Thursday, September 29, 2022

ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿಯ ಬಂಧನ

ಕುಶಾಲನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಘಟನೆ ಕುರಿತು ವಶಕ್ಕೆ ತೆಗೆದುಕೊಳ್ಳಲಾದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


ನಿನ್ನೆ ತಡರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೇರಿದಂತೆ ಬಿಜೆಪಿ ಮುಖಂಡರು ಪೊಲೀಸರಿಗೆ ಮನವಿ ಮಾಡಿ ಜಾಮೀನು ನೀಡಿ ಬಿಡಿಸಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರು ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಎಂದು ತಿಳಿದು ಬಂದಿದೆ.
ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಕೊಡಗು ಜಿಲ್ಲೆಗೆ ಬಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆಯಲಾಗಿತ್ತು.

LEAVE A REPLY

Please enter your comment!
Please enter your name here

Hot Topics

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

PFIನ್ನು ಕರ್ನಾಟಕದಲ್ಲಿ ಪೋಷಿಸಿದ್ದು ಕಾಂಗ್ರೆಸ್‌-ಸಚಿವ ಸುನಿಲ್ ವಾಗ್ದಾಳಿ

ಉಡುಪಿ: 'ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ ಪಿಎಫ್ ಐ ಇಷ್ಟು ದೊಡ್ಡ ಪ್ರ‌ಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣವಾಗಿತ್ತು. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು....

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ...