ವಾಷಿಂಗ್ಟನ್: ಭಾರತ ಕೊರೊನಾದಿಂದ ನಲುಗಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ಭುಜಕ್ಕೆ ಭುಜ ಕೊಟ್ಟು ಸಹಕಾರ ನೀಡುವುದಾಗಿ ಘೋಷಿಸಿದೆ.ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಆಡಳಿತ ವರ್ಗಕ್ಕೆ ಭಾರತಕ್ಕೆ ಅವಶ್ಯವಿರುವ ಎಲ್ಲಾ ನೆರವು ನೀಡುವಂತೆ ಆದೇಶ ನೀಡಿದ್ದಾರೆ. ಎಂದು ಆ ದೇಶದ ಇಬ್ಬರು ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಉತ್ಪಾದನೆಗೆ ಅವಶ್ಯವಿರುವ ಕಚ್ಚಾವಸ್ತುಗಳು, ಮಾಸ್ಕ್ , ಆಕ್ಸಿಜನ್ ಸಿಲಿಂಡರ್‍ಗಳು ಸೇರಿದಂತೆ ಅಗತ್ಯ ಪರಿಕರಗಳನ್ನು ಭಾರತಕ್ಕೆ ರವಾನಿಸುವ ಮುನ್ನ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಅಮೆರಿಕಾ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ಬೈಡೆನ್ ಆಡಳಿತದ ಏಷ್ಯಾ ನೀತಿ ನಿಯಮಗಳ ರೂವಾರಿಯಾಗಿರುವ ಕರ್ಟ್ ಕ್ಯಾಂಪ್‍ಬೆಲ್ ಅವರು ಭಾರತದ ನೆರವಿಗೆ ಸನ್ನದ್ಧರಾಗಿರುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.