಂಗ್ರೆಸ್ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್ ನವರು ನಕಲಿ ವೋಟರ್ಸ್ ಡಿಲೀಟ್ ಆದ ಭಯದಲ್ಲಿ ಹೀಗೆ ಮಾಡ್ತಿದಾರೆ ಅನಿಸುತ್ತೆ. ಮತದಾನ ಪಟ್ಟಿ ಪರಿಷ್ಕರಣೆ ಮಾಡೋದು ಚುನಾವಣಾ ಆಯೋಗ, ನಮಗೆ ಸಂಬಂಧ ಇಲ್ಲ. ಪ್ರತೀ ವರ್ಷವೂ ಹೆಸರು ಸೇರ್ಪಡೆ, ಡಿಲಿಟೇಷನ್ ಪ್ರಕ್ರಿಯೆ ಇದೆ’ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮತದಾರರ ಪರಿಷ್ಕರಣೆ ಪ್ರತಿ ವರ್ಷ ಹಾಗೂ ಚುನಾವಣೆ ಸಂದರ್ಭದಲ್ಲಿ ಮಾಡಲಾಗುತ್ತದೆ. ಚುನಾವಣಾ ಆಯೋಗದ ನಿರಂತರ ಪ್ರಕ್ರಿಯೆಯಾಗಿದೆ ಎಂದ ಅವರು ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಎಲ್ಲದ್ದಕ್ಕೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಶೀಘ್ರವಾಗಿ ಅಪರಾಧದ ವಿರುದ್ಧ ಪೊಲೀಸ್ ಕೆಲಸ ಮಾಡುತ್ತದೆ. ಈಗಾಗಲೇ ಬಂಧವವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕರಾವಳಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವುದರ ಕುರಿತು ಮಾತನಾಡಿದ ಅವರು ‘ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ಬಂಡವಾಳದ ನಿರೀಕ್ಷೆ ಇದೆ.ದೊಡ್ಡ ಪ್ರಮಾಣದ ಹೂಡಿಕೆ ಕರಾವಳಿಯಲ್ಲಿ ಆಗಲಿದೆ.

ಉತ್ಪಾದನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಯಲ್ಲಿ ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್ ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ.

ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಘಟ್ಟ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕ್ಕೆ ಅಗತ್ಯ ವಿರುವ ಇಂಧವನ್ನೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್, ವಿಂಡ್ ಮಿಲ್ ಗಳಿಂದಲೇ ಪಡೆಯಲಾಗುವುದು. ಸಂಪೂರ್ಣವಾಗಿ ಹಸಿರು ಯೋಜನೆಯಾಗಲಿದೆ ಎಂದರು.

ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಯಾಗಿ ಈ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.

ಇನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ಬಗ್ಗೆ ಮಾತನಾಡಿ ‘ನಿರಂತರವಾಗಿ ಮಳೆ ಬಂದಿದ್ದರಿಂದ ತಡವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಬೇಕಿದೆ. ಈ ವಾರದಲ್ಲಿ ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಭೆ ಕರೆಯಲಾಗುವುದು.

ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ ಕೆಲಸಗಳಾದ ಸುರಂಗ ಮಾರ್ಗ, ವೈಟ್ ಟಾಪಿಂಗ್ ಮುಂತಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಪಾವಧಿ ಕಾಮಗಾರಿಯಲ್ಲಿ ರಸ್ತೆಯನ್ನು ಬಳಕೆಗೆ ಯೋಗ್ಯವಾಗಿಸುವುದು ಹಾಗೂ ದೀರ್ಘಾವಧಿ ಕಾಮಗಾರಿ ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.

ಇನ್ನು ಸಿಎಂ ಬೊಮ್ಮಾಯಿಯವರು ನಗರದ ಬಾವುಟಗುಡ್ಡೆಯವ ಟಾಗೋರ್‌ ಪಾರ್ಕಿನಲ್ಲಿ ಸ್ಥಾಪಿಸಿರುವ ಸಮರ ಸೇನಾನಿ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಲೋಕಾರ್ಪಣೆ ಮಾಡಿ ಮಾತನಾಡಿ

‘ಮಂಗಳೂರಿಗೆ ಇವತ್ತು ಮಹತ್ವದ ದಿನ, ಇತಿಹಾಸಕ್ಕೆ ನ್ಯಾಯ ಕೊಡುವ ದಿನ. ಇದುವರೆಗೆ ಬೆಳಕಿಗೆ ಬಾರದ ರಾಮಯ್ಯ ಗೌಡರ ಕಥೆ ಈಗ ಮುನ್ನೆಲೆಗೆ ಬಂದಿದೆ.

ರಾಮಯ್ಯ ಗೌಡರಂತಹ ಅನೇಕರ ನಿರಂತರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ರಾಮಯ್ಯ ಗೌಡ ಒಬ್ಭ ಶ್ರೇಷ್ಠ ಕ್ರಾಂತಿಕಾರಿ ಪುರುಷ. ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯ ಒಟ್ಟಾಗಿ ಬಂದು ಕೊನೆಗೆ ಗಲ್ಲಿಗೇರಿಸಿತು. ಇಂತಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು.

ಇದೀಗ ಅವರ ಮೂರ್ತಿ ಸ್ಥಾಪನೆ ಮೂಲಕ ಅವರ ಇತಿಹಾಸ ಜಗತ್ತಿಗೆ ಗೊತ್ತಾಗಿದೆ. ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಬೆಂಗಳೂರಿನಲ್ಲಿ ಇಂಥ ಅನಾಮಧೇಯ ಹೋರಾಟಗಾರರ ಸ್ಮಾರಕ ಮಾಡಲು ಇಂದು ನನಗೆ ಸ್ಪೂರ್ತಿ ಬಂದಿದೆ. ಇವತ್ತಿನ ಪೀಳಿಗೆಗೆ ಇತಿಹಾಸ ತಿಳಿ ಹೇಳಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದ ಮಹಾ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಚಿವರಾದ ಎಸ್‌.ಅಂಗಾರ, ಅಶ್ವಥ್ ನಾರಾಯಣ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರು ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

 

 

Click to comment

Leave a Reply

Your email address will not be published. Required fields are marked *

bangalore

ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!

Published

on

ಬೆಂಗಳೂರು : ಆಕೆ 48 ವರ್ಷ ಪ್ರಾಯದ ಮಹಿಳೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದಾಳೆ. ಬೆಂಗಳೂರಿನ ಕೊಡಿಗೆ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ ಆಕೆಯ ದೇಹ ನಗ್ನವಾಗಿ ಬೆಡ್‌ರೂಮಿನಲ್ಲಿ ಪತ್ತೆಯಾಗಿತ್ತು. ಎಪ್ರಿಲ್ 19 ರಂದು ನಡೆದಿದ್ದ ಈ ಘಟನೆಯನ್ನು ಭೇದಿಸಿದ ಪೊಲೀಸರಿಗೆ ಶಾಕ್ ಆಗುವಂತ ವಿಚಾರಗಳು ಗೊತ್ತಾಗಿದೆ.

ಕೊಡಿಗೆ ಹಳ್ಳಿಯ ಭದ್ರಪ್ಪ ಲೇಔಟ್‌ನಲ್ಲಿ ನಡೆದಿದ್ದ ಶೋಭಾ ಎಂಬ ಮಹಿಳೆಯ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನವೀನ್ ಎಂಬ ಯುವಕನನ್ನು ಕೊಡಿಗೆ ಹಳ್ಳಿಯ ಪೊಲೀಸರು ಬಂದಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಬಳಿಕ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಶೋಭಾಳ ಕಾಮದಾಹ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಶೋಭಾಳಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ ನವೀನ್ ಬಳಿಕ ಸ್ನೇಹಿತನಾಗಿ, ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಮಗನ ವಯಸ್ಸಿನ ಹುಡುಗನ ಜೊತೆಯಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದ ಶೋಭಾಳ ಅತಿಯಾದ ಕಾಮಧಾಹದಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇರೋಹಳ್ಳಿ ಮೂಲದ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.

ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್‌ಗೆ ಸೆಕ್ಸ್‌ಗೆ ಒತ್ತಾಯಿಸಿದ್ದು ನಿರಾಕರಿಸಿದಾಗ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಈಕೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್‌ ಬೆಡ್‌ ರೂಮಿನಲ್ಲೇ ಆಕೆಯ ಕಥೆ ಮುಗಿಸಿದ್ದ.

48ರ ಮಹಿಳೆಗೆ ಯುವಕರ ಮೇಲೆ ಹುಚ್ಚು

48ರ ಶೋಭಾ ಕೇವಲ ನವೀನ್ ಮಾತ್ರವಲ್ಲದೇ ಅನೇಕ ಯುವಕರ ಸಹವಾಸ ಬೆಳೆಸಿದ್ದಳು. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿದ್ದು, ನವೀನ್‌ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ. ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಆ್ಯಪ್‌ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20 ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು. ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ ಆ ಯುವಕರ ಮದುವೆಗೂ ಅಡ್ಡಿ ಪಡಿಸಿ ಮದುವೆ ನಿಲ್ಲಿಸಿದ್ದಳು.

ಇದನ್ನೂ ಓದಿ ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ಕೊಲೆಯಾದ ದಿನವೂ ನವೀನ್‌ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್‌ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು‌ ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌, ಶೋಭಾಳ ಕತ್ತು ಹಿಸುಕಿ ಕೊ*ಲೆ‌ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

DAKSHINA KANNADA

ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

Published

on

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.

ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.

ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.

ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.


ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.

ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.

Continue Reading

LATEST NEWS

Trending