ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪದ ವೇಳೆ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣೆ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟುವ ಸಾದ್ಯತೆಗಳಿವೆ.
ಟರ್ಕಿ: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪದ ವೇಳೆ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣೆ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟುವ ಸಾದ್ಯತೆಗಳಿವೆ.
ಇನ್ನು ಕೂಡ ಕಂಪದ ಬಳಿಕ ಹಲವು ಲಘು ಕಂಪನಗಳು ಸಂಭವಿಸುತ್ತಿರುವುದು ಮತ್ತು ಮೈಕೊರೆಯುವ ಚಳಿ, ಪರಿಹಾರ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ.
ಭಾರತ ಸೇರಿದಂತೆ 40 ರಾಷ್ಟ್ರಗಳು ಕಾರ್ಯಾಚರಣೆಗೆ ನೆರವಾಗಿವೆ.31 ಸಾವಿರ ಮಂದಿ ಈ ಪ್ರಕೃತಿ ವಿಕೋಪದಲ್ಲಿ ಗಾಯಗೊಂಡಿದ್ದಾರೆ.
ಸಿರಿಯಾದಲ್ಲಿ 800 ಮಂದಿ ಮೃತಪಟ್ಟಿದ್ದು, 1500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಭೂಕಂಪಕ್ಕೆ ತುತ್ತಾಗಿರುವ ಟರ್ಕಿಗೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತೇಹ್ ಎಲ್ ಸಿಸಿ ಮಾನವೀಯ ನೆರವು ಘೋಷಿಸಿದ್ದಾರೆ.
ಹಲವು ವರ್ಷಗಳಿಂದ ಇದ್ದ ಹದಗೆಟ್ಟ ಸಂಬಂಧವನ್ನು ಸುಧಾರಿಸಲು ಉಭಯ ದೇಶಗಳು ಇತ್ತೀಚೆಗೆ ಪ್ರಯತ್ನ ಆರಂಭಿಸಿದ್ದವು.
ಪರಿಹಾರ ಕಾರ್ಯಾಚರಣೆಗೆ 40 ದೇಶಗಳು ಶೋಧನಾ ತಂಡಗಳನ್ನು ಕಳುಹಿಸಿಕೊಟ್ಟಿದ್ದು, ಸಂತ್ರಸ್ತ ದೇಶಗಳಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಆದಾಗ್ಯೂ ಹಲವು ಪಟ್ಟಣಗಳಲ್ಲಿ ಅವಶೇಷಗಳಡಿ ಸಿಲುಕಿಕೊಂಡವರಿಂದ ನೆರವಿಗಾಗಿ ಆಕ್ರಂದನ ಕೇಳಿಬರುತ್ತಿದೆ.
ವಿಶ್ವಸಂಸ್ಥೆ ಈಗಾಗಲೇ ವಾಯವ್ಯ ಸಿರಿಯಾಗೆ 25 ದಶಲಕ್ಷ ಡಾಲರ್ ನೆರವನ್ನು ತುರ್ತಾಗಿ ಬಿಡುಗಡೆ ಮಾಡಿದ್ದು, ಉಭಯ ದೇಶಗಳಿಗೆ ಮಾನವೀಯ ನೆರವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಆರಂಭಿಸಿದೆ.