Connect with us

ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ವಿತರಣೆ ಹಿನ್ನಲೆ ಸೂಕ್ತ ತನಿಖೆಗೆ ಆಗ್ರಹಿಸಿದ ಡಿ.ವೈ.ಎಫ್.ಐ

Published

on

ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ವಿತರಣೆ ಹಿನ್ನಲೆ ಸೂಕ್ತ ತನಿಖೆಗೆ ಆಗ್ರಹಿಸಿದ ಡಿ.ವೈ.ಎಫ್.ಐ

ಮಂಗಳೂರು: ಉದ್ಯೋಗ, ಆಹಾರವೂ ಇಲ್ಲ, ಊರುಗಳಿಗೆ ತೆರಳಲು ಸರಿಯಾದ ಪ್ರಯಾಣ ವ್ಯವಸ್ಥೆ ಇಲ್ಲದೆ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಕೊಳೆತ ಅಕ್ಕಿ ವಿತರಿಸಿರುವುದು ಆಘಾತಕಾರಿ.

ಈ ಪ್ರಕರಣ ಬಯಲಿಗೆ ಬಂದಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ 19 ಪರಿಹಾರ ಕ್ರಮ, ಹಾಗೂ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಬಲವಾಗುತ್ತಿದ್ದು,

ರಾಜ್ಯ ಸರಕಾರ ಈ ಕುರಿತು ಪ್ರತ್ಯೇಕ ತನಿಖೆ ನಡೆಸಲು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋಕಟ್ಟೆ ಪರಿಸರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಎಮ್ ಆರ್ ಪಿ ಎಲ್, ಎಸ್ ಇ ಜಡ್ ಗಳ ಗುತ್ತಿಗೆದಾರರ ಅಡಿ ದುಡಿಯುವ ಈ ಕಾರ್ಮಿಕರನ್ನು,

ಲಾಕ್ ಡೌನ್ ಸಂದರ್ಭ ಕಂಪೆನಿಗಳು ಹಾಗೂ ಗುತ್ತಿಗೆದಾರರು ಪೂರ್ಣವಾಗಿ ಕಡೆಗಣಿಸಿದ್ದರು.

ದಾನಿಗಳ ಸಹಾಯ ಹೊರತಾದ ಯಾವುದೇ ನೆರವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಈ ಕಾರ್ಮಿಕರು ವಾರದ ಹಿಂದೆ ಎಮ್ ಆರ್ ಪಿ ಎಲ್ ಮುಂಭಾಗ ಗುಂಪು ಸೇರಿ ಊರಿಗೆ ತಲುಪಿಸುವಂತೆ ಪ್ರತಿಭಟಿಸಿದ್ದರು.

ಪ್ರತಿಭಟನೆಯ ದಿನ ಜೋಕಟ್ಟೆಗೆ ಆಗಮಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಲಾ ಐದು ಕಿಲೋ ತೂಕದ ನೂರು ಚೀಲ ಅಕ್ಕಿ ಕಾರ್ಮಿಕರಿಗೆ ನೀಡಿ ಕೈ ತೊಳೆದುಕೊಂಡಿದ್ದರು.

ಹೆಚ್ಚಿನ ಕಾರ್ಮಿಕರು ಕೊಳೆತ ಅಕ್ಕಿಯನ್ನು ಎಸೆದಿದ್ದು, ಕೆಲವರು ಹಸಿವು ತಾಳಲಾರದೆ ಅದೇ ಅಕ್ಕಿಯನ್ನು ಬೇಯಿಸಿ ತಿಂದಿದ್ದಾರೆ.

ಇನ್ನುಳಿದ ಕಾರ್ಮಿಕರಿಗೆ “ನಾಗರಿಕ ಹೋರಾಟ ಸಮಿತಿ ಜೋಕಟ್ಟೆ” ವತಿಯಿಂದ ತಾತ್ಕಾಲಿಕವಾಗಿ ಆಹಾರ, ವಸತಿಯ ಏರ್ಪಾಡು ಮಾಡಲಾಗಿತ್ತು.

ಇಂದು ವಲಸೆ ಕಾರ್ಮಿಕರಿಗೆ ಆಹಾರ ಬಡಿಸುವ ಸಂದರ್ಭ ಕೆಲವು ಕಾರ್ಮಿಕರು ತಮಗೆ ನೀಡಿರುವ ಕೊಳೆತ ಅಕ್ಕಿಯನ್ನು ಸಮಿತಿಯ ಮುಖಂಡರ ಗಮನಕ್ಕೆ ತಂದಿದ್ದಾರೆ.

ಆ ಮೂಲಕ ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯ ಅವ್ಯವಸ್ಥೆ, ಅವ್ಯವಹಾರ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಕೊರೊನಾ ನಿಯಂತ್ರಣ, ಪರಿಹಾರ ಕ್ರಮಗಳು ಆರಂಭದಿಂದಲೆ ಅವ್ಯವಸ್ಥೆಯ ಆಗರವಾಗಿದೆ.

ಆಹಾರ ಕಿಟ್ ಗಳ ವಿತರಣೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

ಇದೀಗ ಜೋಕಟ್ಟೆಯಲ್ಲಿ ಕೊಳೆತ ಅಕ್ಕಿ ಪತ್ತೆಯಾಗಿರುವುದು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳನ್ನು ಪುಷ್ಟೀಕರಿಸಿದೆ.

ರಾಜ್ಯ ಸರಕಾರ ತಕ್ಷಣ ಕೊಳೆತ ಅಕ್ಕಿ ವಿತರಣೆ ಪ್ರಕರಣವನ್ನು ಉನ್ನತ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!

Published

on

ಮಂಗಳೂರು : ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ(16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರಾದ್ರೂ ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ.  ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಿ ಅವರಿಗೆ ಅಪರೂಪಕ್ಕೆ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಅವರ ಈ ಧಿಡೀರ್ ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

 

 

Continue Reading

LATEST NEWS

ಈ ಬೀಚ್‌ಗಳಿಗೆ ಬಟ್ಟೆ ಧರಿಸಿ ಹೋಗುವಂತಿಲ್ಲ…!

Published

on

ಮಂಗಳೂರು : ಸುಂದರವಾದ ಹಾಗೂ ಪ್ರವಾಸಿಗರನ್ನು ಸೆಳೆಯುವ ಬೀಚ್‌ಗಳು ಯಾವುದು ಅಂತ ಕೇಳಿದ್ರೆ ನಮ್ಮಲ್ಲಿ ನೆನಪಾಗೋದು ಗೋವಾದ ಬೀಚ್‌ಗಳು. ವಿದೇಶಿಯರು ಹೆಚ್ಚಾಗಿ ಬರೋ ಗೋವಾ , ಗೋಕರ್ಣ ಮೊದಲಾ ಬೀಚ್‌ ಹೋದವರಿಗೆ ಅಲ್ಲಿ ಬಿಕಿನಿಯಲ್ಲಿ ಕಾಣಿಸೋ ವಿದೇಶಿ ಮಹಿಳೆಯರು ಗಮನಸೆಳೆಯುತ್ತಾರೆ. ಆದ್ರೆ ಅಂತಹ ಬೀಚ್‌ಗಳ ಸಾಲಿನಲ್ಲಿ ಬರೋ ಕೆಲ ಬೀಚ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಬಟ್ಟೆನೇ ಹಾಕದೆ ತಿರುಗಾಡ್ತಾರೆ. ಇಂತಹ ಬೀಚ್‌ಗಳು ಬತ್ತಲೆ ಬೀಚ್ ಅಂತಾನೇ ಫೇಮಸ್‌. ಅಂತಹ ಬೀಚ್‌ಗಳು ಯಾವುದು ಅನ್ನೋ ಡಿಟೈಲ್ ಇಲ್ಲಿದೆ.

ಸಂಪೂರ್ಣ ಬೆತ್ತಲಾಗಿ ಜನರು  ಸೆಲೆಬ್ರೇಟ್ ಮಾಡೋ ಸಾಕಷ್ಟು ಉತ್ಸವಗಳ ವಿದೇಶಗಳಲ್ಲಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಬೀಚ್‌ಗಳಲ್ಲೂ ಬೆತ್ತಲಾಗಿ ತಿರುಗಾಡೋ ಸಂಸ್ಕೃತಿಯನ್ನು ವಿದೇಶದ ಹಲವು ದೇಶಗಳಲ್ಲಿ ನಾವು ಕಾಣಬಹುದಾಗಿದೆ. ಅಂತಹ ಬೀಚ್‌ಗಳ ಲಿಸ್ಟ್ ಇಲ್ಲಿದೆ.

1. ಲುಕಾಟ್ ಬೀಚ್:

ಇಲ್ಲಿ ಬಟ್ಟೆ ಧರಿಸದೇ ಪೂರ್ಣವಾಗಿ ಬೆತ್ತಲೆ ದೇಹದಿಂದ ಅಲ್ಲಿಯ ಪ್ರಕೃತಿಯನ್ನು ಜನರು ಆನಂದಿಸುತ್ತಾರೆ. ಈ  ಬೀಚ್ ಫ್ರಾನ್ಸ್‌ ದೇಶದಲ್ಲಿದ್ದು ಈ ಬೀಚ್‌ ಹೆಸರು ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಈ ಕಡಲತೀರದಲ್ಲಿ ನಗ್ನತೆಗೆ ಯಾವುದೇ ಮಿತಿ ಇಲ್ಲ. ಇಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು ಮತ್ತು ಯಾರೂ ಯಾರನ್ನೂ ಗಮನಿಸೋದಿಲ್ಲ ಅನ್ನೋದೇ ವಿಶೇಷ.

2. ವಲಾಲ್ಟಾ ಬೀಚ್:

ಕ್ರೊಯೇಷಿಯಾದ ವಲಾಲ್ಟಾ ತುಂಬಾ ಸ್ವಚ್ಛವಾದ ಕಡಲತೀರವಾಗಿದ್ದು,ಈ ಬೀಚ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್ ಅಲ್ಲದೆ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಬಟ್ಟೆ ಇಲ್ಲದೆ ಸಮುದ್ರದಲ್ಲಿ ಮೋಜು ಮಸ್ತಿ ಮಾಡುತ್ತಾರೆ.

3. ಬೆಲ್ಲೆವ್ಯೂ ಬೀಚ್:

ಡೆನ್ಮಾರ್ಕ್‌ನ ಬೆಲ್ಲೆವ್ಯೂ ಬೀಚ್ ಪ್ರಪಂಚದ ಪ್ರಸಿದ್ಧ ಬೆತ್ತಲೆ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಯಾರೂ ಹೇಗೆ ಬೇಕಾದ್ರೂ ಇರಬಹುದು. ಆದರೆ ಅನ್ಯರಿಗೆ ಯಾವುದೇ ತೊಂದರೆ ಮಾಡುವಂತಿಲ್ಲ. ಇಲ್ಲಿಯ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

4. ಕಾರ್ನಿಗ್ಲಿಯಾ ಬೀಚ್:

ಇಟಲಿಯು ಕಾರ್ನಿಗ್ಲಿಯಾ ಬೀಚ್ ಕಡಲತೀರಗಳಿಗೆ ಪ್ರಸಿದ್ಧಿಯಾಗಿದೆ. ಈ ಕಡಲತೀರವನ್ನು ತಲುಪಲು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸ್ನಾನ ಮಾಡುವುದನ್ನು ಕಾಣಬಹುದು.

5. ಕೇಪ್ ಡಿ ಎಗ್ಡೆ ಬೀಚ್:

ಫ್ರಾನ್ಸ್‌ನ ಕ್ಯಾಪ್ ಡಿ’ಆಗ್ಡೆ ಬೀಚ್‌ಗೆ ಬಟ್ಟೆ ಇಲ್ಲದೆ ಹೋಗಬೇಕು. ಬೆತ್ತಲೆಯಾಗಿ ಹೋಗಿ ಅಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ನಿಮ್ಮ ಮೈಮೇಲೆ ಬಟ್ಟೆ ಇದ್ದರೆ ಬೀಚ್ ಗಾರ್ಡ್ ಗಳು ನಿಮ್ಮನ್ನು ತಡೆಯಬಹುದು. ಆದ್ದರಿಂದ ನೀವು ವಿವಸ್ತ್ರಗೊಳ್ಳಬೇಕು.

Continue Reading

LATEST NEWS

ಈ ಶ್ರೀನಿವಾಸನ ವಿಗ್ರಹಕ್ಕೆ ಸೂರ್ಯನ ಕಿರಣಗಳು ಬೀಳುವ ಹಾಗಿಲ್ಲ..!

Published

on

ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪನಿಗೆ ಇರೋವಷ್ಟು ಭಕ್ತರು ಬಹುಶಃ ಯಾವ ದೇವರಿಗೂ ಇಲ್ಲ ಅಂತಾನೇ ಹೇಳಬಹುದು . ಇದೇ ಕಾರಣದಿಂದ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಆದ್ರೆ ಈ ದೇವಸ್ಥಾನದಲ್ಲಿರೋ ಅದೊಂದು ರಹಸ್ಯ ಮಾತ್ರ ದೇವಸ್ಥಾನಕ್ಕೆ ಬೇಟಿ ನೀಡೋ ಬಹುತೇಕ ಭಕ್ತರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಭಕ್ತರು ಕಾಣುವ ಶ್ರೀನಿವಾಸ ಮಂದಸ್ಮಿತನಾಗಿದ್ದರೆ, ಗರ್ಭಗುಡಿಯಲ್ಲಿರೋ ಶ್ರೀನಿವಾಸ ಕೋಪಿಷ್ಠನಾಗಿದ್ದು, ಹುಬ್ಬುಗಳನ್ನು ಗಂಟು ಹಾಕಿಕೊಂಡಿದ್ದಾನೆ. ವರ್ಷಕ್ಕೊಂದು ಬಾರಿ ಮಾತ್ರ ಹೊರ ಬರುವ ಈತನ ಮೇಲೆ ಸೂರ್ಯ ರಶ್ಮಿ ಬಿದ್ರೆ ಜಗತ್ತಿಗೆ ಅಪಾಯ ಇದೆ ಅಂತಾರೆ.

ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಈ ಉತ್ಸವ ಮೂರ್ತಿಯನ್ನು ವರ್ಷಕ್ಕೊಂದು ಬಾರಿ ಮಾತ್ರ ಆಚೆ ತರಲಾಗುತ್ತದೆ. ಸೂರ್ಯೋದಯಕ್ಕೂ ಮೊದಲೇ ಆಚೆ ತಂದು ಹಲವು ದೃವ್ಯಗಳಿಂದ ಶುದ್ದೀಕರಣ ಮಾಡಲಾಗುತ್ತದೆ. ಹಾಲು ಮೊಸರು ತುಪ್ಪ ಅರಶಿನ ಮೊದಲಾದವುಗಳಿಂದ ದೇವರ ವಿಗ್ರಹವನ್ನು ಶುದ್ಧೀಕರಣ ಮಾಡಲಾಗುತ್ತದೆ. ಕೈಕಿಷ ದ್ವಾದಶಿ ದಿನದಂದು ಈ ಪ್ರಕ್ರಿಯೆ ನಡೆಯುವುದು ವಾಡಿಕೆಯಾಗಿದ್ದು, ಸೂರ್ಯನ ಕಿರಣ ಭೂಮಿಯನ್ನು ತಲುಪುವ ಮೊದಲು ಎಲ್ಲಾ ವಿದಿವಿಧಾನಗಳು ಪೂರ್ಣಗೊಂಡು ಮೂರ್ತಿಗಳು ಮತ್ತೆ ಗರ್ಭಗುಡಿ ಸೇರುತ್ತದೆ. ವಿಶೇಷ ಅಂದ್ರೆ ಕೇವಲ ಶ್ರೀನಿವಾಸ ಮಾತ್ರವಲ್ಲದೆ ಆತನ ಅಕ್ಕಪಕ್ಕದಲ್ಲಿರುವ ಶ್ರೀದೇವಿ ಹಾಗೂ ಭೂ ದೇವಿಯ ಮುಖಭಾವ ಕೂಡಾ ಶ್ರೀನಿವಾಸನಂತೆ ಮುಖಭಾವದಂತೆ ಕೋಪದಲ್ಲಿದೆ.

ತಿರುಪತಿ ತಿಮ್ಮಪ್ಪನ ಗರ್ಭಗುಡಿಯಲ್ಲಿ ಇರುವ ಶ್ರೀನಿವಾಸನ ಈ ಉತ್ಸವ ಮೂರ್ತಿಯ ಹೆಸರು ವೆಂಟತುರೈವಾರ್. ತಿರುಪತಿಯಲ್ಲಿ ಭಕ್ತರು ಕಾಣವು ಶ್ರೀನಿವಾಸ ವಿಗ್ರಹ ಹೊರತು ಪಡಿಸಿದ್ರೆ ಇಲ್ಲಿರೋ ಅತ್ಯಂತ ಪುರಾತನ ವಿಗ್ರಹ ಇದಾಗಿದೆ. ಸರಿ ಸುಮಾರು 14 ನೇ ಶತಮಾನದ ವರೆಗೂ ಬ್ರಹ್ಮೋತ್ಸವದಲ್ಲಿ ಇದೇ ಮೂರ್ತಿಯನ್ನು ಹೊತ್ತೊಯ್ಯಲಾಗುತ್ತಿತ್ತು. ಆದ್ರೆ ಆ ಕಾಲದಲ್ಲಿ ನಡೆದಿದ್ದ ಒಂದು ಘಟನೆಯಿಂದ ಈ ವಿಗ್ರಹವನ್ನು ಬ್ರಹ್ಮೋತ್ಸವದಲ್ಲಿ ತರುವುದನ್ನು ನಿಲ್ಲಿಸಲಾಯಿತು.

14 ನೇ ಶತಮಾನದಲ್ಲಿ ನಡೆದಿದ್ದ ಬ್ರಹ್ಮೋತ್ಸವದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಹಲವಾರು ಮನೆಗಳು ಸುಟ್ಟು ಬಸ್ಮವಾಗಿತ್ತಂತೆ. ಈ ವೇಳೆ ಭಕ್ತನೊಬ್ಬನಿಗೆ ಅಶರೀರವಾಣಿಯೊಂದು ಕೇಳಿಸಿದ್ದು, ಅದು ಶ್ರೀನಿವಾಸ ದೇವರದ್ದೇ ಎನ್ನಲಾಗಿದೆ. ಆ ಅಶರೀರವಾಣಿಯಲ್ಲಿ ಕೋಪದಲ್ಲಿ  ಉಗ್ರ ಸ್ವರೂಪಿಯಾಗಿ ಕಾಣಿಸುವ ಈ ಶ್ರೀನಿವಾಸ ವಿಗ್ರಹವನ್ನು ಬೆಳಕಿನ ಆಚೆಗೆ ತರದಂತೆ ಎಚ್ಚರಿಕೆ ನೀಡಲಾಗಿತ್ತಂತೆ. ಇನ್ನು ಮುಂದೆ ಸೂರ್ಯನ ಬೆಳಕು ಈ ವಿಗ್ರಹದ ಮೇಲೆ ಬಿದ್ದರೆ ಇಡೀ ಪ್ರಪಂಚಕ್ಕೆ ಬೆಂಕಿ ಹತ್ತಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿತ್ತಂತೆ. ಅಂದಿನಿಂದ ಈ ಉಗ್ರ ಸ್ವರೂಪಿ ಶ್ರೀನಿವಾಸನನ್ನು ಸೂರ್ಯನ ಬೆಳಕಿಗೆ ಆಚೆ ತರೋದು ನಿಲ್ಲಿಸಲಾಗಿದೆ. ವರ್ಷಕ್ಕೊಂದು ಬಾರಿ ಶುಚಿ ಮಾಡಲು ಹೊರತಂದ್ರೂ ಸೂರ್ಯೋದಯದ ಮೊದಲೇ ಶುಚಿಗೊಳಿಸಿ ಗರ್ಭಗುಡಿ ಸೇರಿಸಲಾಗುತ್ತದೆ.

Continue Reading

LATEST NEWS

Trending