Thursday, February 2, 2023

ಹರೇಕಳ ಸೇತುವೆ ಬಳಕೆಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ DYFI ಪ್ರತಿಭಟನೆ

ಉಳ್ಳಾಲ: ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಒತ್ತಾಯಿಸಿ ಡಿ.ವೈ.ಎಫ್. ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ಸೋಮವಾರ ಸಂಜೆ ನಡೆಯಿತು.


ಡಿ.ವೈ.ಎಫ್. ಐ ಜಿಲ್ಲಾ ಅಧ್ಯಕ್ಷ ಬಿ.ಕೆಇಂತಿಯಾಝ್ ಮಾತನಾಡಿ ಜನರ ಅನುಕೂಲಕ್ಕೆ ಮಾಡಿರುವ ಸೇತುವೆಯನ್ನು ಆದಷ್ಟು ಬೇಗ ಜನರಿಗೆ ಉಪಯೋಗವಾಗುವಂತೆ ಮಾಡಲಿ, ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇಲ್ಲಿ ಜನರ ಅನುಕೂಲಕ್ಕೆ ಗೇಟ್ ತರೆಯುತ್ತಿದ್ದು ಅದನ್ನು ಬೆಳಿಗ್ಗೆ 6ರಿಂದ ರಾತ್ರಿ 11.00 ಗಂಟೆಯವರೆಗೆ ತರೆಯಲಿ, 15 ದಿನದಲ್ಲಿ ಈ ಸೇತುವೆಯನ್ನು ಜನಸಾಮಾನ್ಯರಿಗೆ ಮುಕ್ತ ಮಾಡಿಕೊಡದೇ ಇದ್ದಲ್ಲಿ ಅನಿರ್ದಿಷ್ಠ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.


ಉಳ್ಳಾಲ ಡಿ.ವೈ.ಎಫ್. ಐ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಹರೇಕಳ ಸಿ.ಐ.ಟಿ.ಯು ರಿಕ್ಷಾ ಯೂನಿಯನ್ ಅಧ್ಯಕ್ಷ ಆಶೀಫ್ ಪಂಜಿಮಾಡಿ , ಹರೇಕಳ ಡಿ.ವೈ.ಎಫ್. ಐ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಲಚ್ಚಿಲ್, ಸಿ.ಪಿ.ಐ.ಎಂ ಹಿರಿಯ ಮುಖಂಡರಾದ ಉಮ್ಮರಬ್ಬ, ಸತ್ತಾಎ್ ಕೊಜಪಾಡಿ, ಎವ್ರೀಸ್, ಇಸ್ಮಾಯಿಲ್ ಆಲಡ್ಕ, ಇಸ್ಮಾಯಿಲ್ ಆಲಡ್ಕ ಕೆ.ಎಚ್ ಹಮೀದ್ ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಕಾರ್ಯದರ್ಶಿ ರಿಝ್ವಾನ್ ಕಂಡಿಗ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

Hot Topics

ಉಳ್ಳಾಲ ಸಮುದ್ರದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ..!

ಉಳ್ಳಾಲ: ಉಳ್ಳಾಲದ ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ. ವಾರೀಸುದಾರರಿದ್ದಲ್ಲಿ ಉಳ್ಳಾಲ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.ಸುಮಾರು 60-70 ರ ಹರೆಯದ ಮಹಿಳೆ ಮೃತದೇಹ ಇದಾಗಿದೆ. ಸೀರೆ...

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯನ ಪೀಡನೆಗೆ ಬೇಸತ್ತು ವೈದ್ಯೆ ಜೀವಾಂತ್ಯ..!

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರು: ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು...

ಉಡುಪಿ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ – ಅಪಾರ ನಷ್ಟ..!

ಉಡುಪಿ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೋಮದು ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಎಂಬಲ್ಲಿ ನಡೆದಿದೆ.ವನಜ ಎನ್‌.ಕೆ ಎಂಬರಿಗೆ ಸೇರಿದ ಮನೆ ಇದಾಗಿದ್ದು ಆಕಸ್ಮಿಕವಾಗಿ ಬೆಂಕಿ...