ದುಬೈ: ‘ತುಳು ಪಾತೆರ್ಗ ತುಳು ಒರಿಪಾಗ’ ಯುಎಇ, ದುಬೈ ಇದರ 10 ನೇ ವರ್ಷದ ಗೌಜಿ ಗಮ್ಮತ್ತು ತುಳುನಾಡ ಗೊಬ್ಬುಳೆದ ಲೇಸ್ ಮಾ. 12 ರಂದು ದುಬೈನ ಕರಾಮದ ಜಬೀಲ್ ಪಾರ್ಕ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಗೋಪಿ ಅಂಚನ್ ಕುಲಶೇಖರ, ಯಶೋಧ, ಕಿರಣ್ ಕೈೂಕುಡೆ ಇವರು ಭತ್ತವನ್ನು ತುಂಬಿಸಿದ ಕಳಸೆಯಲ್ಲಿ ನೆಟ್ಟಾಂತಹ ಕಲ್ಪವೃಕ್ಷದ ಕೊಂಬೆಯನ್ನು ಅರಳಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ದುಬೈ ಉದ್ಯಮಿಗಳಾದ ಅಜ್ಮಲ್ ದುಬೈ, ಪ್ರಭಾಕರ ಶೆಟ್ಟಿ, ನೊವೆಲ್ ಅಲ್ಮಡ, ಸತೀಶ್ ಉಳ್ಳಾಲ, ಸಂದೀಪ್ ಕೋಟ್ಯಾನ್, ಅಶೋಕ್ ಬೈಲೂರು, ಡೋನಿ ಕೊರೆಯ, ಆಶಾ ಕೊರೆಯ ಉಪಸ್ಥಿತರಿದ್ದರು.
ತುಳುನಾಡಿನ ಸಂಪ್ರದಾಯದಂತೆ ಬಂದತಹ ಅತಿಥಿಗಳನ್ನು ಬೆಲ್ಲ ಮತ್ತು ನೀರು ಹಾಗೂ ತಾಂಬುಲ ಕೊಟ್ಟು ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
ದುಬೈಯ ಖ್ಯಾತ ಯಕ್ಷಗಾನ ಕಲಾವಿದರು ಯಕ್ಷಗುರುಗಳು ಆದ ಶ್ರೀಯುತ ಕಿಶೋರ್ ಗಟ್ಟಿ ಹಾಗೂ ತುಳು ಪಾತೆರ್ಗ ತುಳು ಒರಿಪಾಗ ಕೂಟದ ಸ್ಥಾಪಕ ಸದಸ್ಯ, ತುಳು ಭಾಷಾ ಪ್ರೇಮಿ ಕಿರಣ್ ತುಳುವ ಕೈೂಕುಡೆ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ, ಅಪ್ಪೆ ಭಾಷೆ ತುಳುವ ತುಡರ್ ಎಂಬ ಬಿರುದು ಕೊಟ್ಟು ಸನ್ಮಾನಿಸಲಾಯಿತು.
ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ 10 ಜನ ಸಾಧಕರುಗಳಾದ ಪ್ರಭಾಕರ್ ಶೆಟ್ಟಿ, ಬಾಲಕೃಷ್ಣ ಸಾಲಿಯಾನ್, ಜಯಂತ್ ಶೆಟ್ಟಿ, ಎಂ ಇ ಮೂಳೂರು, ಹರೀಶ್ ಬಂಗೇರ, ಇರ್ಷಾದ್ ಮೂಡಬಿದ್ರೆ, ಮರಿನ ನೊರ್ಮ ಮೇನೆಜೇಶ್, ಅಶೋಕ್ ಬೈಲೂರು,
ಡೋನಿ ಮತ್ತು ಆಶಾ ಕೊರೆಯಾ, ಜಷ್ಮಿತ ವಿವೇಕ್ ಇವರನ್ನು ಶಾಲು ಹೊದಿಸಿ ಸನ್ಮಾನಪತ್ರ ನೀಡಿ ಸನ್ಮಾನಿಸಲಾಯಿತು. ತಂಡದ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಅಂಚನ್ ಕುಲಶೇಖರ ಇವರಿಗೆ ಶಾಲು ಹೊದಿಸಿ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.
20 ವರ್ಷಗಳ ಕಾಲ ದುಬೈಯಲ್ಲಿ ನೆಲೆಸಿ ಹೆಚ್ಚಿನ ತುಳು, ಕನ್ನಡ ಸಂಘಟನೆಗಳ ಹುಟ್ಟಿಗೆ ಕಾರಣವಾದ ದಿ. ಉಮೇಶ್ ನಂತೂರು ಇವರಿಗೆ ಮರಣದನಂತರದ ನೆನಪಿನ ಒಲೆಯನ್ನು ಅವರನ್ನು ಸ್ಮರಿಸುವ ಸಲುವಾಗಿ ಅವರ ಮಗನಾದ ಅಮರ್ ನಂತೂರು ಇವರಿಗೆ ನೀಡಲಾಯಿತು.
ತುಳುನಾಡಿನ ಆಟಗಳದ ಲಗೋರಿ, ಕಬ್ಬಡಿ, ಹಗ್ಗಜಗ್ಗಾಟ, ಸೈಕಲ್ ಚಕ್ರ ಓಡಿಸುವುದು, ರಸಪ್ರಶ್ನೆ, ಹಾಸ್ಯ ಪ್ರಹಸನ , ಗೋಣಿ ಚೀಲ ಓಟ, ತೆಂಗಿನ ಕಾಯಿಯ ಅಂಕ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.
ಚೆನ್ನೆದ ಮನೆ ಆಟ ಆಡುವ ಮೂಲಕ ಡೋನಿ ಕೊರೆಯ ಮತ್ತು ಆಶಾ ಕೊರೆಯರವರು ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು. ಕುಡ್ಲ, ಬಾರ್ಕೂರು, ಪುತ್ತೂರು, ಉಡುಪಿ ಎಂಬ ಹೆಸರಿನ 4 ತಂಡ ವಿಂಗಡಿಸಿ ಆಡಿಸಲಾಯಿತು. ನೊವೆಲ್ ಡಿ ಆಲ್ಮಡ, ಅಮರ್ ನಂತೂರು, ಶೋಭಿತ ಪ್ರೇಮ್ ಜಿತ್, ಅಶ್ವಿನಿ ಸತೀಶ್,ಜಸ್ಮಿತ ವಿವೇಕ್ ಆಟಗಳನ್ನು ಅಚ್ಚುಗಟ್ಟಾಗಿ ನಿರ್ವಹಿಸಿದರು.
ಮದ್ಯಹ್ನ ಊಟಕ್ಕೆ ತುಳುನಾಡಿನ ಕುಚಲಕ್ಕಿ ಗಂಜಿ, ಕಡ್ಲೆ ಬಲಿಯಾರ್, ಹುರುಳಿ ಚಟ್ನಿ, ಒಣ ಮೀನು, ಮಾವಿನ ಕಾಯಿ ತಲ್ಲಿ, ಪಾಯಸ ಖಾದ್ಯಗಳನ್ನು ಊರಿನಿಂದ ತರಿಸಿದ್ದ ಅಡಿಕೆ ಹಾಳೆಯ ಬಟ್ಟಲಿನಲ್ಲಿ ಬಡಿಸುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಸಹಾಯ ನಿಧಿಯನ್ನು ಸಮರ್ಪಿಸಲಾಯಿತು. ಆಟಗಳನ್ನು ಆಡಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗುರುತಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಪ್ರೇಮ್ ಜಿತ್ ಇವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಿತೇಶ್ ಅಂಚನ್ ಕುಲಶೇಖರ್ ನಿರ್ವಹಿಸಿ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.