Thursday, December 2, 2021

ವರದಕ್ಷಿಣೆ ಕಿರುಕುಳ: ಸೊಸೆಗೆ ಕಿರುಕುಳ ನೀಡಿದ ಗಂಡ ಹಾಗೂ ಕುಟುಂಬಸ್ಥರು-ಮೂವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಮದುವೆ ಸಮಯದಲ್ಲಿ ವರದಕ್ಷಿಣೆ ನೀಡಿಲ್ಲ ಎಂದು ಸೊಸೆಗೆ ದೈಹಿಕ-ಮಾನಸಿಕ ಹಿಂಸೆ ನೀಡಿ, ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾರಿ ಗಂಡ,

ಮಾವ ಹಾಗೂ ಅತ್ತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡ ನವೀನ್‌ (34), ಅತ್ತೆ ಸೌಭಾಗ್ಯಮ್ಮ (68), ಮಾವ ಲಕ್ಷ್ಮೀನಾರಾಯಣ (75) ಎಂದು ಗುರುತಿಸಲಾಗಿದೆ.


ಘಟನೆ ಹಿನ್ನೆಲೆ
ಉಡುಪಿ ಮೂಲದ ಯುವತಿಯೊಬ್ಬಳನ್ನು ಬೆಂಗಳೂರು ಮೂಲದ ನವೀನ್‌ 2019ರಲ್ಲಿ ಮದುವೆಯಾಗಿದ್ದನು. ಮದುವೆಯಾದ 3 ತಿಂಗಳು ದಂಪತಿ ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡಿದ್ದರು.

ಇದಾದ ನಂತರ ಮದುವೆಯ ಸಮಯದಲ್ಲಿ ಚಿನ್ನ ಹಾಗೂ ವರದಕ್ಷಿಣೆ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ನೆಪ ಒಡ್ಡಿ ಸೊಸೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡಲು ಪ್ರಾರಂಭಿಸಿದ್ದರು.

ಮದುವೆ ಖರ್ಚನ್ನು ಸೊಸೆಯ ಮನೆಯವರು ಭರಿಸಿದ್ದರೂ, ಆರೋಪಿಗಳು ಮತ್ತೆ 250 ಗ್ರಾಂ ಚಿನ್ನ ಮತ್ತು ವರದಕ್ಷಿಣೆ ಕೊಡಬೇಕೆಂದು
ಸೊಸೆಯ ಕೈಯಿಂದ ಮನೆಯ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಗಂಡ ಹಾಗೂ ಆತನ ಮನೆಯವರು ನೀಡಿದ ಮಾನಸಿಕ-ದೈಹಿಕ ಹಿಂಸೆಯಿಂದ ಬಳಲಿದ ಸೊಸೆ ಬೆನ್ನು ಹಾಗೂ ಸೊಂಟ ನೋವಿನಿಂದ ಬಳಲಿದ್ದರು.

ಇದರಿಂದ ಆಕೆಗೆ ಕೆಲಸ ಮಾಡಲು ಸಾಧ್ಯವಾಗದಿರುವುದನ್ನು ಗಮನಿಸಿದ ಗಂಡನ ಕುಟುಂಬಸ್ಥರು ಜು.3 ರಂದು ಸೊಸೆ ಮತ್ತು ಆಕೆಯ ಮಗುವನ್ನು ಹೊರಹಾಕಿದ್ದರು. ಆಗ ಸೊಸೆ ಮಗವಿನೊಂದಿಗೆ ತನ್ನ ತವರು ಮನೆಗೆ ತೆರಳಿದ್ದಳು.
ಇದಾದ ನಂತರ ಅಂದರೆ ಅ. 24ರಂದು ಸೊಸೆ ರಾಜಿ ಸಂಧಾನಕ್ಕಾಗಿ ಗಂಡನ ಮನೆಗೆ ತನ್ನ ತಂದೆಯೊಂದಿಗೆ ತೆರಳಿದಾಗ ಸೊಸೆ ಮತ್ತು ಆಕೆಯ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರ ಹಾಕಿದ್ದಾರೆ.
ನ. 21 ರಂದು ಸಂಜೆ 6:00 ಗಂಟೆಗೆ ಸೊಸೆಯ ತವರು ಮನೆಗೆ ಬಂದ ಗಂಡ ಹಾಗೂ ಆತನ ಕುಟುಂಬಸ್ಥರು ಸೊಸೆಗೆ ಆಕೆಯ ತಂದೆ ತಾಯಿ ಎದುರೇ ಹೊಡೆದು ಆಕೆಯ ಕೈಯಲ್ಲಿದ್ದ ಮಗುವನ್ನು ಬಲತ್ಕಾರವಾಗಿ ಎಳೆದುಕೊಂಡಿದ್ದಾರೆ.

ನಂತರ ನೀನು ವರದಕ್ಷಿಣೆ ತರದೇ ಮನೆಗೆ ಬರುವುದು ಬೇಡ ಎಂದು ಬೆದರಿಸಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...