Home ಕರ್ನಾಟಕ ವಾರ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೊಳ್ಳಿ ಇಟ್ಟ ಕಿಲ್ಲರ್ ಕೊರೊನಾ: ಇಂದು ಆರು ಮಂದಿಗೆ ಸೋಂಕು ಪತ್ತೆ.!!

ದಕ್ಷಿಣ ಕನ್ನಡ ಜಿಲ್ಲೆಗೆ ಕೊಳ್ಳಿ ಇಟ್ಟ ಕಿಲ್ಲರ್ ಕೊರೊನಾ: ಇಂದು ಆರು ಮಂದಿಗೆ ಸೋಂಕು ಪತ್ತೆ.!!

ದಕ್ಷಿಣ ಕನ್ನಡ ಜಿಲ್ಲೆಗೆ ಕೊಳ್ಳಿ ಇಟ್ಟ ಕಿಲ್ಲರ್ ಕೊರೊನಾ: ಇಂದು ಆರು ಮಂದಿಗೆ ಸೋಂಕು ಪತ್ತೆ.!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವವಾಡುತ್ತಿದ್ದು, ಇಂದು ಮತ್ತೆ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಮೇ 18 ರಂದು ದುಬೈನಿಂದ ಬಂದಿದ್ದ 178 ಮಂದಿಯಲ್ಲಿ‌ 6 ಮಂದಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಗೆ ದುಬೈ ಕಂಟಕವಾಗಿದೆ.

ಸದ್ಯ 6 ಮಂದಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸೋಂಕಿತರ ಪೈಕಿ‌ 5 ಮಂದಿ ದಕ್ಷಿಣ ಕನ್ನಡ ಮೂಲದವರಾಗಿದ್ದು, ಒರ್ವ ಕಲಬುರ್ಗಿ ನಿವಾಸಿಯಾಗಿದ್ದಾರೆ.

ದುಬೈನಿಂದ ಬಂದ ಮೊದಲ ವಿಮಾನದಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದೀಗ ಎರಡನೇ ವಿಮಾನದಲ್ಲಿ ಬಂದ 6 ಮಂದಿಗೆ ಸೋಂಕು ಪತ್ತೆಯಾಗಿದೆ.

ಇನ್ನು ರಾಜ್ಯದಲ್ಲಿ ಕೊರೊನಾ ಮತ್ತೆ ಅಬ್ಬರಿಸಿದ್ದು, ಇಂದು ಒಂದೇ ದಿನ 116 ಸೋಂಕು ಪ್ರಕರಣಗಳು ಕಂಡು ಬಂದಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 6 ಪ್ರಕರಣಗಳು ಪತ್ತೆಯಾಗಿದ್ದು, ಇನ್ನುಳಿದಂತೆ ಶಿವಮೊಗ್ಗ 6, ವಿಜಯಪುರ 1, ಹಾಸನ 13, ದಕ್ಷಿಣ ಕನ್ನಡ 6,

ಉಡುಪಿ 25, ಮೈಸೂರು 1, ಬಳ್ಳಾರಿ 11, ಗದಗ 2, ಉತ್ತರ ಕನ್ನಡ 9, ಬೆಳಗಾವಿ 5, ಧಾರವಾಡ 5, ತುಮಕೂರು 1, ದಾವಣಗೆರೆ 3, ಚಿಕ್ಕಬಳ್ಳಾಪುರ 2,

ಮಂಡ್ಯದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಗಮನಾರ್ಹ ಸಂಗತಿಯೆಂದರೆ ಮುಂಬೈನಿಂದ ಮಂಡ್ಯಕ್ಕೆ ಆಗಮಿಸಿದವರೇ ಸೋಂಕು ಪೀಡಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಲಾಕ್‌ ಡೌನ್‌ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂಬ ಕಳವಳಕ್ಕೆ ಕಾರಣವಾಗಿದೆ.

ಈಗಾಗಲೇ ಬಿಎಂಟಿಸಿ, ಕೆ.ಎಸ್.‌ಆರ್.‌ಟಿ.ಸಿ. ಹಾಗೂ ಖಾಸಗಿ ಬಸ್‌ ಸಂಚಾರದ ಜೊತೆಗೆ ಟ್ಯಾಕ್ಸಿ-ಆಟೋ ಸಂಚಾರಕ್ಕೂ ಅನುಮತಿ ನೀಡಲಾಗಿದೆ.

ಆದರೆ ಸಾಮಾಜಿಕ ಅಂತರ ಸೇರಿದಂತೆ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಕೆಲವರು ಸರಿಯಾಗಿ ಪಾಲಿಸುತ್ತಿಲ್ಲವೆಂಬ ಸಂಗತಿ ಬಹಿರಂಗವಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

- Advertisment -

RECENT NEWS

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು 

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರದ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಹಾಗೂ ಕೋಟ ಸಮುದಾಯ ಆಸ್ಪತ್ರೆಯನ್ನು ತಾಲೂಕು...

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...