ದುಬೈ:ಯುಎಈ ಯ ದುಬೈ ಹಾಗೂ ಶಾರ್ಜಾ ಹಾಗೂ ರಾಸ್ ಅಲ್ ಕೈಮಾದಲ್ಲಿ ಇಂದು ಸಂಜೆ ಲಘು ಭೂಕಂಪವಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆ ಖಲೀಜ ಟೈಮ್ಸ್ ವರದಿ ಮಾಡಿದೆ.
ಇರಾನ್‌ನ ದಕ್ಷಿಣದಲ್ಲಿ ಸಂಜೆ 4.07ನಿಮಿಷಕ್ಕೆ ಈ ಅನುಭವವಾಗಿದೆ. ಎನ್ ಸಿಎಂಯ ಪ್ರಕಾರ 6.2 ತೀವ್ರತೆಯ ಕಂಪನಗಳು ಸಂಭವಿಸಿವೆ ಎಂದು ದೃಢಪಡಿಸಿದೆ.
2ರಿಂದ 3 ನಿಮಿಷಗಳ ಕಾಲ ಈ ಅನುಭವವಾಗಿದೆ. ದುಬೈ, ಶಾರ್ಜಾ, ಜುಮೇರಾ ಲೇಕ್ ಟವರ್, ದೇರಾ, ಬಾರ್ಷಾ, ಅಲ್‌ನಾದಾ ಸೇರಿ ಹಲವೆಡೆ ಈ ಅನುಭವಾಗಿದೆ.
ಯುಎಇ ಒಂದು ವರ್ಷದಲ್ಲಿ ಹಲವಾರು ಬಾರಿ ಸಣ್ಣ ಭೂಕಂಪಗಳನ್ನು ಅನುಭವಿಸುತ್ತದೆ ಹಾಗೂ ಅವು ಆತಂಕಕ್ಕೆ ಕಾರಣವಾಗದು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಸಿಎಂ) ಈ ಹಿಂದೆ ತಿಳಿಸಿತ್ತು