Connect with us

    LATEST NEWS

    ಕಸಬ ಬೆಂಗ್ರೆ ಅಂಗನವಾಡಿ ಕೇಂದ್ರದ ಪೌಷ್ಟಿಕಾಂಶ ಆಹಾರ ಜಾನುವಾರುಗಳ ಪಾಲು

    Published

    on

    ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಕಸಬ ಬೆಂಗರೆಯ ಅಂಗನವಾಡಿ ಕೇಂದ್ರ, ಸರಕಾರ ನೀಡಿರುವ ಪೌಷ್ಟಿಕಾಂಶದ ಆಹಾರವನ್ನು ಅಂಗನವಾಡಿ ಸುತ್ತಮುತ್ತಲಿನ ಫಲಾನುಭವಿಗಳಿಗೆ ವಿತರಿಸದೆ ನಿರ್ಲಕ್ಷ ತೋರುತ್ತಿದ್ದು, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ಸಂಘಟನೆಯ ಮುಖಂಡರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕಸಬ ಬೆಂಗರೆ ಪ್ರದೇಶದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಅಂಗನವಾಡಿಯಲ್ಲಿ ಕಳೆದ ಒಂದು ವರುಷದಿಂದ ಅಂಗನವಾಡಿ ಸಿಬ್ಬಂಧಿಗಳು ಸ್ಥಳೀಯ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸರಿಯಾಗಿ ವಿತರಿಸದೆ ನಿರ್ಲಕ್ಷ ತೋರಿಸುತ್ತಿದ್ದಾರೆ.

    ಅಲ್ಲದೆ ವಿತರಿಸದ ಪೌಷ್ಠಿಕ ಆಹಾರಗಳಶನ್ನು ಮುಕ್ತಾಯ ಅವಧಿಯ ಮೊದಲೇ ಜಾನುವಾರುಗಳಿಗೆ ನೀಡುತ್ತಿರುವ ಪ್ರಕರಣಗಳ ವರದಿಯಾಗಿದ್ದು ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

    LATEST NEWS

    ಭಾರತೀಯ ಸೇನಾ ದಿನ : ವಿಶೇಷತೆ ಹಾಗೂ ಮಹತ್ವವೇನು ?

    Published

    on

    ಮಂಗಳೂರು : ದೇಶದ ಗಡಿಯಲ್ಲಿ ನಿಂತು ಸದಾ ನಮ್ಮನ್ನು ಕಾಯುವ ಸೈನಿಕನಿಗೆ ಗೌರವ ಸಲ್ಲಿಸುವ ದಿನವೇ ಭಾರತೀಯ ಸೇನಾ ದಿನ. ಅದೆಷ್ಟೋ ಸೈನಿಕರು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ದೇಶದ ಭದ್ರತೆಗ ಭಾರತೀಯ ಸೇನೆ ಕೊಟ್ಟ ಕೊಡುಗೆ ಅಪಾರವಾದದ್ದು. ವಿಶ್ವದ ನಾಲ್ಕನೇ ಬಲಿಷ್ಠ ಸೇನೆಯಾಗಿ ನಮ್ಮ ಭಾರತೀಯ ಸೇನೆ ಗುರುತಿಸಿಕೊಂಡಿದೆ, ದೇಶದ ಭದ್ರತೆಗೆ ಸದಾ ಬದ್ಧವಾಗಿದೆ. ಶತ್ರು ರಾಷ್ಟ್ರಗಳನ್ನು ಯುದ್ಧದಲ್ಲಿ ಮಣಿಸಿ ವಿಜಯಿಶಾಲಿಯಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರರನ್ನು ಗೌರವಿಸಲು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸಲು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.


    ಇತಿಹಾಸ:

    1895 ಏಪ್ರಿಲ್ 01 ರಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಸೇನಾ ಕಮಾಂಡರ್ ಗಳು ಬ್ರಿಟಿಷರೇ ಆಗಿದ್ದರು. ಆದರೆ, ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಅಂದರೆ ಎರಡು ವರ್ಷಗಳ ನಂತರದಲ್ಲಿ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಅದರ ಸವಿನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

    ಮಹತ್ವ ಹಾಗೂ ಆಚರಣೆ:

    ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ದಿನವಾಗಿದ್ದು, ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಅಧಿಕಾರ ಸ್ವೀಕರಿಸಿದ ಸವಿನೆನಪಿಗಾಗಿ ಭಾರತೀಯ ಸೇನಾ ದಿನವನ್ನು ಆಚರಿಸುವುದೇ ಇಂದಿನ ದಿನದ ಮಹತ್ವವಾಗಿದೆ. ಈ ಬಾರಿ 77 ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದೇಶದಾದ್ಯಂತ ಭವ್ಯವಾದ ಸಮಾರಂಭಗಳು, ಮಿಲಿಟರಿ ಮೆರವಣಿಗೆಗಳು, ಸಾಹಸಿ ಚಟುವಟಿಕೆಗಳ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೇನಾ ಪರೇಡ್, ವೀರಯೋಧರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ ಕೆಡೇಟ್‌ಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ವಿಶೇಷವಾಗಿ ಯುವ ಸಮೂಹದ ಗಮನ ಸೆಳೆಯುತ್ತಾರೆ.

    Continue Reading

    BANTWAL

    ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

    ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಒಣ ಹಾಕಿದ್ದ ಅಡಿಕೆಗಳು ಒದ್ದೆಯಾಗಿ ನಷ್ಟ ಉಂಟಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದ್ದು, ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಕಟೀಲು ಯಕ್ಷಗಾನ ಬಯಲಾಟ ವೀಕ್ಷಣೆ ಮಾಡುತ್ತಿದ್ದವರು ಎದ್ದು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

    ಮಂಗಳೂರು ಸುತ್ತಮುತ್ತ ಕೂಡಾ ಮಳೆಯಾಗಿದ್ದು ,ಉಳ್ಳಾಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯ ಪಾಕಿಸ್ತಾನ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತ ಬೀಸುತ್ತಿರುವುದು ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    Continue Reading

    DAKSHINA KANNADA

    ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

    Published

    on

    ಮಂಗಳೂರು : ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್ ವಾಲ ಮತ್ತು ಹಿಂದಿ ಬಿಗ್ ಬಾಸ್ 18ರ ಸ್ಪರ್ಧಿ ಸುನಿಲ್ ಪಾಟೀಲ್ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.

    ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜ. 18 ರಿಂದ 22 ರವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್” ನಡೆಯಲಿದೆ. ಈ ಕಾರ್ಯಕ್ರಮದ ಮೊದಲ ಆಕರ್ಷಣೆಯಾಗಿ ಡಾಲಿ ಚಾಯ್ ವಾಲ ಅವರು ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ: ದಾಖಲೆಯ ಪ್ರಯಾಣಿಕರ ನಿರ್ವಹಣೆ

    ತನ್ನ ಬರುವಿಕೆಯ ಕುರಿತು ಡಾಲಿ ಚಾಯ್ ವಾಲ ಅವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ..ಚಾಯ್ ಪಿಯೇಂಗೆ” ಎಂದು ಪೋಸ್ಟ್ ಮಾಡಿದ್ದಾರೆ.

    ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿಕೊಂಡಿದ್ದರು. ಇದಾದ ಬಳಿಕ ಡಾಲಿ ಚಯ್ ವಾಲರವರ ಖ್ಯಾತಿ ದೇಶದಾದ್ಯಂತ ಇನ್ನಷ್ಟು ಜಾಸ್ತಿಯಾಯಿತು.

    Continue Reading

    LATEST NEWS

    Trending